Friday, 20th September 2024

ಬೆನ್ ಸ್ಟೋಕ್ಸ್ ಆಟಕ್ಕೆ ಮುಂಬೈ ನಿರುತ್ತರ

ಅಬುದಾಬಿ: ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರೋಚಕ ಗೆಲು ವನ್ನು ಸಾಧಿಸಿದೆ. ಮುಂಬೈ ಇಂಡಿಯನ್ಸ್ ನಿಡಿದ್ದ 196 ರನ್‌ಗಳ ಬೃಹತ್ ಟಾರ್ಗೆಟನ್ನು ರಾಜಸ್ಥಾನ್ ಇನ್ನೂ 10 ಎಸೆತಗಳು ಬಾಕಿ ಯಿರುವಂತೆಯೇ ಗೆದ್ದು ಬೀಗಿದೆ. ಈ ಮೂಲಕ ಟೂರ್ನಿಯಲ್ಲಿ ತನ್ನ ಅಸ್ತಿತ್ವವನ್ನು ರಾಜಸ್ಥಾನ್ ಮತ್ತೆ ತೋರಿಸಿದೆ.

ಆಲ್ ರೌಂಡರ್ ಬೆನ್ ಸ್ಟೋಕ್ಸ್ (ಅಜೇಯ 107) ಹಾಗೂ ಸಂಜು ಸ್ಯಾಮ್ಸನ್ (ಅಜೇಯ 54) ಜೊತೆಯಾಟದ ನೆರವಿನಿಂದ ರಾಜಸ್ಥಾನ ರಾಯಲ್ಸ್  ಈ ಪಂದ್ಯವನ್ನು ಗೆದ್ದುಕೊಂಡಿತು.

ಮುಂಬೈ ನೀಡಿದ್ದ ಗುರಿ ಬೆನ್ನತ್ತಿದ ರಾಜಸ್ಥಾನ 18.2 ಓವರ್’ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 196 ರನ್ ಗುರಿ ತಲುಪಿದೆ.  ರಾಜಸ್ಥಾನ ಪರ ಉತ್ತಪ್ಪ 13, ಬೆನ್ ಸ್ಟ್ರೋಕ್ಸ್ 107, ಸ್ಮಿತ್ 11 ಹಾಗೂ ಸಂಜು ಸ್ಯಾಮ್ನ್ಸನ್ ಅಜೇಯ 54 ರನ್ ಗಳಿಸಿದ್ದರು. ಮುಂಬೈ ಪರ ಜೇಮ್ಸ್ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ.

ಇದಕ್ಕೆ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್’ಗೆ 195 ರನ್ ಗಳಿಸಿತ್ತು. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕ್ವಿಂಟನ್ ಡಿ’ಕಾಕ್ (6) ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮಂಕಾದರು. ಎರಡನೇ ವಿಕೆಟ್’ಗೆ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ತಂಡಕ್ಕೆ 83 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾದರು.

ಆಲ್’ರೌಂಡರ್ ಹಾರ್ದಿಕ್ ಪಾಂಡ್ಯ (60 ಅಜೇಯ) ಇವರ ಸ್ಫೋಟಕ ಬ್ಯಾಟಿಂಗ್ ನೆರವಿನ ಕಾರಣ ಮುಂಬೈ ಈ ಸವಾಲಿನ ಮೊತ್ತ ಪೇರಿಸುವಂತಾಗಿತ್ತು.