ICC Test Rankings: ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 15 ಸ್ಥಾನಗಳ ಜಿಗಿತ ಕಂಡ ಶುಭಮನ್ ಗಿಲ್
ಮತೋರ್ವ ಟೀಮ್ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ತಮ್ಮ 4 ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಎಡಗೈ ಆರಂಭಿಕ ಆಟಗಾರ ಬರ್ಮಿಂಗ್ಹ್ಯಾಮ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 87 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಕಳೆದ ವಾರ ಒಂದು ಸ್ಥಾನದ ಜಿಗಿತದೊಂದಿಗೆ 6ನೇ ಸ್ಥಾನ ಪಡೆದಿದ್ದ ರಿಷಭ್ ಪಂತ್ ಈ ಬಾರಿ ಒಂದು ಸ್ಥಾನ ಕುಸಿತ ಕಂಡು 7ನೇ ಸ್ಥಾನದಲ್ಲಿದ್ದಾರೆ.

ದುಬೈ: ಇಂಗ್ಲೆಂಡ್ ವಿರುದ್ಧದ ಆಂಡರ್ಸನ್-ತೆಂಡುಲ್ಕರ್ ಟ್ರೋಫಿ ಸರಣಿಯ ಮೊದಲ 2 ಪಂದ್ಯಗಳಲ್ಲೇ 3 ಶತಕಗಳ ಸಹಿತ 585 ರನ್ ಸಿಡಿಸಿರುವ ಭಾರತ ಟೆಸ್ಟ್ ತಂಡದ ನಾಯಕ ಹಾಗೂ ಬ್ಯಾಟರ್ ಶುಭಮಾನ್ ಗಿಲ್(Shubman Gill) ಅವರು ಐಸಿಸಿ ಟೆಸ್ಟ್ ಬ್ಯಾಟಿಂಗ್(ICC Test Rankings) ಶ್ರೇಯಾಂಕದಲ್ಲಿ 15 ಸ್ಥಾನಗಳ ಜಿಗಿತದೊಂದಿಗೆ ಜೀವನಶ್ರೇಷ್ಠ 6ನೇ ಸ್ಥಾನ ಪಡೆದಿದ್ದಾರೆ. ಏತನ್ಮಧ್ಯೆ, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್(Harry Brook) ಅವರು ಜೋ ರೂಟ್ ಹಿಂದಿಕ್ಕಿ ವಿಶ್ವದ ನಂ.1 ಬ್ಯಾಟರ್ ಆದರು. ರೂಟ್ ಎರಡನೇ ಸ್ಥಾನ ಪಡೆದರು.
ಎಜ್ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಮತ್ತು 150 ಕ್ಕೂ ಹೆಚ್ಚು ರನ್ ಗಳಿಸಿದ ಗಿಲ್ ಪಂದ್ಯವೊಂದರಲ್ಲೇ ಬರೋಬ್ಬರಿ 34 ದಾಖಲೆಗಳನ್ನು ಅಳಿಸಿಹಾಕಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 269 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 161 ರನ್ ಗಳಿಸಿದ್ದರು. ಇದೇ ಪ್ರದರ್ಶನ ಅವರ ಶ್ರೇಯಾಂಕ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿತು. ಗಿಲ್ ಅವರ ಹಿಂದಿನ ಅತ್ಯುತ್ತಮ ಟೆಸ್ಟ್ ಶ್ರೇಯಾಂಕ 14 ಆಗಿತ್ತು. ಆದರೆ ಈಗ ಅವರು ವೃತ್ತಿಜೀವನದ ಅತ್ಯುತ್ತಮ 807 ರೇಟಿಂಗ್ ಅಂಕಗಳೊಂದಿಗೆ 6 ನೇ ಸ್ಥಾನಕ್ಕೆ ಏರಿದ್ದಾರೆ.
ಮತೋರ್ವ ಟೀಮ್ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ತಮ್ಮ 4 ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಎಡಗೈ ಆರಂಭಿಕ ಆಟಗಾರ ಬರ್ಮಿಂಗ್ಹ್ಯಾಮ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 87 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಕಳೆದ ವಾರ ಒಂದು ಸ್ಥಾನದ ಜಿಗಿತದೊಂದಿಗೆ 6ನೇ ಸ್ಥಾನ ಪಡೆದಿದ್ದ ರಿಷಭ್ ಪಂತ್ ಈ ಬಾರಿ ಒಂದು ಸ್ಥಾನ ಕುಸಿತ ಕಂಡು 7ನೇ ಸ್ಥಾನದಲ್ಲಿದ್ದಾರೆ.
ಐಸಿಸಿ ಟೆಸ್ಟ್ ಟಾಪ್-10 ಬ್ಯಾಟಿಂಗ್ ಶ್ರೇಯಾಂಕ
ಹ್ಯಾರಿ ಬ್ರೂಕ್ (ಇಂಗ್ಲೆಂಡ್) - ಶ್ರೇಯಾಂಕ: 1, ರೇಟಿಂಗ್ ಅಂಕ: 886
ಜೋ ರೂಟ್ (ಇಂಗ್ಲೆಂಡ್) - ಶ್ರೇಯಾಂಕ: 2, ರೇಟಿಂಗ್ ಅಂಕ: 868
ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) - ಶ್ರೇಯಾಂಕ: 3, ರೇಟಿಂಗ್ ಅಂಕ: 867
ಯಶಸ್ವಿ ಜೈಸ್ವಾಲ್ (ಭಾರತ) - ಶ್ರೇಯಾಂಕ: 4, ರೇಟಿಂಗ್ ಅಂಕ: 858
ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ) - ಶ್ರೇಯಾಂಕ: 5, ರೇಟಿಂಗ್ ಅಂಕ: 813
ಶುಬ್‌ಮನ್ ಗಿಲ್ (ಭಾರತ) - ಶ್ರೇಯಾಂಕ: 6, ರೇಟಿಂಗ್ ಅಂಕ: 807
ಟೆಂಬಾ ಬವುಮಾ (ದಕ್ಷಿಣ ಆಫ್ರಿಕಾ) - ಶ್ರೇಯಾಂಕ: 7, ರೇಟಿಂಗ್ ಅಂಕ: 790
ರಿಷಭ್ ಪಂತ್ (ಭಾರತ) - ಶ್ರೇಯಾಂಕ: 7 (ಟೈ), ರೇಟಿಂಗ್ ಅಂಕ: 790
ಕಮಿಂದು ಮೆಂಡಿಸ್ (ಶ್ರೀಲಂಕಾ) - ಶ್ರೇಯಾಂಕ: 9, ರೇಟಿಂಗ್ ಅಂಕಳು: 781
ಜೇಮೀ ಸ್ಮಿತ್ (ಇಂಗ್ಲೆಂಡ್) - ಶ್ರೇಯಾಂಕ: 10, ರೇಟಿಂಗ್ ಅಂಕ: 753
ಇದನ್ನೂ ಓದಿ Deepti Sharma: ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ ದೀಪ್ತಿ ಶರ್ಮ