Saturday, 14th December 2024

ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌: ಶಿಖರ್, ಶ್ರೇಯಸ್’ಗೆ ಬಡ್ತಿ

ದುಬೈ: ಟೀಂ ಇಂಡಿಯಾದ ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ ಅವರು ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ.

ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್‌ ಎದುರಿನ ಸರಣಿಯ ಮೊದಲ ಪಂದ್ಯದಲ್ಲಿ ಧವನ್‌ 97 ರನ್ ಗಳಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ರ‍್ಯಾಂಕಿಂಗ್ ಏರಿಕೆಗೆ ಕಾರಣವಾಗಿದೆ. ಸದ್ಯ ಅವರು ಜಂಟಿ 13ನೇ ಸ್ಥಾನ ತಲುಪಿದ್ದಾರೆ.

ಮೊದಲ ಎರಡು ಪಂದ್ಯಗಳಲ್ಲಿ ಅರ್ಧಶತಕ (ಕ್ರಮವಾಗಿ 54 ಮತ್ತು 63) ಸಿಡಿಸಿರುವ ಶ್ರೇಯಸ್‌ ಅಯ್ಯರ್‌ 20 ಸ್ಥಾನ ಏರಿಕೆ ದಾಖಲಿಸಿ ಜಂಟಿ 54ನೇ ಸ್ಥಾನದಲ್ಲಿದ್ದಾರೆ. ಸರಣಿಗೆ ವಿಶ್ರಾಂತಿ ಪಡೆದಿರುವ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಲಾ ಒಂದು ಸ್ಥಾನ ಕುಸಿತ ಕಂಡಿದ್ದು ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿ ದ್ದಾರೆ.

ವೆಸ್ಟ್ ಇಂಡೀಸ್ ತಂಡದ ಶಾಯ್ ಹೋಪ್‌ 12ನೇ ಸ್ಥಾನದಲ್ಲಿದ್ದಾರೆ. ಭಾರತ ಎದುರಿನ ಎರಡನೇ ಪಂದ್ಯದಲ್ಲಿ ಅವರು ಶತಕ (115) ಸಿಡಿಸಿದ್ದರು. ಪಾಕಿಸ್ತಾನದ ಬಾಬರ್ ಆಜಂ ಏಕದಿನ ಮತ್ತು ಟಿ20 ಎರಡೂ ಮಾದರಿಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ವೇಗಿ ಭಾರತದ ಮೊಹಮ್ಮದ್ ಸಿರಾಜ್‌ ಅಗ್ರ 100ರ ಪಟ್ಟಿಯೊಳಗೆ ಸ್ಥಾನ ಪಡೆದಿದ್ದು, ಸದ್ಯ 97ನೇ ಕ್ರಮಾಂಕದಲ್ಲಿದ್ದಾರೆ.