Sunday, 15th December 2024

ಅಫ್ಘಾನಿಸ್ತಾನದ ಬೌಲರ್ ನವೀನ್-ಉಲ್-ಹಕ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ

ಢಾಕಾ: ಅಫ್ಘಾನಿಸ್ತಾನದ ಮಾರಕ ವೇಗದ ಬೌಲರ್ ನವೀನ್-ಉಲ್-ಹಕ್ 24 ನೇ ವಯಸ್ಸಿ ನಲ್ಲಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಭಾರತದಲ್ಲಿ ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ಮುಂಬರುವ ICC ವಿಶ್ವಕಪ್ 2023 ರ ನಂತರ ನವೀನ್-ಉಲ್-ಹಕ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ವಿಶ್ವಕಪ್‌ಗೂ ಮುನ್ನ ಅಫ್ಘಾನಿಸ್ತಾನದ ಬೌಲರ್ ನವೀನ್ ಉಲ್ ಹಕ್ ತೆಗೆದುಕೊಂಡ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

‘ಈ ವಿಶ್ವಕಪ್ ನಂತರ ನಾನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎನ್ನುವ ನಿರ್ಧಾರವನ್ನು ಹಕ್ ಪ್ರಕಟಿಸಿದ್ದಾರೆ. ಕೆಲಸದ ಹೊರೆ ಮತ್ತು ಇತ್ತೀಚಿನ ಗಾಯ ಗಳಿಂದಾಗಿ, ವೈದ್ಯರು ಮತ್ತು ಫಿಜಿಯೋಥೇರಪಿಸ್ಟ್ ಸಲಹೆ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

‘ನನ್ನ ವೃತ್ತಿಜೀವನ ಮುಂದುವರಿಸಲು ನಾನು ದೀರ್ಘ ಸ್ವರೂಪದ ಕ್ರಿಕೆಟನ್ನು ತೊರೆದು ಟಿ20 ಕ್ರಿಕೆಟ್‌ನತ್ತ ಗಮನಹರಿಸ ಬೇಕಾಗಿದೆ ಎಂದು ನವೀನ್-ಉಲ್-ಹಕ್ ಹೇಳಿದ್ದಾರೆ.

ಅದೃಷ್ಟವಶಾತ್ ನಾನು ವಿಶ್ವಕಪ್‌ನಲ್ಲಿ ಆಡಲು ಫಿಟ್ ಆಗಿದ್ದೇನೆ, ಆದರೆ ಗಾಯಗಳಿಂದಾಗಿ ದೀರ್ಘ ಸ್ವರೂಪದ ಕ್ರಿಕೆಟ್‌ಗೆ ಕಡಿವಾಣ ಹಾಕಲು ಮತ್ತು ಕಡಿಮೆ ಫಾರ್ಮ್ಯಾಟ್‌ಗಳತ್ತ ಗಮನಹರಿಸಲು ನನಗೆ ಸಲಹೆ ನೀಡಲಾಗಿದೆ ಎಂದಿದ್ದಾರೆ.

ಐಪಿಎಲ್ 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಪರವಾಗಿ ಆಡಿದ ನವೀನ್-ಉಲ್-ಹಕ್ 8 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆಯುವ ಮೂಲಕ ಛಾಪು ಮೂಡಿಸಿದ್ದರು. ಐಪಿಎಲ್ 2023 ರಲ್ಲಿ,ನವೀನ್-ಉಲ್-ಹಕ್ ಕ್ರಿಕೆಟ್ ಮೈದಾನದಲ್ಲಿಯೇ ವಿರಾಟ್ ಕೊಹ್ಲಿಯೊಂದಿಗೆ ವಿವಾದ ಸೃಷ್ಟಿಸಿದ್ದರು.

ನವೀನ್-ಉಲ್-ಹಕ್ ಸೆಪ್ಟೆಂಬರ್ 2016 ರಲ್ಲಿ ಅಫ್ಘಾನಿಸ್ತಾನದ ಪರ ODIಗೆ ಪಾದಾರ್ಪಣೆ ಮಾಡಿದರು.