ಚೆನ್ನೈ: ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ಮಧ್ಯೆ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ.
ಆರಂಭಿಕ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ವಿರಾಟ್ ಕೊಹ್ಲಿ ಪಡೆ ದ್ವಿತೀಯ ಇನ್ನಿಂಗ್ಸ್ ನಲ್ಲೂ ಚೇಸಿಂಗ್ನಲ್ಲಿ ಮುಗ್ಗರಿ ಸಿದೆ. ಭಾರತದ ಗೆಲುವಿಗೆ 420 ರನ್ ಅನ್ನು ಬೆನ್ನಟ್ಟಬೇಕಿದ್ದ ಭಾರತಕ್ಕೆ ಆಂಗ್ಲರ ವೇಗಿ ಜೇಮ್ಸ್ ಆಂಡರ್ಸನ್ ಆಘಾತ ನೀಡಿದರು.
ಆರಂಭಿಕ ಶುಬ್ಮನ್ ಗಿಲ್ ಅವರು ಅರ್ಧಶತಕ ಬಾರಿಸಿದ ಮರುಕ್ಷಣವೇ ಪೆವಿಲಿಯನ್ ಗಟ್ಟಿದ ಆಂಡರ್ಸನ್, ನಂತರ ಬಂದ ಅಜಿಂಕ್ಯ ರಹಾನೆಯನ್ನು ತಳವೂರಲು ಬಿಡದೆ, ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿದರು. ಕೀಪರ್ ರಿಷಬ್‌ಪಂತ್ ಹಾಗೂ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಶೂನ್ಯಕ್ಕೆ ವಿಕೆಟ್ ಆಟ ಮುಗಿಸಿದರು.
ಇತ್ತೀಚಿನ ವರದಿಯಂತೆ ನಾಯಕ ವಿರಾಟ್ ಕೊಹ್ಲಿ 27 ರನ್ ಗಳಿಸಿ, ಬ್ಯಾಟಿಂಗ್ ಮುಂದುವರಿಸಿದ್ದು, ರವಿಚಂದ್ರನ್ ಅಶ್ವಿನ್ ಜತೆ ನೀಡುತ್ತಿದ್ದಾರೆ.
ಇಂಗ್ಲೆಂಡ್, ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಜೋ ರೂಟ್ ಅವರ ದ್ವಿಶತಕದ ಕೊಡುಗೆಯೊಂದಿಗೆ 190.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 578 ರನ್ ಗಳಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ 46.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 178 ರನ್ ಗಳಿಸಿತ್ತು. ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ 95.5 ಓವರ್‌ಗೆ ಸರ್ವಪತನ ಕಂಡು 337 ರನ್ ಗಳಿಸಿತ್ತು.