ICC AGM: ಎರಡು ಹಂತದ ಟೆಸ್ಟ್ ಸ್ವರೂಪ, ಟಿ20 ವಿಸ್ತರಣೆ ಕುರಿತು ಚರ್ಚೆ
50 ಓವರ್‌ಗಳ ವಿಶ್ವಕಪ್‌ಗೆ ಹೆಚ್ಚಿನ ತಂಡಗಳನ್ನು ಸೇರಿಸುವ ಉದ್ದೇಶವಿಲ್ಲದಿದ್ದರೂ, ಐಸಿಸಿ ಟಿ20 ಆವೃತ್ತಿಗೆ ಹೆಚ್ಚಿನ ತಂಡಗಳನ್ನು ಸೇರಿಸುವ ಬಗ್ಗೆ ಯೋಚಿಸಬಹುದು. ಇದು ಭಾಗವಹಿಸುವವರ ಸಂಖ್ಯೆಯನ್ನು 24 ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಪ್ರಸ್ತುತ, ಕಳೆದ ವರ್ಷದ ವಿಶ್ವಕಪ್‌ನಿಂದ ನಾಲ್ಕು ತಂಡಗಳನ್ನು ಸೇರಿಸಿದ ನಂತರ 20 ತಂಡಗಳು ಪ್ರದರ್ಶನದಲ್ಲಿ ಸ್ಪರ್ಧಿಸುತ್ತಿವೆ.


ದುಬೈ: ಗುರುವಾರದಿಂದ ಆರಂಭವಾಗುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ನಾಲ್ಕು ದಿನಗಳ ವಾರ್ಷಿಕ ಮಹಾಸಭೆಯಲ್ಲಿ(ICC AGM,) ಬಹು ಚರ್ಚಿತವಾದ ಎರಡು ಹಂತದ ಟೆಸ್ಟ್ ವ್ಯವಸ್ಥೆ(Two-tier Test system), ಟಿ20 ವಿಶ್ವಕಪ್ ವಿಸ್ತರಣೆ ಮತ್ತು ಹೊಸ ಸದಸ್ಯರ ಅನುಮೋದನೆಯ ಕುರಿತು ಆಳವಾಗಿ ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ.
ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು ಈಗಾಗಲೇ ಕೆಲವು ಕ್ರಮಗಳನ್ನು ಐಸಿಸಿ ತೆಗೆದುಕೊಂಡಿದೆ. ಅದರ ಭಾಗವಾಗಿ ಸಾಂಪ್ರದಾಯಿಕ ಸ್ವರೂಪವಾಗಿರುವ ಟೆಸ್ಟ್ ಕ್ರಿಕೆಟ್ ಅನ್ನು ಎರಡು ಹಂತಗಳಲ್ಲಿ (2-ಟೈರ್ ಟೆಸ್ಟ್ ಕ್ರಿಕೆಟ್) ಆಯೋಸುವ ಕುರಿತು ವಾರ್ಷಿಕ ಮಹಾಸಭೆಯಲ್ಲಿ ಚರ್ಚಿಸಲಿದೆ. ಐಸಿಸಿ ಅಧ್ಯಕ್ಷ ಜಯ್ ಶಾ ಮತ್ತು ಹೊಸದಾಗಿ ನೇಮಕಗೊಂಡ ಸಿಇಒ ಸಂಜೋಗ್ ಗುಪ್ತಾ ನೇತೃತ್ವದಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದೆ.
ಸಭೆಯಲ್ಲಿ ಎಲ್ಲ ಕ್ರಿಕೆಟ್ ರಾಷ್ಟ್ರಗಳ ಬೆಂಬಲ ದೊರೆತರೆ 2027-29ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿನಲ್ಲಿ ಸಣ್ಣ ರಾಷ್ಟ್ರಗಳಿಗೆ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳನ್ನು ಮಂಜೂರು ಮಾಡಲು ಐಸಿಸಿ ಸಿದ್ಧವಾಗಿದೆ. ಇದರಿಂದಾಗಿ ಸಣ್ಣ ದೇಶಗಳು ಹೆಚ್ಚು ಟೆಸ್ಟ್ ಪಂದ್ಯಗಳನ್ನು ಮತ್ತು ಸರಣಿಗಳನ್ನು ಆಡಲು ಸಹಾಯವಾಗುತ್ತದೆ. ಆದರೆ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸಾಂಪ್ರದಾಯಿಕ ಐದು ದಿನಗಳ ಪಂದ್ಯಗಳನ್ನು ಆಡುವುದನ್ನು ಮುಂದುವರಿಸಲಿದೆ. ನಾಲ್ಕು ದಿನಗಳ ಟೆಸ್ಟ್ ಪಂದ್ಯಕ್ಕೆ ಈಗಾಗಲೇ ಜಯ್ ಶಾ ಬೆಂಬಲ ಸೂಚಿಸಿದಾರೆ.
50 ಓವರ್‌ಗಳ ವಿಶ್ವಕಪ್‌ಗೆ ಹೆಚ್ಚಿನ ತಂಡಗಳನ್ನು ಸೇರಿಸುವ ಉದ್ದೇಶವಿಲ್ಲದಿದ್ದರೂ, ಐಸಿಸಿ ಟಿ20 ಆವೃತ್ತಿಗೆ ಹೆಚ್ಚಿನ ತಂಡಗಳನ್ನು ಸೇರಿಸುವ ಬಗ್ಗೆ ಯೋಚಿಸಬಹುದು. ಇದು ಭಾಗವಹಿಸುವವರ ಸಂಖ್ಯೆಯನ್ನು 24 ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ.
ಪ್ರಸ್ತುತ, ಕಳೆದ ವರ್ಷದ ವಿಶ್ವಕಪ್‌ನಿಂದ ನಾಲ್ಕು ತಂಡಗಳನ್ನು ಸೇರಿಸಿದ ನಂತರ 20 ತಂಡಗಳು ಪ್ರದರ್ಶನದಲ್ಲಿ ಸ್ಪರ್ಧಿಸುತ್ತಿವೆ ಮತ್ತು ಈ ಮಾದರಿಯನ್ನು ಕನಿಷ್ಠ 2026 ರ ಆವೃತ್ತಿಯವರೆಗೆ ಉಳಿಸಿಕೊಳ್ಳುವ ಸಾಧ್ಯತೆ ಇದೆ.