Friday, 22nd November 2024

ವಿಶ್ವಕಪ್‌ ಗೆಲುವಿಗೆ ಹತ್ತರ ಹರೆಯ: ಟ್ರೆಂಡ್‌ ಆದ #WorldCup2011

ಮುಂಬೈ: ದೇಶ-ವಿದೇಶದ ಕ್ರಿಕೆಟ್‌ ಪ್ರೇಮಿಗಳಿಗೆ ಇಂದಿನ ದಿನವನ್ನು ಮರೆಯಲು ಸಾಧ್ಯವಿಲ್ಲ. ಕ್ರಿಕೆಟ್‌ ಅನ್ನು ಒಂದು ಧರ್ಮ ವೆಂದು ಪರಿಗಣಿಸುವ ಭಾರತೀಯರಿಗೆ ಇಂದಿನ ದಿನ ಬಹು ವಿಶಿಷ್ಠ.

ಏಕೆಂದರೆ 2011 ರಲ್ಲಿ ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಕ್ರಿಕೆಟ್ ದಿನ ಇದಾಗಿದೆ.

ಈ ಸಂಭ್ರಮವನ್ನು 10 ವರ್ಷಗಳ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ತಡರಾತ್ರಿಯಿಂದ ಭಾರತ ವಿಶ್ವಕಪ್ ಗೆದ್ದ ಕ್ಷಣವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟರ್‌ನಲ್ಲಿ #WorldCup2011 ಟ್ರೆಂಡ್ ಆಗಿದೆ.

ಕ್ರಿಕೆಟ್ ಅಭಿಮಾನಿಗಳು ಭಾರತ ತಂಡ ವಿಶ್ವಕಪ್ ಜಯಿಸಿದ ಸಂತೋಷ ಸಂಭ್ರಮಿಸುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ತಮ್ಮ ನೆನಪುಗಳನ್ನು ಹಂಚಿಕೊಳ್ಳತೊಡಗಿದ್ದಾರೆ.

ಎಂಎಸ್ ಧೋನಿ ಮತ್ತು ಗೌತಮ್ ಗಂಭೀರ್ ಹಾಗೂ ಜಹೀರ್ ಖಾನ್ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣರಾಗಿ ದ್ದಾರೆ. ಯುವರಾಜ್ ಸಿಂಗ್ ಟೂರ್ನಿಯಲ್ಲಿ ಉತ್ತಮವಾಗಿ ಆಡಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

2011 ರ ವಿಶ್ವಕಪ್ ಫೈನಲ್ ನಲ್ಲಿ ಶ್ರೀಲಂಕಾ 274 ರನ್ ಗಳಿಸಿದ್ದು, ಭಾರತ ತಂಡ ಗೆಲುವಿನ ಗುರಿ ಬೆನ್ನತ್ತಿದಾಗ ಉತ್ತಮ ಆರಂಭ ಪಡೆದಿರಲಿಲ್ಲ. ಗೌತಮ್ ಗಂಭೀರ್ ಮತ್ತು ಎಂಎಸ್ ಧೋನಿ ಜೊತೆಯಾಗಿ 109 ರನ್ ಗಳಿಸಿದ್ದರು. 97 ರನ್ ಗಳಿಸಿದ ಗಂಭೀರ್ ಔಟಾದ ನಂತರ ಎಂಎಸ್ ಧೋನಿಯೊಂದಿಗೆ ಯುವರಾಜ್ ಸಿಂಗ್ ಜೋಡಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ವಿಶ್ವಕಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily