Saturday, 14th December 2024

ಡಿ’ಕಾಕ್‌, ಸೂರ್ಯನ ಆಟಕ್ಕೆ ಬೆಚ್ಚಿದ ಡೆಲ್ಲಿ ಕ್ಯಾಪಿಟಲ್ಸ್

ಅಬುಧಾಭಿ : ಅಬುದಾಭಿಯ ಶೇಕ್ ಝಾಯೆದ್ ಕ್ರಿಡಾಂಗಣದಲ್ಲಿ ವಿಕೆಟ್ ಕೀಪರ್‌ ಡಿ’ ಕಾಕ್ಸೂ ಹಾಗೂ ಮೂರನೇ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಉತ್ತಮ ಆಟದೊಂದಿಗೆ ಡೆಲ್ಲಿ ತಂಡವನ್ನು ಮುಂಬೈ ಇಂಡಿಯನ್ಸ್ ತಂಡ ಮಣಿಸಿದೆ.

ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿಕೊಂಡು ಬಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದಿನ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆಯಲಿಲ್ಲ. ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಯುವ ಆಟಗಾರ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಟೂರ್ನಿಯಲ್ಲಿ ಮೊದಲ ಬಾರಿಗೆ ಆಡುವ ಬಳಗದಲ್ಲಿ ಕಾಣಿಸಿಕೊಂಡ ಅಜಿಂಕ್ಯ ರಹಾನೆ 15 ರನ್‌ಗಳಿಗೆ ಆಟ ಮುಗಿಸಿದರು.

ಆದರೆ ಆರಂಭಿಕ ಆಟಗಾರ ಶಿಖರ್ ಧವನ್ ಇಂದಿನ ಪಂದಗ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದರು. 52 ಎಸೆತ ಎದುರಿಸಿದ ಧವನ್ 69ರನ್‌ಗಳ ಕೊಡುಗೆಯನ್ನು ನೀಡಿ ಅಜೇಯವಾಗುಳಿ ದರು. ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೂಡ ಉತ್ತಮ ಸಾಥ್ ನೀಡಿದರು. ಐಯ್ಯರ್ 33 ಎಸೆತಗಳಲ್ಲಿ 42 ರನ್ ಬಾರಿಸಿದ್ದಾರೆ. ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಅಲೆಕ್ಸ್ ಕ್ಯಾರಿ ರನ್ ವೇಗ ಹೆಚ್ಚಿಸಿ ನಿಗದಿ 20 ಓವರ್‌ಗಳಲ್ಲಿ 162 ರನ್‌ಗಳನ್ನು ಗಳಿಸಲು ಕಾರಣ ರಾದರು. ಆದರೆ ಮುಂಬೈ ತಂಡದ ಡಿ ಕಾಕ್ ಹಾಗೂ ಸೂರ್ಯಕುಮಾರ್ ಅರ್ಧ ಶತಕದ ಆಟದೊಂದಿಗೆ ಉತ್ತಮ ಪ್ರದರ್ಶನ ನೀಡಿದರು.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅಂತೆಯೇ ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದು ಕೊಂಡು 162 ರನ್ ಗಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಪರ ಫ್ರಥ್ವಿ ಶಾ 4 ರನ್, ಅಜಿಂಕ್ಯಾ ರಹಾನೆ 15, ಶ್ರೇಯಸ್ ಅಯ್ಯರ್ 42, ಮಾರ್ಕಸ್ ಸ್ಟೋನಿಸ್ 13 ರನ್ ಗಳಿಸಿದ್ದಾರೆ. ಇನ್ನೂ. ಶಿಖರ್ ದವನ್ 69 ರನ್ ಕಲೆ ಹಾಕಿದರು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಕೃಣಾಲ್ ಪಾಂಡ್ಯ ಮಿಂಚಿದರು. ನಾಲ್ಕು ಓವರ್‌ಗಳಲ್ಲಿ ಕೇವಲ 26 ರನ್ ನೀಡಿದ ಕೃಣಾಲ್ 2 ವಿಕೆಟ್ ಕಿತ್ತಿದ್ದಾರೆ. ಬೂಮ್ರಾ, ಚಾಹರ್ ಕೂಡ ಎದುರಾಳಿಯ ರನ್ ‌ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕೆಟ್ ಕೀಪರ್‌ ಕ್ವಿಂಟನ್‌ ಡಿ’ಕಾಕ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.