Thursday, 19th September 2024

ದಕ್ಷಿಣ ಆಫ್ರಿಕಾ ಬೌಲಿಂಗಿಗೆ ಸದ್ದು ಮಾಡದ ನೆದರ್ಲೆಂಡ್‌

ಧರ್ಮಶಾಲಾ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಅಜೇಯರಾಗಿರುವ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಮಂಗಳವಾರ ನೆದರ್ಲೆಂಡ್‌ ತಂಡವನ್ನು ಎದುರಿಸುತ್ತಿದೆ.

ಇತ್ತೀಚಿನ ವರದಿ ಪ್ರಕಾರ, ನೆದರ್ಲೆಂಡ್‌ ತಂಡ 27ಓವರು ಮುಗಿಯುವಷ್ಟರಲ್ಲಿ 112 ರನ್ನಿಗೆ 6 ವಿಕೆಟ್ ಕಳೆದು ಕೊಂಡಿದೆ. ಆಫ್ರಿಕಾ ವೇಗಿಗಳಾದ ಕಗಿಸೋ ರಬಾಡ ಹಾಗೂ ಮಾರ್ಕೋ ಜಾನ್ಸನ್ ತಲಾ ಎರಡು ವಿಕೆಟ್ ಕಿತ್ತರು.

ಪಂದ್ಯಾರಂಭವಾದಾಗ ಮಳೆ ಸುರಿದ ಕಾರಣ, ಓವರನ್ನು 43 ಕ್ಕೆ ಇಳಿಸಲಾಗಿದೆ. ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಒಂದು ಇನ್ನಿಂಗ್ಸ್​​ನಲ್ಲಿ ತಲಾ 43 ಓವರ್​ಗಳನ್ನು ಆಡಿಸಲಾಗುತ್ತದೆ.

ಏಳು ಓವರ್​ ಕಡಿತ ಮಾಡಿರುವುದರಿಂದ ಪವರ್​ ಪ್ಲೇ ಮತ್ತು ಬೌಲಿಂಗ್ ನಿಯಮದಲ್ಲಿ ಬದಲಾವಣೆ ಮಾಡ ಲಾಗಿದೆ. ಮೊದಲ ಪವರ್​ ಪ್ಲೇ 1-9ನೇ ಓವರ್‌ ವರೆಗೆ, 10-35 ಎರಡನೇ ಮತ್ತು 36 ರಿಂದ 43ರಲ್ಲಿ 3ನೇ ಪವರ್​ ಪ್ಲೇ ಇರಲಿದೆ. 3 ಬೌಲರ್​ಗಳು ಗರಿಷ್ಠ 9 ಓವರ್​ ಮತ್ತು ಇಬ್ಬರು ಗರಿಷ್ಠ 8 ಓವರ್​ಗಳನ್ನು ಮಾತ್ರ ಮಾಡಬೇಕಿದೆ.

Leave a Reply

Your email address will not be published. Required fields are marked *