Friday, 13th December 2024

ಇತಿಹಾಸ ನಿರ್ಮಿಸಿದ ಡೇವಿಡ್ ವಾರ್ನರ್

ಮೇಲ್ಬನ್‌: ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಎಂಸಿಜಿ ಅಂಗಳದಲ್ಲಿ ದ್ವಿಶತಕ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿ ದರು.

100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಡೇವಿಡ್ ವಾರ್ನರ್ ಮೊದಲನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.  100ನೇ ಪಂದ್ಯ ದಲ್ಲಿ 200 ರನ್ ಗಳಿಸಿದ ಮೊದಲ ಆಸ್ಟ್ರೇಲಿಯಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಈ ಮೊದಲು ಇಂಗ್ಲೆಂಡ್‌ನ ಜೋ ರೂಟ್ ಮಾತ್ರ ತಮ್ಮ 100ನೇ ಟೆಸ್ಟ್‌ನಲ್ಲಿ 200 ರನ್ ಗಳಿಸಿದ ಸಾಧನೆ ಮಾಡಿದ್ದರು.

ಫಾರ್ಮ್‌ಗೆ ಮರಳಲು ಪ್ರಯತ್ನ ಪಡುತ್ತಿದ್ದ ಡೇವಿಡ್ ವಾರ್ನರ್ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ದ್ವಿಶತಕದ ಸಾಧನೆ ಮಾಡುವ ಮೂಲಕ ಸ್ಮರಣೀಯ ಇನ್ನಿಂಗ್ಸ್ ಆಗಿಸಿದರು.

ದ್ವಿಶತಕ ಗಳಿಸಿದ ಸಾಧನೆ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 8000 ರನ್‌ ಪೂರೈಸಿದ ಸಾಧನೆ ಮಾಡಿದರು. ಆಸ್ಟ್ರೇಲಿಯಾ ಪರವಾಗಿ 8 ಸಾವಿರ ರನ್ ಪೂರೈಸಿದ 8ನೇ ಆಟಗಾರ ಎನಿಸಿ ಕೊಂಡಿದ್ದಾರೆ. 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಾರ್ನರ್, 100ನೇ ಟೆಸ್ಟ್ ಪಂದ್ಯದಲ್ಲಿ 8000 ರನ್‌ಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 25 ಶತಕಗಳನ್ನು ಗಳಿಸಿದ್ದು, 3 ದ್ವಿಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

ಶತಕವನ್ನು ಪೂರೈಸಿದ ನಂತರ ಅವರು ಕಾಲು ನೋವಿನಿಂದ ಬಳಲಿದರು. 200 ರನ್ ಗಳಿಸುತ್ತಿದ್ದಂತೆ ರಿಟೈರ್ಡ್ ಹರ್ಟ್ ಆದ ವಾರ್ನರ್, ವಿಶ್ರಾಂತಿ ಪಡೆಯಲು ಪೆವಿಲಿಯನ್‌ಗೆ ತೆರಳಿದರು.

Read E-Paper click here