IPL 2025: ಟಾಸ್ ವೇಳೆ ಗಿಲ್‌ಗೆ ಮದುವೆ ಬಗ್ಗೆ ಪ್ರಶ್ನೆ; ಮೊರಿಸನ್ ವಿರುದ್ಧ ಭಾರೀ ಟೀಕೆ
ಟಾಸ್ ವೇಳೆ ಮೊರಿಸ್ಸನ್, ಶುಭಮನ್ ಗಿಲ್ ಬಳಿ, 'ಬಹಳ ಹ್ಯಾಂಡ್‌ಸಮ್ ಆಗಿ ಕಾಣುತ್ತಿದ್ದೀರಿ. ಸದ್ಯದಲ್ಲಿ ಮದುವೆ ಆಗುತ್ತೀರಾ, ಹೇಗೆ? ಮದುವೆ ಸಿದ್ಧತೆ ನಡೆಯತ್ತಿದೆಯೇ?’ ಎಂದು ಪ್ರಶ್ನಿಸಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಗಿಲ್, ‘ಇಲ್ಲ, ಅದೆಲ್ಲಾ ಏನೂ ಇಲ್ಲ' ಎಂದರು. ಕ್ರಿಕೆಟ್ ಮೈದಾನದಲ್ಲಿ ಈ ರೀತಿಯ ಪ್ರಶ್ನೆ ಕೇಳುವುದು ಎಷ್ಟು ಸರಿ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ.


ಕೋಲ್ಕತಾ: ಸೋಮವಾರ ನಡೆದಿದ್ದ ಕೆಕೆಆರ್(KKR vs GT) ಮತ್ತು ಗುಜರಾತ್ ಟೈಟಾನ್ಸ್ ನಡುವಣ ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ ವೀಕ್ಷಕ ವಿವರಣೆಗಾರ ಡ್ಯಾನಿ ಮೊರಿಸ್ಸನ್(Danny Morrison), ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್(Shubman Gill)ರನ್ನು ಮದುವೆ ಬಗ್ಗೆ ಪ್ರಶ್ನೆ ಕೇಳಿದರು. ಈ ವಿಷಯ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಮೊರಿಸ್ಸನ್ ನಡೆ ಬಗ್ಗೆ ಟೀಕಿಸಿದ್ದಾರೆ. ಆಟಕ್ಕೆ ಅಗತ್ಯವಿರುವುದರ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದನ್ನು ಬಿಟ್ಟು ಅನಗತ್ಯ ವಿಷಯಗಳಿಗೆ ಮನ್ನಣೆ ನೀಡುವುದನ್ನು ನಿಲ್ಲಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.
ಟಾಸ್ ವೇಳೆ ಮೊರಿಸ್ಸನ್, ಶುಭಮನ್ ಗಿಲ್ ಬಳಿ, 'ಬಹಳ ಹ್ಯಾಂಡ್‌ಸಮ್ ಆಗಿ ಕಾಣುತ್ತಿದ್ದೀರಿ. ಸದ್ಯದಲ್ಲಿ ಮದುವೆ ಆಗುತ್ತೀರಾ, ಹೇಗೆ? ಮದುವೆ ಸಿದ್ಧತೆ ನಡೆಯತ್ತಿದೆಯೇ?’ ಎಂದು ಪ್ರಶ್ನಿಸಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಗಿಲ್, ‘ಇಲ್ಲ, ಅದೆಲ್ಲಾ ಏನೂ ಇಲ್ಲ' ಎಂದರು. ಕ್ರಿಕೆಟ್ ಮೈದಾನದಲ್ಲಿ ಈ ರೀತಿಯ ಪ್ರಶ್ನೆ ಕೇಳುವುದು ಎಷ್ಟು ಸರಿ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ಮಾರಿಸ್ಸನ್‌ರನ್ನು ವೀಕ್ಷಕ ವಿವರಣೆ ತಂಡದಿಂದ ಹೊರಹಾಕುವಂತೆಯೂ ಆಗ್ರಹಿಸಿದ್ದಾರೆ. ಮಾರಿಸ್ಸನ್ ಅವರು ಹೆಚ್ಚು ತಮಾಷೆ ಮಾಡುವ ವ್ಯಕ್ತಿಯಾಗಿರುವ ಕಾರಣ ಅವರ ಈ ಪ್ರಶ್ನೆಯಲ್ಲಿ ಯಾವುದೇ ದುರುದ್ಧೇಶ ಇಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
Danny Morrison - You're looking good, wedding bells around the corner? Getting married soon?
— Rio (@CricRio6) April 21, 2025
Shubman Gill - No, nothing like that. pic.twitter.com/NHIhqy2KFe
ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಗಿಲ್
ಕೆಕೆಆರ್ ವಿರುದ್ಧ 90 ರನ್ ಬಾರಿಸಿದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್(Shubman Gill) ಐಪಿಎಲ್(IPL 2025)ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 3500 ರನ್‌ಗಳನ್ನು ಪೂರ್ಣಗೊಳಿಸಿದ ಅತ್ಯಂತ ಕಿರಿಯ ಆಟಗಾರ ಮತ್ತು 25 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ರಿಷಭ್ ಪಂತ್ ಈ ಸಾಧಕರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಗಿಲ್ (25 ವರ್ಷ 225 ದಿನಗಳು) ಅವರಿಗಿಂತ ಮೊದಲು ಈ ದಾಖಲೆ ವಿರಾಟ್ ಕೊಹ್ಲಿ (27 ವರ್ಷ 171 ದಿನಗಳು) ಹೆಸರಿನಲ್ಲಿತ್ತು. ಕೊಹ್ಲಿ 2016 ರ ಋತುವಿನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರರಾಗಿದ್ದರು. ಸಂಜು ಸ್ಯಾಮ್ಸನ್ ಎರಡನೇ ಕಿರಿಯ (27 ವರ್ಷ 197 ದಿನಗಳು) ಆಗಿದ್ದರು. ಇದೀಗ ಗಿಲ್ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ IPL 2025: ಕೆಕೆಆರ್ ತಂಡದ ಪ್ಲೇ-ಆಫ್ ಪ್ರವೇಶದ ಲೆಕ್ಕಾಚಾರ ಹೇಗಿದೆ?
2018 ರಲ್ಲಿ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಶುಭಮನ್ ಗಿಲ್ ಆರಂಭದಲ್ಲಿ ಕೆಕೆಆರ್ ತಂಡದ ಪರ ಆಡಿದ್ದರು. ಕೆಕೆಆರ್ ಪರ 58 ಪಂದ್ಯಗಳಲ್ಲಿ 1417 ರನ್‌ಗಳನ್ನು ಗಳಿಸಿದ್ದರು. 2022 ರಲ್ಲಿ ಗುಜರಾತ್ ಟೈಟಾನ್ಸ್ ಸೇರಿದರು ಮತ್ತು ಫ್ರಾಂಚೈಸಿ ಪರ 2,104 ರನ್‌ಗಳನ್ನು ಗಳಿಸಿದ್ದಾರೆ.