Saturday, 5th October 2024

ದೇವದತ್-ಕೊಹ್ಲಿ ಭರ್ಜರಿ ಆಟ: ಸೋತ ರಾಜಸ್ಥಾನ್

ಅಬುಧಾಬಿ: ಶೇಖ್‌ ಜಾಹೇದ್‌ ಕ್ರೀಡಾಂಗಣದಲ್ಲಿ ಹದಿಮೂರನೇ ಐಪಿಎಲ್​ನ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆರ್​ಸಿಬಿ ಭರ್ಜರಿ ವಿಜಯ ಸಾಧಿಸಿದೆ.

ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚಿದ ಕೊಹ್ಲಿ ಪಡೆ 8 ವಿಕೆಟ್​ಗಳ ಜಯದೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ. ರಾಜಸ್ಥಾನ್ ನೀಡಿದ್ದ 155 ರನ್​ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿಗೆ ಆರಂಭದಲ್ಲೇ ಆರೋನ್ ಫಿಂಚ್ ಎಂಟು ರನ್ ಗಳಿಸಿದ್ದಾಗ‌ ಔಟಾದರು.

ನಾಯಕ ವಿರಾಟ್ ಕೊಹ್ಲಿ ಹಾಗೂ ದೇವತ್ ಪಡಿಕ್ಕಲ್ ಜೋಡಿ ತಂಡವನ್ನು ಗೆಲುವಿನ ದಡ ಸೇರಿಸಿತು. ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.ಕೊಹ್ಲಿ ಅತ್ಯುತ್ತಮ ನೆರವು ನೀಡಿದರು. ಈ ಜೋಡಿ 99 ರನ್​ ಕಲೆ ಹಾಕಿತು.

ಪಡಿಕ್ಕಲ್ 53 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಬಾರಿಸಿ 63 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 75 ರನ್ ಗಳಿಸಿದರು. ಆರ್​ಸಿಬಿ 19.1 ಓವರ್​ನಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್ ಗಳಿಸುವ ಮೂಲಕ ನಿರಾಯಾಸ ಗೆಲುವು ಸಾಧಿಸಿತು. ರಾಜಸ್ಥಾನ್ ಪರ ಶ್ರೇಯಸ್ ಗೋಪಾಲ್ ಹಾಗೂ ಜೋಫ್ರಾ ಆರ್ಚರ್ ತಲಾ 1 ವಿಕೆಟ್ ಪಡೆದರು.

ಎಂಟು ವಿಕೆಟ್ ಗಳ ಗೆಲುವಿನೊಂದಿಗೆ ಆರ್ ಸಿಬಿ ಆರು ಅಂಕದೊಂದಿಗೆ ಅಂಕ ಪಟ್ಟಿಯನ್ನು ಮೊದಲ ಸ್ಥಾನಗಳಿಸಿದೆ. ಈ ಪಂದ್ಯದಲ್ಲಿ ಕೊಹ್ಲಿ ತಮ್ಮ ಬ್ಯಾಟಿಂಗ್ ಆಳವನ್ನು ಜಗಜ್ಜಾಹೀರು ಮಾಡುವ ಮೂಲಕ ಎದುರಾಳಿ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸ್ಕೋರ್ ವಿವರ 

ರಾಜಸ್ಥಾನ್ ರಾಯಲ್ಸ್ 154/6 

ಜೋಸ್ ಬಟ್ಲರ್ 22, ಲೋಮ್ರೋರ್ 47, ಟೆವಾಟಿಯಾ 24 ಅಜೇಯ

ಬೌಲಿಂಗ್: ಚಹಲ್ 24/3, ಸೈನಿ 37/1, ಉಡಾನ 41/2

ರಾಯಲ್ ಚಾಲೆಂಜರ್ಸ್ ಬೆಂಗಳೂರು 158/2

ದೇವದತ್ ಪಡಿಕ್ಕಲ್ 63, ವಿರಾಟ್ ಕೊಹ್ಲಿ 72 ಅಜೇಯ, ವಿಲಿಯರ್ಸ್ 12 ಅಜೇಯ

ಬೌಲಿಂಗ್: ಆರ್ಚರ್ 18/1, ಎಸ್.ಗೋಪಾಲ್ 27/1

ಪಂದ್ಯಶ್ರೇಷ್ಠ: ಯಜುವೇಂದ್ರ ಚಹಲ್