ಮುಂಬೈ: ಟೀಂ ಇಂಡಿಯಾದ ದಂತಕತೆ, ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಆಪ್ತ ಗೆಳೆಯ ಮುಂಬೈನ ಮಾಜಿ ವೇಗಿ ವಿಜಯ್ ಶಿರ್ಕೆ ಕೊರೊನಾದಿಂದಾಗಿ ಥಾಣೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರಿಗೆ 57 ವರ್ಷ ವಯಸ್ಸಾಗಿತ್ತು. ಶಿರ್ಕೆ, ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಜೊತೆ ಕ್ರಿಕೆಟ್ ಆಡಿದ್ದರು. ಇದೇ ವರ್ಷದ ಅಕ್ಟೋಬರ್ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತೊಬ್ಬ ಆಪ್ತ ಸ್ನೇಹಿತ ಕದಂ ಕೂಡ ಕೊರೊನಾದಿಂದಾಗಿ ನಿಧನರಾಗಿದ್ದರು.
ಕಲ್ಯಾಣ್ನಲ್ಲಿ ಹುಟ್ಟಿ ಬೆಳೆದಿದ್ದ ಶಿರ್ಕೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ನಲ್ಲಿ 17 ವರ್ಷದೊಳಗಿನವರಿಗೆ 2 ವರ್ಷಗಳ ಕಾಲ ತರಬೇತಿ ನೀಡಿದ್ದರು. ಸಂತಾಪ ಸೂಚಿಸಿರುವ ಕಾಂಬ್ಲಿ, ಶಿರ್ಕೆಯ ನಿಧನ ವಾರ್ತೆ ಕೇಳಿ ತುಂಬಾನೇ ದುಃಖವಾಗಿದೆ. ವೈಯಕ್ತಿಕ ವಾಗಿ ಇದು ನನಗೆ ಬಹಳ ದೊಡ್ಡ ನಷ್ಟವಾಗಿದೆ. ವಿಜಯ್ ಶಿರ್ಕೆ ಪರಿಶ್ರಮ ಪಡುವ ಹಾಗೂ ಪರೋಪಕಾರಿ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.