Saturday, 14th December 2024

ತೆಂಡೂಲ್ಕರ್​ ಆಪ್ತ ಮುಂಬೈನ ಮಾಜಿ ವೇಗಿ ಕೊರೊನಾಕ್ಕೆ ಬಲಿ

ಮುಂಬೈ: ಟೀಂ ಇಂಡಿಯಾದ ದಂತಕತೆ, ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​ ಆಪ್ತ ಗೆಳೆಯ ಮುಂಬೈನ ಮಾಜಿ ವೇಗಿ ವಿಜಯ್​ ಶಿರ್ಕೆ ಕೊರೊನಾದಿಂದಾಗಿ ಥಾಣೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರಿಗೆ 57 ವರ್ಷ ವಯಸ್ಸಾಗಿತ್ತು.  ಶಿರ್ಕೆ, ಸಚಿನ್​ ತೆಂಡೂಲ್ಕರ್​ ಹಾಗೂ ವಿನೋದ್ ಕಾಂಬ್ಳಿ ಜೊತೆ ಕ್ರಿಕೆಟ್​ ಆಡಿದ್ದರು. ಇದೇ ವರ್ಷದ ಅಕ್ಟೋಬರ್​ನಲ್ಲಿ ಸಚಿನ್​ ತೆಂಡೂಲ್ಕರ್​ ಮತ್ತೊಬ್ಬ ಆಪ್ತ ಸ್ನೇಹಿತ ಕದಂ ಕೂಡ ಕೊರೊನಾದಿಂದಾಗಿ ನಿಧನರಾಗಿದ್ದರು.

ಕಲ್ಯಾಣ್​ನಲ್ಲಿ ಹುಟ್ಟಿ ಬೆಳೆದಿದ್ದ ಶಿರ್ಕೆ ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ನಲ್ಲಿ 17 ವರ್ಷದೊಳಗಿನವರಿಗೆ 2 ವರ್ಷಗಳ ಕಾಲ ತರಬೇತಿ ನೀಡಿದ್ದರು. ಸಂತಾಪ ಸೂಚಿಸಿರುವ ಕಾಂಬ್ಲಿ, ಶಿರ್ಕೆಯ ನಿಧನ ವಾರ್ತೆ ಕೇಳಿ ತುಂಬಾನೇ ದುಃಖವಾಗಿದೆ. ವೈಯಕ್ತಿಕ ವಾಗಿ ಇದು ನನಗೆ ಬಹಳ ದೊಡ್ಡ ನಷ್ಟವಾಗಿದೆ. ವಿಜಯ್​ ಶಿರ್ಕೆ ಪರಿಶ್ರಮ ಪಡುವ ಹಾಗೂ ಪರೋಪಕಾರಿ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.