ನವದೆಹಲಿ: ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಎಂಎಸ್ ಧೋನಿಗಳಂತಹ ದಂತಕಥೆಗಳು ಭಾಗಿಯಾಗಿದ್ದ ಪ್ರಸಿದ್ಧ ಹಾಂಗ್ ಕಾಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಸಿಕ್ಸಸ್(Hong Kong Sixes) ಏಳು ವರ್ಷಗಳ ಮತ್ತೆ ನಡೆಯುತ್ತಿದೆ. ಕ್ರಿಕೆಟ್ ಹಾಂಗ್ ಕಾಂಗ್, ಚೀನಾ (CHK) ಆಯೋಜಿಸಿರುವ 2024 ರ ಆವೃತ್ತಿಯು ನವೆಂಬರ್ 1 ರಿಂದ 3ರವರೆಗೆ ಟಿನ್ ಕ್ವಾಂಗ್ ರೋಡ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಮೂರು ದಿನಗಳ ಈ ಪಂದ್ಯಾವಳಿಯಲ್ಲಿ 12 ರಾಷ್ಟ್ರಗಳ ತಂಡಗಳು ಭಾಗಿಯಾಗಲಿದ್ದಾರೆ. ಮತ್ತು CHK ಪ್ರಕಾರ, ಭಾರತೀಯ ಕ್ರಿಕೆಟ್ ತಂಡ ಕೂಡ ಈ ಪಂದ್ಯಾವಳಿಯಲ್ಲಿ ಭಾಗಿಯಾಗಲಿದೆ.
ಈ ಬಗ್ಗೆ ಕ್ರಿಕೆಟ್ ಹಾಂಗ್ಕಾಂಗ್ ಚೀನಾ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಟೀಮ್ ಇಂಡಿಯಾ HK6 ನಲ್ಲಿ ಪಾರ್ಕ್ನಲ್ಲಿ ಇತರ ತಂಡಗಳನ್ನು ಮಣಿಸಲು ಸಜ್ಜಾಗುತ್ತಿದೆ. HK6 ನಿಯಮಗಳ ಪ್ರಕಾರ, ಪ್ರತಿ ತಂಡವು 6 ಆಟಗಾರರನ್ನು ಒಳಗೊಂಡಿರುತ್ತದೆ ಮತ್ತು ಒಂದು ಆಟವು ಪ್ರತಿ ತಂಡಕ್ಕೆ ಗರಿಷ್ಠ ಐದು ಆರು-ಬಾಲ್ ಓವರ್ಗಳನ್ನು ಒಳಗೊಂಡಿರುತ್ತದೆ. ವಿಕೆಟ್ ಕೀಪರ್ ಹೊರತುಪಡಿಸಿ ಫೀಲ್ಡಿಂಗ್ ತಂಡದ ಪ್ರತಿಯೊಬ್ಬ ಸದಸ್ಯರು ಓವರ್ ಬೌಲ್ ಮಾಡುತ್ತಾರೆ.
🚨TEAM ANNOUNCEMENT🚨
— Cricket Hong Kong, China (@CricketHK) October 7, 2024
Team India is gearing up to smash it out of the park at HK6! 🇮🇳💥
Prepare for explosive power hitting and a storm of sixes that will electrify the crowd! 🔥
Expect More Teams, More Sixes, More Excitement, and MAXIMUM THRILLS! 🔥🔥
HK6 is back from 1st to… pic.twitter.com/P5WDkksoJn
ಭಾರತ-ಪಾಕ್ ಮುಖಾಮುಖಿ
ಹಾಂಕಾಂಗ್ ಸಿಕ್ಸ್ಗಾಗಿ ಆರು ಆಟಗಾರರ ತಂಡವನ್ನು ಪಾಕಿಸ್ತಾನ ಪ್ರಕಟಿಸಿದೆ. ಎಂಟು ತಂಡಗಳ ಈ ಸ್ಪರ್ಧೆಯಲ್ಲಿ ಆಲ್ ರೌಂಡರ್ ಫಹೀಮ್ ಅಶ್ರಫ್ ತಂಡದ ಸಾರಥ್ಯ ವಹಿಸಲಿದ್ದಾರೆ. ಹಿರಿಯ ಬ್ಯಾಟರ್ ಆಸಿಫ್ ಅಲಿ ಮತ್ತು ಎಡಗೈ ಬ್ಯಾಟರ್ ಹುಸೇನ್ ತಲಾತ್ ಕೂಡ ತಂಡದ ಭಾಗವಾಗಿದ್ದಾರೆ. PAK ತಂಡ: ಫಹೀಮ್ ಅಶ್ರಫ್ (ನಾಯಕ), ಅಮೀರ್ ಯಾಮಿನ್, ಆಸಿಫ್ ಅಲಿ, ಡ್ಯಾನಿಶ್ ಅಜೀಜ್, ಹುಸೇನ್ ತಲಾತ್, ಮುಹಮ್ಮದ್ ಅಖ್ಲಾಕ್ (WK) ಮತ್ತು ಶಹಾಬ್ ಖಾನ್.
ಹಾಂಗ್ ಕಾಂಗ್ ಸಿಕ್ಸಸ್ ಹಿನ್ನೆಲೆ
ಹಾಂಗ್ ಕಾಂಗ್ ಕ್ರಿಕೆಟ್ ಸಿಕ್ಸಸ್ 1992 ರಲ್ಲಿ ಪ್ರಾರಂಭವಾದಾಗಿದ್ದು, ಕ್ರಿಕೆಟ್ನಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಹೆಸರಾಂತ ಅಂತರರಾಷ್ಟ್ರೀಯ ಸಿಕ್ಸ್-ಎ-ಸೈಡ್ ಪಂದ್ಯಾವಳಿಯಾಗಿದೆ. ಕ್ರಿಕೆಟ್ ಹಾಂಗ್ ಕಾಂಗ್ನಿಂದ ಈ ಆಯೋಜಿಸಲ್ಪಟ್ಟಿದೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಯಿಂದ ಅನುಮೋದಿಸಲಾಗಿದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ಅತ್ಯಂತ ಬಲಿಷ್ಟ ತಂಡಗಳಾಗಿವೆ, ಪ್ರತಿಯೊಂದೂ ಐದು ಬಾರಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ 2017 ರಲ್ಲಿ ಪಾಕಿಸ್ತಾನವನ್ನು ಫೈನಲ್ನಲ್ಲಿ ಸೋಲಿಸಿತು. ಶ್ರೀಲಂಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ಭಾರತ ಈ ಹಿಂದೆ ವಿಜೇತರಾದ ತಂಡಗಳು.
ಈ ಸುದ್ದಿಯನ್ನೂ ಓದಿ: Yogi Adityanath: ನಗು ಮೊಗದೊಂದಿಗೆ ಕ್ರಿಕೆಟ್ ಆಡಿದ ಯೋಗಿ ಆದಿತ್ಯನಾಥ್; ಇಲ್ಲಿದೆ ವಿಡಿಯೊ