Sunday, 15th December 2024

ಟಾಸ್ ಗೆದ್ದ ಸ್ಮಿತ್ ಪಡೆ ಬ್ಯಾಟಿಂಗ್

ದುಬೈ : ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಆರ್ ಸಿಬಿ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಸ್ಮಿತ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.

ರಾಜಸ್ಥಾನ್ ಅಂಕ ಪಟ್ಟಿಯಲ್ಲಿ 6 ಅಂಕದೊಂದಿಗೆ 7 ನೇ ಸ್ಥಾನದಲ್ಲಿದೆ. ಇತ್ತ ಆರ್ ಸಿಬಿ ತಂಡ ಈ ಬಾರಿ ಉತ್ತಮ ಆರಂಭವನ್ನು ಪಡೆದುಕೊಂಡಿದ್ದು ಇದುವರೆಗೆ ಆಡಿದ 8 ಪಂದ್ಯದಲ್ಲಿ 5 ರಲ್ಲಿ ಗೆಲುವು ಸಾಧಿಸಿ, 3 ಪಂದ್ಯದಲ್ಲಿ ಮುಗ್ಗರಿಸಿ, ಸದ್ಯ 10 ಅಂಕ ದೊಂದಿಗೆ 3 ನೇ ಸ್ಥಾನದೊಂದಿಗೆ ಭದ್ರವಾಗಿ ನಿಂತಿದೆ.

ಪಂಜಾಬ್‌ ವಿರುದ್ಧ ಎಬಿಡಿ ವಿಲಿಯರ್ ಅವರನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸಿದ ಕಾರಣದಿಂದಲೇ ಪಂದ್ಯ ಸೋಲ ಬೇಕಾಯಿತು ಎನ್ನುವುದು ಹಲವರ ಅಭಿಪ್ರಾಯ. ಕೊಹ್ಲಿ ಈ ಪಂದ್ಯದಲ್ಲಿಯೂ ಪ್ರಯೋಗಕ್ಕೆ ಮುಂದಾದರೆ ತಂಡಕ್ಕೆ ಹಿನ್ನೆಡೆ ಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾರಿಸ್‌ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮಿಂಚಿ ತನ್ನ ಆಲ್‌ರೌಂಡರ್‌ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡಿದ್ದಾರೆ.

ಪಡಿಕ್ಕಲ್‌ ಮತ್ತು ಫಿಂಚ್‌ ಈ ಪಂದ್ಯದ ಮೂಲಕ ಮತ್ತೆ ಬ್ಯಾಟಿಂಗ್‌ ಫಾರ್ಮ್ ಗೆ ಮರಳಬೇಕಾದ ಅನಿವಾರ್ಯತೆ ಇದೆ. ನಾಯಕ ವಿರಾಟ್‌ ಮಾತ್ರ ಏಕಾಂಗಿಯಾಗಿ ಹೋರಾಡುತ್ತಿದ್ದು ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರುತಿಲ್ಲ.

ರಾಜಸ್ಥಾನ ತಂಡ ಸ್ಟಾರ್‌ ಆಟಗಾರರಿಂದಲೇ ಕೂಡಿದ್ದರೂ ಯಾರೊಬ್ಬರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಆರಂಭದಲ್ಲಿ ಸತತ ಗೆಲುವಿನೊಂದಿಗೆ ಅಪಾಯಕಾರಿಯಾಗಿ ಗೊಚರಿಸಿದ ರಾಜಸ್ಥಾನ ನಂತರದಲ್ಲಿ ಇದೇ ಪ್ರದರ್ಶನ ತೋರುವಲ್ಲಿ ಎಡವುತ್ತಿದೆ. ರಿಯಾನ್‌ ಪರಾಗ್‌, ಆಲ್‌ರೌಂಡರ್‌ ರಾಹುಲ್‌ ತೆವಾತಿಯಾ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುತ್ತಿರುವುದರಿಂದ ತಂಡ 150ರ ಗಡಿ ದಾಟುವಲ್ಲಿ ಯಶಸ್ವಿಯಾಗುತ್ತಿದೆ. ಬೌಲಿಂಗ್‌ನಲ್ಲಿ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ ಹೊರತು ಪಡಿಸಿ ಮತ್ತಯಾರು ಘಾತಕ ಸ್ಪೆಲ್‌ ನಡೆಸುತ್ತಿಲ್ಲ.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ಕೀಪರ್), ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೇವಟಿಯಾ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ಆರನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ಕೀಪರ್), ಗುರ್ಕೀರತ್ ಸಿಂಗ್ ಮನ್, ವಾಷಿಂಗ್ಟನ್ ಸುಂದರ್, ಕ್ರಿಸ್ ಮೋರಿಸ್, ಶಹಬಾಜ್ ಅಹ್ಮದ್, ಇಸುರು ಉದಾನಾ, ನವದೀಪ್ ಸೈನಿ, ಯುಜ್ವೇಂದ್ರ ಚಹಲ್.

Dailyhunt
Disclaimer: This story is auto-aggregated by a computer program and h