*ಸತತ ಎರಡನೇ ಪಂದ್ಯ ಸೋತ ಧೋನಿ ಪಡೆ
*ಚೆನ್ನೆöÊಗೆ ಇದು ಮೂರನೇ ಭಾರಿ ಅಂತರದ ಸೋಲಾಗಿದೆ.
2013ರಲ್ಲಿ ಮುಂಬೈ ಎದುರು 60 ರನ್ನುಗಳಿಂದ ಸೋಲುಂಡಿದೆ.
*ಪರ್ಪಲ್ ಕ್ಯಾಪ್ – ಕಗಿಸೋ ರಬಾಡಾ
ದುಬೈ: ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದರೂ, ಪಂದ್ಯ ಗೆಲ್ಲಲಾಗಲಿಲ್ಲ. ಪರಿಣಾಮ, ಈ 13ನೇ ಐಪಿಎಲ್‌ನಲ್ಲಿ ಸತತ ಎರಡನೇ ಸೋಲು ಕಂಡಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್’ಗೆ ಆರಂಭಿಕರಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಉತ್ತಮ ಹಾಗೂ ಐಪಿಎಲ್ ಇತಿಹಾಸದಲ್ಲೇ ಡೆಲ್ಲಿಗೆ ದೀರ್ಘ ಜತೆಯಾಟದ ನೀಡಿದರು. ಭರ್ತಿ 94 ರನ್ ಸೇರಿಸಿ ಸ್ಪಿನ್ನರ್ ಪಿಯೂಶ್ ಚಾವ್ಲಾಗೆ ಔಟಾದರು. ಆರಂಭಿಕರಿಬ್ಬರನ್ನು ಚಾವ್ಲಾ ಔಟ್ ಮಾಡಿದರು. ಬಳಿಕ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ತಂಡ ಸವಾಲಿನ ಮೊತ್ತ ಪೇರಿಸಲು ಕಾರಣರಾದರು. ಡೆಲ್ಲಿ ಪರ ಎರಡೇ ಸಿಕ್ಸರ್ ಹೊರಹೊಮ್ಮಿತ್ತು. ಚೆನ್ನೆöÊ ಪರ ಪಿಯೂಷ್ ಚಾವ್ಲಾ ಎರಡು ವಿಕೆಟ್ ಕಿತ್ತರು.
ಈ ಬಾರಿ ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದ ಚೆನ್ನೆöÊಗೆ ಇಲ್ಲೂ ಮಂಕಾಯಿತು. ಆರಂಭಿಕರಿಬ್ಬರು ವೈಯಕ್ತಿಕವಾಗಿ 20 ದಾಟದೇ ಪೆವಿಲಿಯನ್ ಸೇರಿಕೊಂಡರು. ವನ್ ಡೌನ್ ಆಟಗಾರ ಫಾಫ್ ಡು ಪ್ಲೆಸಿಸ್ ಅವರದ್ದು ವನ್ ಮ್ಯಾನ್ ಶೋ. ಯಾರ ಸಮರ್ಥ ಬೆಂಬಲವೂ ದೊರೆಯಲಿಲ್ಲ. ನಂತರದ ಗರಿಷ್ಠ ರನ್ ಆಲ್ರೌಂಡರ್ ಕೇದಾರ್ ಜಾಧವ್‌ರದ್ದು (26).
ವೇಗಿ ಕಗಿಸೋ ರಬಾಡಾ ಮೂರು, ಎನ್ರಿಚ್ ಎರಡು ವಿಕೆಟ್ ಕಿತ್ತರು. ಒಟ್ಟಿನಲ್ಲಿ ಚೆನ್ನೆöÊ, ಡೆಲ್ಲಿ ಎದುರು 44 ರನ್ನುಗಳಿಂದ ಮಂಡಿಯೂರಿತು. ಇತ್ತೀಚಿನ ಮೂಲಗಳ ಪ್ರಕಾರ, ಚೆನ್ನೆöÊ ತಂಡಕ್ಕೆ ಆಂಬಟಿ ರಾಯುಡು ಮರಳಿ ತಂಡವನ್ನು ಕೂಡಿಕೊಳ್ಳ ಲಿದ್ದಾರೆ.
ಸ್ಕೋರ್ ವಿವರ
ಡೆಲ್ಲಿ ಕ್ಯಾಪಿಟಲ್ಸ್ 175/3
ಪೃಥ್ವಿ ಶಾ 64, ಶಿಖರ್ ಧವನ್ 35, ರಿಷಬ್ 37 ಅಜೇಯ.
ಬೌಲಿಂಗ್: ಪಿಯೂಶ್ ಚಾವ್ಲಾ 33/2
ಚೆನ್ನೆöÊ ಸೂಪರ್ ಕಿಂಗ್ಸ್ 131/7
ಫಾಫ್ ಡು ಪ್ಲೆಸಿಸ್ 43, ಕೇದಾರ್ ಜಾಧವ್ 26.
ಬೌಲಿಂಗ್: ಕಗಿಸೋ ರಬಾಡಾ 26/3, ಎನ್ರಿಚ್ 21/2.
ಪಂದ್ಯಶ್ರೇಷ್ಠ: ಪೃಥ್ವಿ ಶಾ