ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shubman Gill: ಶುಭಮನ್‌ ಗಿಲ್‌ ವರ್ತನೆಗೆ ಛೀಮಾರಿ ಹಾಕಿದ ನೆಟ್ಟಿಗರು

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಕ್ನೋ ಸೂಪರ್ ಜೈಂಟ್ಸ್‌ ಸ್ಫೋಟಕ ಆಟವಾಡಿ 20 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 235 ರನ್‌ ಪೇರಿಸಿತು. ಬೃಹತ್‌ ಗುರಿ ಬೆನ್ನತ್ತಿದ ಗುಜರಾತ್‌ ಟೈಟಾನ್ಸ್ 9 ವಿಕೆಟ್‌ಗೆ 202 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಲಕ್ನೋ ಪರ ಮಿಚೆಲ್‌ ಮಾರ್ಷ್‌ 64 ಎಸೆತಕ್ಕೆ 117 ರನ್‌ ಸಿಡಿಸಿದರೆ, ಪೂರನ್‌ 27 ಎಸೆತಕ್ಕೆ ಔಟಾಗದೆ 56 ರನ್‌ ಬಾರಿಸಿದರು.

ಶುಭಮನ್‌ ಗಿಲ್‌ ವರ್ತನೆಗೆ ಛೀಮಾರಿ ಹಾಕಿದ ನೆಟ್ಟಿಗರು

Profile Abhilash BC May 23, 2025 11:40 AM

ಅಹಮದಾಬಾದ್‌: ಗುರುವಾರ ನಡೆದಿದ್ದ ಐಪಿಎಲ್‌(IPL 2025) ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌(LSG vs GT) ವಿರುದ್ಧ ಗುಜರಾತ್‌ ಟೈಟಾನ್ಸ್‌ 33 ರನ್‌ ಅಂತರದ ಸೋಲು ಕಂಡಿತ್ತು. ಈ ಸೋಲು ಟೈಟಾನ್ಸ್‌ನ ಅಗ್ರ-ಎರಡು ಸ್ಥಾನಗಳನ್ನು ಪಡೆಯುವ ಭರವಸೆಯನ್ನು ಘಾಸಿಗೊಳಿಸಿತು. ಸೋಲಿನ ಆಘಾತದಲ್ಲಿ ಪಂದ್ಯದ ಬಳಿಕ ಶುಭಮನ್‌ ಗಿಲ್‌(Shubman Gill) ಲಕ್ನೋ ತಂಡದ ನಾಯಕ ರಿಷಭ್‌ ಪಂತ್‌(rishabh pant) ಜತೆ ನಡೆದುಕೊಂಡ ರೀತಿಗೆ ಇದೀಗ ನೆಟ್ಟಿಗರು ಗಿಲ್‌ಗೆ ಛೀಮಾರಿ ಹಾಕಿದ್ದಾರೆ.

ಪಂದ್ಯದ ಮುಕ್ತಾಯದ ಬಳಿಕ ಆಟಗಾರರು ಹಸ್ತಲಾಘವ ಮಾಡುವ ವೇಳೆ ರಿಷಭ್‌ ಪಂತ್‌ ಅವರು ಶುಭಮನ್‌ ಗಿಲ್‌ ಜತೆ ಮಾತನಾಡಲು ಮುಂದಾದರು. ಈ ವೇಳೆ ಗಿಲ್‌ ಸಿಟ್ಟಿನಲ್ಲೇ ಪಂತ್‌ ಅವರ ಮುಖವನ್ನು ನೋಡದೆ ಕೈ ಕುಳುಕಿ ತೆರಳಿದರು. ಈ ಘಟನೆಯ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಗಿಲ್‌ ವರ್ತನೆಗೆ ನೆಟ್ಟಿಗರು ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.



ಸೋಲು ಗೆಲುವು ಪಂದ್ಯದ ಭಾಗ. ತಂಡದ ಸೋಲಿಗೆ ಎದುರಾಳಿ ನಾಯಕನ ವಿರುದ್ಧ ಕೋಪಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಭಾರತದ ಭವಿಷ್ಯದ ನಾಯಕನೆಂದೇ ಗುರುತಿಸಿಕೊಂಡಿರುವ ನಿಮ್ಮ ಈ ವರ್ತನೆ ಸರಿಯಲ್ಲ. ಇಷ್ಟೊಂದು ಕೊಬ್ಬು ಒಳ್ಳೆಯದಲ್ಲ ಎಂದು ನೆಟ್ಟಿಗರು ಗಿಲ್‌ಗೆ ಚಾಟಿ ಬೀಸಿದ್ದಾರೆ.



ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಕ್ನೋ ಸೂಪರ್ ಜೈಂಟ್ಸ್‌ ಸ್ಫೋಟಕ ಆಟವಾಡಿ 20 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 235 ರನ್‌ ಪೇರಿಸಿತು. ಬೃಹತ್‌ ಗುರಿ ಬೆನ್ನತ್ತಿದ ಗುಜರಾತ್‌ ಟೈಟಾನ್ಸ್ 9 ವಿಕೆಟ್‌ಗೆ 202 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಲಕ್ನೋ ಪರ ಮಿಚೆಲ್‌ ಮಾರ್ಷ್‌ 64 ಎಸೆತಕ್ಕೆ 117 ರನ್‌ ಸಿಡಿಸಿದರೆ, ಪೂರನ್‌ 27 ಎಸೆತಕ್ಕೆ ಔಟಾಗದೆ 56 ರನ್‌ ಬಾರಿಸಿದರು. ರಿಷಭ್‌ ಪಂತ್‌ 6 ಎಸೆತಕ್ಕೆ ಎರಡು ಸಿಕ್ಸರ್ ಸಹಿತ ಔಟಾಗದೆ 16 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಲಕ್ನೋ: 20 ಓವರಲ್ಲಿ 235/2 (ಮಿಚೆಲ್‌ 117, ಪೂರನ್‌ ಔಟಾಗದೆ 56, ಕಿಶೋರ್‌ 1-34), ಗುಜರಾತ್‌: 20 ಓವರಲ್ಲಿ 202/9 (ಶಾರುಖ್‌ 57, ರುಥರ್‌ಫೋರ್ಡ್‌ 38, ಒರೌರ್ಕೆ 3-27)