Thursday, 12th December 2024

ಇಂದಿನಿಂದ ಭಾರತ-ಆಸೀಸ್ ಏಕದಿನ ಸರಣಿ ಆರಂಭ

ಸಿಡ್ನಿ: ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಸ್ಥಗಿತವಾಗಿದ್ದ ಕ್ರಿಕೆಟ್ ಸರಣಿ ಶುರುವಾಗಿದ್ದು, ಭಾರತ ಕ್ರಿಕೆಟ್ ತಂಡ ಲಾಕ್ಡೌನ್ ನಂತರ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸರಣಿಯಲ್ಲಿ ಕಣಕ್ಕಿಳಿಯಲಿದೆ.

ಇಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ರೋಹಿತ್ ಶರ್ಮಾ ಬದಲಿಗೆ ಮಯಾಂಕ್ ಅಗರವಾಲ್ – ಶಿಖರ್ ಧವನ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಬೆಳಗ್ಗೆ 9.10 ರಿಂದ ಪಂದ್ಯ ಆರಂಭವಾಗಲಿದೆ.

ಇಂದು ಸಿಡ್ನಿಯಲ್ಲಿ ಮೊದಲ ಪಂದ್ಯ ನಡೆಯಲಿದ್ದು, ನವೆಂಬರ್ 29 ರಂದು ಎರಡನೇ ಪಂದ್ಯ ನಡೆಯಲಿದೆ. ಮೂರನೇ ಪಂದ್ಯ ಡಿಸೆಂಬರ್ 2 ರಂದು ಕ್ಯಾನ್ ಬೆರಾದಲ್ಲಿ ನಡೆಯಲಿದೆ. ಮೊದಲ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಲು ಟೀಂ ಇಂಡಿಯಾ ಸಜ್ಜಾಗಿದೆ.