Saturday, 14th December 2024

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬ ಇಂದು

ಮುಂಬೈ: ಟೀಂ ಇಂಡಿಯಾದ ಆಲ್ರೌಂಡರ್, ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿರುವ ಹಾರ್ದಿಕ್ ಪಾಂಡ್ಯ ಅವರು ಇಂದು 27ನೇ ಹುಟ್ಟುಹಬ್ಬವನ್ನು ಆಚರಿಸಿದರು.

ಐಪಿಎಲ್‍ನಲ್ಲಿ ತಮ್ಮ ಮಿಂಚಿನ ಆಟಕ್ಕೆ ಹೆಸರುವಾಸಿಯಾಗಿರುವ ಹಾರ್ದಿಕ್, ಟೀಂ ಇಂಡಿಯಾ ದ ಪ್ರಮುಖ ಹಾಗೂ ಖಾಯಂ ಸದಸ್ಯ ಕೂಡ. ಐಪಿಎಲ್‍‍ನಲ್ಲಿ 2015ರಲ್ಲಿ ಎಂಟು ಎಸೆತ ಎದುರಿಸಿ 21 ರನ್ ಬಾರಿಸಿದ್ದು, ಅವರ ಬ್ಯಾಟಿಂಗ್ ಪರಾಕ್ರಮಕ್ಕೆ ಸಾಕ್ಷಿಯಾಗಿದೆ.  ಶ್ರೀಲಂಕಾ ವಿರುದ್ದ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಹಾರ್ದಿಕ್, ತಾವು ಹೊಡೆಯುವ ಸಿಕ್ಸರ್ ಹೊಡೆತ ಗಳಿಗೆ ಪ್ರಸಿದ್ದರು.

ಸಾಮಾಜಿಕ ಜಾಲತಾಣದಲ್ಲೂ ಬೇರೆ ಬೇರೆ ಫ್ಯಾಶನ್’ಗಳಲ್ಲಿ ಕಾಣಿಸಿಕೊಳ್ಳುವ ಭಾರೀ ಸಂಖ್ಯೆಯ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ.

1993ರಲ್ಲಿ ಗುಜರಾತಿನ ಸೂರತ್‍‍ನ ಗ್ರಾಮವೊಂದರಲ್ಲಿ ಜನಿಸಿದ ಹಾರ್ದಿಕ್ ಅವರ ಕುಟುಂಬ ವಡೋದರಕ್ಕೆ ವಲಸೆ ಬಂತು. ಅವರ ಸಹೋದರ ಕೂಡ ಕ್ರಿಕೆಟಿಗ. ವಡೋದರದಲ್ಲಿ ಕಿರಣ್ ಮೋರೆ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಸರ್ಬಿಯನ್ ಡ್ಯಾನ್ಸರ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಹಾರ್ದಿಕ್, ಜುಲೈನಲ್ಲಿ ಮಗುವಿನ ತಂದೆಯಾದರು.