ದುಬಾಯಿ: ಕೊನೆಕ್ಷಣದವರೆಗೂ ತಂಡದ ಗೆಲುವಿಗಾಗಿ ಹೋರಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ಸ್ಫೋಟಕ ಆಟ ಕಿಂಗ್ಸ್ ಎಲೆವೆನ್ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಇಪ್ಪತ್ತನೇ ಓವರಿನ ಕೊನೆಯ ಎರಡು ಎಸೆತಗಳಲ್ಲಿ ಮಯಾಂಕ್ ಹಾಗೂ ಜೋರ್ಡಾನ್ ವಿಕೆಟ್ ಕಳೆದುಕೊಂಡಿದ್ದು, ಉಭಯ ತಂಡಗಳ ಸ್ಕೋರ್ ಸಮನಾಯಿತು. ಸೂಪರ್ ಓವರಿನಲ್ಲಿ ಡೆಲ್ಲಿ ತಂಡ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು.
ಇಂಡಿಯನ್ ಪ್ರೀಮಿಯರ್ ಲೀಗ್‌ನ 13ನೇ ಅವತರಣಿಕೆಯಲ್ಲಿ ಭಾನುವಾರದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿರುವ 158 ರನ್ನುಗಳ ಗೆಲುವಿನ ಗುರಿಯನ್ನು ತಲುಪಲು ಕಿಂಗ್ಸ್ ಎಲೆವೆನ್ ಶತಾಯ ಗತಾಯ ಯತ್ನ ನಡೆಸಿತು. ಲಗುಬಗನೆ ಆರು ವಿಕೆಟ್ ಕಳೆದುಕೊಂಡು ದುಃಸ್ಥಿತಿಯಲ್ಲಿದ್ದ ಕಿಂಗ್ಸ್ ತಂಡಕ್ಕೆ ಕ್ರಿಸ್ ಜೋರ್ಡಾನ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಆಸರೆಯಾಗಿದ್ದರು. ಅಗರ್ವಾಲ್ ೮೯ ರನ್ ಗಳಿಸಿ ಓಟಾಗಿದ್ದು, ತಂಡದ ಗೆಲುವಿನ ಆಸೆ ಕಮರುವಂತೆ ಮಾಡಿತು. ಇದಕ್ಕೂ ಮುನ್ನ, ಟಾಸ್ ಗೆದ್ದ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡ ಫೀಲ್ಡಿಂಗ್ ಆರಿಸಿಕೊಂಡಿತು. ಇದಕ್ಕೆ ತಕ್ಕ ಪ್ರತಿಫಲವನ್ನು ಪಡೆಯಿತು. ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ (39), ವಿಕೆಟ್ ಕೀಪರ್ ರಿಷಬ್ ಪಂತ್ (31)ಹಾಗೂ ಆಲ್ರೌಂಡರ್ ಮಾರ್ಕಸ್ ಸ್ಟಾಯಿನಿಸ್ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದಂತೆ 53 ರನ್ ಬಾರಿಸಿದ್ದು, ಎದುರಾಳಿ ವಿರುದ್ದ ಸವಾಲಿನ ಮೊತ್ತ ಪೇರಿಸಲು ನೆರವಾಯಿತು. ಕಿಂಗ್ಸ್ ಪಂಜಾಬ್ ಪರ ಮೊಹಮ್ಮದ್ ಶಮಿ ಮೂರು ಹಾಗೂ ಕಾಟ್ರೆಲ್ ಎರಡು ವಿಕೆಟ್ ಕಿತ್ತರು.
ಸೂಪರ್ ಓವರಿನಲ್ಲಿ ಅತೀ ಕಡಿಮೆ ರನ್
ಸೂಪರ್ ಓವರಿನಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡ ಎರಡು ರನ್ನುಗಳ ಅತೀ ಕಡಿಮೆ ದಾಖಲಿಸಿತು. ಇದಕ್ಕೂ ಮೊದಲು 2015 ರಲ್ಲಿ ಮಿಚೆಲ್ ಜಾನ್ಶನ್ ಹಾಗೂ 2017 ರಲ್ಲಿ ಜಸ್ಪಿçÃತ್ ಬೂಮ್ರಾ ಗಳಿಸಿದ್ದರು.