Thursday, 20th June 2024

ಪ್ಲೇಆಫ್‌​ ಪಂದ್ಯಗಳಲ್ಲಿ ಪ್ರತಿ ಡಾಟ್​ ಬಾಲ್​ಗೆ 500 ಸಸಿ ನೆಡುವ ಯೋಜನೆ: ಬಿಸಿಸಿಐ

ಚೆನ್ನೈ: ದೇಶೀಯ ಕ್ರಿಕೆಟ್ ಪಂದ್ಯಾವಳಿ ಇಂಡಿಯನ್​​ ಪ್ರೀಮಿಯರ್​ ಲೀಗ್ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಪ್ಲೇಆಫ್‌​ ಪಂದ್ಯಗಳಲ್ಲಿ ಪ್ರತಿ ಡಾಟ್​ ಬಾಲ್​ಗೆ 500 ಸಸಿಗಳನ್ನು ನೆಡಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ವಾಗ್ದಾನ ಮಾಡಿದೆ. ಈ ಮೂಲಕ ಪರಿಸರ ಕಾಳಜಿಯನ್ನು ಮೆರೆದಿದೆ. ಬಿಸಿಸಿಐನ ಈ ಅದ್ಭುತ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮಂಗಳವಾರ ರಾತ್ರಿ ನಡೆದ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಸೆಣ ಸಾಡಿದವು. ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ಗೆ ಗುದ್ದು ನೀಡುವ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್​ ಮೊದಲ ತಂಡವಾಗಿ ನೇರವಾಗಿ ಫೈನಲ್​ ತಲುಪಿತು. ಸೋತ ಗುಜರಾತ್​ಗೆ ಫೈನಲ್​ ತಲುಪಲು ಮತ್ತೊಂದು ಅವಕಾಶವಿದೆ.

ಪ್ರತಿ ಡಾಟ್​ ಬಾಲ್​ಗೆ 500 ಸಸಿ: ಪರದೆ ಮೇಲೆ ಕಾಣಿಸುತ್ತಿದ್ದ ಸ್ಕೋರ್​​ ಬೋರ್ಡ್​ನಲ್ಲಿ ಡಾಟ್​ ಬಾಲ್​ ಆದಾಗ ಮರದ ಗ್ರಾಫಿಕ್​​ ಪ್ರದರ್ಶಿಸಲಾಗುತ್ತಿತ್ತು. ವೀಕ್ಷಣೆ ವಿವರಣೆಗಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಬಿಸಿಸಿಐ ಪರಿಸರ ಸಂರಕ್ಷಣೆಗೆ ಯೋಜನೆ ರೂಪಿಸಿದ್ದು, ಅದನ್ನು ಐಪಿಎಲ್​ನ ಪ್ಲೇಆಫ್‌​ ಪಂದ್ಯಗಳಲ್ಲಿ ಜಾರಿ ಮಾಡಿದೆ. ಪ್ಲೇ ಆಫ್‌​ ಪಂದ್ಯಗಳಲ್ಲಿ ಎಸೆತ ಡಾಟ್​ ಆದಲ್ಲಿ ಪ್ರತಿ ಬಾಲ್​ಗೂ 500 ಸಸಿ ನೆಡಲಾಗುವುದು ಎಂದು ತಿಳಿಸಿದೆ.

ಟಿವಿ ಪರದೆಯ ಮೇಲೆ ಸ್ಕೋರ್​ ಬೋರ್ಡ್​ನಲ್ಲಿ ಎಸೆತ ಡಾಟ್​ ಆದಾಗ ಆ ಜಾಗದಲ್ಲಿ ಮರದ ಗ್ರಾಫಿಕ್ ಅನ್ನು ತೋರಿಸ ಲಾಗುತ್ತಿತ್ತು. ಡಾಟ್ ಬಾಲ್ ಚಿಹ್ನೆಯ ಜಾಗದಲ್ಲಿ ಹಸಿರು ಮರ ತೋರಿಸುವ ಮೂಲಕ ಎಷ್ಟು ಡಾಟ್​ ಬಾಲ್​ ಆದವು ಎಂಬ ಅಂಕಿ- ಸಂಖ್ಯೆಯನ್ನೂ ಪ್ರದರ್ಶಿಸಲಾಗುತ್ತಿದೆ. ಪ್ರತಿ ಡಾಟ್​​ ಬಾಲ್​ಗೆ 500 ಮರಗಳು ನೆಡಲಾಗುವುದು ಎಂದು ಘೋಷಿಸಿ ರುವ ಬಿಸಿಸಿಐ, ಯಾವ ನಗರದಲ್ಲಿ ನೆಡಲಿದೆ ಎಂಬುದು ಮುಂದೆ ತಿಳಿದುಬರಲಿದೆ.

ಐಪಿಎಲ್​ ಮುಗಿದ ಬಳಿಕ ಭಾರತ ಹೀಗಾಗಲಿದೆ ಎಂದು ಹಚ್ಚಹಸಿರ ಅರಣ್ಯದ ಚಿತ್ರವನ್ನು ಹಾಕಲಾಗಿದೆ. ಮೊದಲ ಕ್ವಾಲಿ ಫೈಯರ್​ನ ಸಿಎಸ್​ಕೆ ಇನಿಂಗ್ಸ್​ನಲ್ಲಿ ಒಟ್ಟು 34 ಎಸೆತಗಳು ಡಾಟ್​ ಆಗಿವೆ. ಇದರಿಂದ ಸಿಎಸ್​​ಕೆ 17,000 ಸಸಿಗಳನ್ನು ನೆಡುವ ಅಭಿಯಾನಕ್ಕೆ ಅಭಿದಾನ ನೀಡಿತು.

 

error: Content is protected !!