ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 179 ರನ್ ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಜಯಭೇರಿ ಬಾರಿಸಿದೆ. ಕೊನೆಯ ಓವರ್ ನಲ್ಲಿ ಅಕ್ಸರ್ ಪಟೇಲ್ ಸಿಡಿಸಿದ 3 ಸಿಕ್ಸರ್ ಗಳ ನೆರವಿನಿಂದ ಡೆಲ್ಲಿ ಗೆಲುವಿನ ನಗೆ ಬೀರಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಶಿಖರ್ ಧವನ್ 58 ಎಸೆತಗಳಲ್ಲಿ 101 ರನ್ ಸಿಡಿಸಿದರು. ಇದರಲ್ಲಿ 1 ಸಿಕ್ಸರ್ ಮತ್ತು 14 ಬೌಂಡರಿಗಳು ಸೇರಿತ್ತು. ಕೊನೆಯ ಓವರ್ ನಲ್ಲಿ ಮಿಂಚಿದ ಅಕ್ಸರ್ ಪಟೇಲ್ 5 ಎಸೆತಗಳಲ್ಲಿ 3 ಸಿಕ್ಸರ್ ಗಳೊಂದಿಗೆ 21 ರನ್ ಸಿಡಿಸಿದರು.
ಸಿಎಸ್ಕೆ ಪರ ಡು ಪ್ಲೆಸಿಸ್ 47 ಎಸೆತಗಳಲ್ಲಿ 58 ರನ್ ಗಳಿಸಿದರೆ, ಅಂಬಾಟಿ ರಾಯುಡು 25 ಎಸೆತಗಳಲ್ಲಿ 45 ರನ್ ಸಿಡಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 180 ರನ್ ಗಳ ಟಾರ್ಗೆಟ್ ನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪೃಥ್ವಿ ಶಾ ವಿಕೆಟ್ ಕಳೆದು ಕೊಂಡು ಆರಂಭದಲ್ಲೇ ಎಡವಿತ್ತು. ಆದರೆ ಶಿಖರ್ ಧವನ್ ಸ್ಫೋಟಕ 100 (58 ಎಸೆತ) ಗಳಿಂದಾಗಿ ತಂಡದ ಗೆಲುವಿನ ಹಾದಿ ಸುಗಮ ವಾಯಿತು.
ಶಿಖರ್ ಧವನ್ ಅವರು ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಶತಕ ದಾಖಲಿಸಿದ್ದು ಐಪಿಎಲ್ ನ ಇತಿಹಾಸದಲ್ಲೇ ಮೊದಲ ಬಾರಿಗೆ 101 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈ ತಂಡದ ಡಿಎಲ್ ಚಹಾರ್ 18 ರನ್ ನೀಡಿ 2 ವಿಕೆಟ್ ಗಳಿಸಿದರು.