Sunday, 15th December 2024

2022ರ ಐಪಿಎಲ್ ಗೂ ಬಿಸಿಸಿಐ ರಣತಂತ್ರ

ಮುಂಬೈ: ಕೋವಿಡ್ ಕಾರಣದಿಂದ ಅರ್ಧಕ್ಕೆ ನಿಂತಿರುವ ಪ್ರಸಕ್ತ ಸಾಲಿನ ಐಪಿಎಲ್ ಕೂಟ ಸಪ್ಟೆಂಬರ್ ತಿಂಗಳಲ್ಲಿ ಮತ್ತೆ ಮುಂದುವರಿಯಲಿದೆ. ಆದರೆ ಈ ನಡುವೆ ಮುಂದಿನ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಸಿದ್ದತೆ ನಡೆಸುತ್ತಿದೆ.

2022ರ ಐಪಿಎಲ್ ಗೂ ಬಿಸಿಸಿಐ ರಣತಂತ್ರ ಸಿದ್ದವಾಗುತ್ತಿದೆ. ಮುಂದಿನ ಎಪ್ರಿಲ್ ನಲ್ಲಿ ಭಾರತದಲ್ಲೇ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ಸಿದ್ದಪಡಿಸುತ್ತಿದೆ.

ಹೈಲೈಟ್ ಎಂದರೆ ಎರಡು ಹೆಚ್ಚುವರಿ ತಂಡಗಳ ಸೇರ್ಪಡೆ. ಆಗಸ್ಟ್ ತಿಂಗಳಿನಿಂದ ಕೆಲಸ ಆರಂಭವಾಗಲಿದ್ದು, ಅಕ್ಟೋಬರ್ ನಲ್ಲಿ ಎರಡು ತಂಡಗಳ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ ಎಂದು ವರದಿ ತಿಳಿಸಿದೆ.

ಹರಾಜು ಪ್ರಕ್ರಿಯೆಯು ಮುಂದಿನ ಡಿಸೆಂಬರ್ ನಲ್ಲಿ ನಡೆಯಲಿದೆ. ಪ್ರತಿ ತಂಡ ತನ್ನಲ್ಲಿರು ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಮೂವರು ಭಾರತೀಯರು ಮತ್ತು ಓರ್ವ ವಿದೇಶಿ ಆಟಗಾರ ಅಥವಾ ಇಬ್ಬರು ಭಾರತೀಯರು ಮತ್ತು ಇಬ್ಬರು ವಿದೇಶಿ ಆಟಗಾರರು ಎಂಬ ಲೆಕ್ಕದಲ್ಲಿ ಆಟಗಾರರನ್ನು ತಂಡಗಳು ಉಳಿಸಿಕೊಳ್ಳಬಹುದಾಗಿದೆ ಎಂದು ವರದಿ ತಿಳಿಸಿದೆ.