ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepti Sharma: ಟಿ20 ಬೌಲಿಂಗ್‌ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ ದೀಪ್ತಿ ಶರ್ಮ

ರೇಣುಕಾ ಸಿಂಗ್‌ ಠಾಕೂರ್‌ (706). ಅವರು 6ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಅರುಂಧತಿ ರೆಡ್ಡಿ ಕೂಡ 11 ಸ್ಥಾನಗಳ ಏರಿಕೆ ಕಂಡು 43 ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಪರ ಎಮ್ ಆರ್ಲಾಟ್ ಮತ್ತು ಲಾರೆನ್ ಫೈಲರ್ ಕ್ರಮವಾಗಿ 23 ಮತ್ತು 21 ಸ್ಥಾನಗಳ ಜಿಗಿತದೊಂದಿದೆ 82 ಮತ್ತು 68 ನೇ ಸ್ಥಾನ ಪಡೆದಿದ್ದಾರೆ.

ಟಿ20 ಬೌಲಿಂಗ್‌ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ ದೀಪ್ತಿ ಶರ್ಮ

Profile Abhilash BC Jul 9, 2025 10:34 AM

ದುಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ದೀಪ್ತಿ ಶರ್ಮ(Deepti Sharma) ಅವರು ನೂತನ ಐಸಿಸಿ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ(ICC WT20I rankings) ಒಂದು ಸ್ಥಾನದ ಜಿಗಿತದೊಂದಿಗೆ 2ನೇ ಸ್ಥಾನಕ್ಕೆ ಏರಿದ್ದಾರೆ. ಕಳೆದ 6 ವರ್ಷಗಳಿಂದ ಅವರು ಟಾಪ್‌-10 ಶ್ರೇಯಾಂಕದಲ್ಲೇ ಉಳಿದುಕೊಂಡಿದ್ದಾರೆ. ಪಾಕಿಸ್ತಾನದ ಸದಿಯಾ ಇಕ್ಬಾಲ್‌ ಅಗ್ರಸ್ಥಾನ ಕಾಯ್ದುಕೊಂದರೆ, ಈ ಹಿಂದೆ 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಅನ್ನಾಬೆಲ್‌ ಸದರ್ಲೆಂಡ್‌ ಮೂರಕ್ಕಿಳಿದರು.

ಅಗ್ರಸ್ಥಾನಕ್ಕೇರುವ ಅವಕಾಶ

ದೀಪ್ತಿ ಅವರಿಗೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಇಂಗ್ಲೆಂಡ್‌ ಎದುರು ನಡೆಯುತ್ತಿರುವ ಟಿ20 ಸರಣಿಯ ಉಳಿದ 2 ಪಂದ್ಯಗಳಲ್ಲಿ ಉತ್ತಮ ವಿಕೆಟ್‌ ಕಿತ್ತರೆ ಅವರು ಅಗ್ರಸ್ಥಾನ ಪಡೆಯಬಹುದು. ಸದ್ಯ ಅವರು ಆಡಿ ಮೂರು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಗ್ರಸ್ಥಾನಿಯಾಗಿರುವ ಸದಿಯಾ(746 ) ಅವರಿಗಿಂತ ಕೇವಲ 8 ಅಂಕಗಳ ಅಂತರವಷ್ಟೇ ಹಿಂದಿದ್ದಾರೆ. ದೀಪ್ತಿ 738 ಅಂಕ ಹೊಂದಿದ್ದಾರೆ.

ರೇಣುಕಾ ಸಿಂಗ್‌ ಠಾಕೂರ್‌ (706). ಅವರು 6ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಅರುಂಧತಿ ರೆಡ್ಡಿ ಕೂಡ 11 ಸ್ಥಾನಗಳ ಏರಿಕೆ ಕಂಡು 43 ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಪರ ಎಮ್ ಆರ್ಲಾಟ್ ಮತ್ತು ಲಾರೆನ್ ಫೈಲರ್ ಕ್ರಮವಾಗಿ 23 ಮತ್ತು 21 ಸ್ಥಾನಗಳ ಜಿಗಿತದೊಂದಿದೆ 82 ಮತ್ತು 68 ನೇ ಸ್ಥಾನ ಪಡೆದಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಜೆಮಿಮಾ ರೊಡ್ರಿಗಸ್ ಎರಡು ಸ್ಥಾನಗಳ ಏರಿಕೆ ಕಂಡರೆ, ಇಂಗ್ಲೆಂಡ್‌ನ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್-ಹಾಡ್ಜ್ ಮೂರು ಸ್ಥಾನಗಳ ಜಿಗಿತ ಕಂಡು ಕ್ರಮವಾಗಿ 12 ಮತ್ತು 14 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ಸೋಫಿ ಎಕ್ಲೆಸ್ಟೋನ್ ಆಲ್‌ರೌಂಡರ್ ಪಟ್ಟಿಯಲ್ಲಿ ಮೂರು ಸ್ಥಾನಗಳ ಪ್ರತಿಯೊಂದಿಗೆ 8 ನೇ ಸ್ಥಾನ ತಲುಪಿದ್ದಾರೆ.

ಹಂಡ್ರೆಡ್‌ ಟೂರ್ನಿಯಿಂದ ಹಿಂದೆ ಸರಿದ ದೀಪ್ತಿ

ಏತನ್ಮಧ್ಯೆ, ದೀಪ್ತಿ ಹಂಡ್ರೆಡ್‌ನಿಂದ ಹಿಂದೆ ಸರಿದಿದ್ದಾರೆ. ಅವರು ಲಂಡನ್ ಸ್ಪಿರಿಟ್‌ ತಂಡದ ಭಾಗವಾಗಿದ್ದರು. ಈ ವರ್ಷ ಹಂಡ್ರೆಡ್‌ನಲ್ಲಿ ದೀಪ್ತಿ ಏಕೈಕ ಭಾರತೀಯ ಪ್ರತಿನಿಧಿಯಾಗಿದ್ದರು. ಆದರೆ ಅವರು ಹೊರಗುಳಿದ ಕಾರಣ ಈ ಬಾರಿಯ ಮಹಿಳಾ ಟೂರ್ನಮೆಂಟ್‌ನಲ್ಲಿ ಯಾವುದೇ ಭಾರತೀಯ ಆಟಗಾರ್ತಿ ಇರುವುದಿಲ್ಲ. ದೀಪ್ತಿ ಸ್ಥಾನಕ್ಕೆ ಚಾರ್ಲಿ ನಾಟ್ ಅವರನ್ನು ಬದಲಿ ಆಟಗಾರ್ತಿಯಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ Smriti Mandhana: 6 ವರ್ಷಗಳ ಬಳಿಕ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನ ಅಲಂಕರಿಸಿದ ಮಂಧಾನ