Thursday, 12th December 2024

ಬೆಂಗಳೂರು ಗೆಲುವಿಗೆ 155 ರನ್ನುಗಳ ಗುರಿ ನೀಡಿದ ರಾಜಸ್ಥಾನ

ಅಬುಧಾಬಿ:  ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ತಂಡ ಆರು ವಿಕೆಟ್ ನಷ್ಟಕ್ಕೆ 154 ರನ್ ಗಳನ್ನು ಪೇರಿಸಿ. ಗೆಲುವಿಗೆ 155` ರನ್ ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದ ಬ್ಯಾಟಿಂಗ್ ಆಯ್ದುಕೊಂಡ ಸ್ಮಿತ್ ಪಡೆಯ ಲೆಕ್ಕಾಚಾರ ಆರಂಭದಲ್ಲೇ ತಲೆಕೆಳ ಗಾಯಿತು. ನಾಯಕ್ ಸ್ಮಿತ್ ಕೇವಲ 5 ರನ್ ಗಳಿಗೆ ಇಸೂರ್ ಉಡಾನ್ ಬೌಲಿಂಗ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸಂಜು ಸ್ಯಾಮ್ಸನ್ (4) ಕೂಡ ಒಂದಂಕಿ ದಾಟುವ ಮೊದಲೇ ಚಹಾಲ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಪೇವಿಲಿಯನ್ ಸೇರಿದರು.

ಭರವಸೆ ಮೂಡಿಸಿದ್ದ ಜೋಸ್ ಬಟ್ಲರ್ ಕೂಡ 22 ರನ್ ಗಳಿಸಿ ನವದೀಪ್ ಸೈನಿ ಎಸೆತದಲ್ಲಿ ದೇವ ದತ್ತ್ ಪಡಿಕಲ್ ಗೆ ಕ್ಯಾಚಿತ್ತರು. ಮತ್ತೊಮ್ಮೆ ರಾಬಿನ್ ಉತ್ತಪ್ಪ ನಿರಾಸೆ ಮೂಡಿಸಿದ್ದು ಕೇವಲ 17 ರನ್ ಗಳಿಸಿದರು.

ಬೆಂಗಳೂರು ಪರ ಸ್ಪಿನ್ನರ್‌ ಯಜುವೇಂದ್ರ ಚಹಲ್ 24 ರನ್ ನೀಡಿ ಮೂರು ವಿಕೆಟ್ ಕಿತ್ತರು.