Saturday, 14th December 2024

ಸರಣಿಯಿಂದ ಹೊರ ಬಿದ್ದ ಉಮೇಶ್ ಯಾದವ್

ಸಿಡ್ನಿ:ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ವೇಳೆ ಕಾಲಿನ ಗಾಯಕ್ಕೀಡಾಗಿದ್ದ ಭಾರತದ ವೇಗಿ ಉಮೇಶ್ ಯಾದವ್ ಹೊರ ಬಿದ್ದಿದ್ದಾರೆ.

ಕಾಲಿನ ಹಿಂಭಾಗದ ಸ್ನಾಯು ನೋವಿಗೆ ತುತ್ತಾಗಿದ್ದ ಉಮೇಶ್ ದ್ವಿತೀಯ ಟೆಸ್ಟ್‌ನ 4ನೇ ಓವರ್‌ (3.3 ಓವರ್‌ಗೆ ಎಸೆದಿದ್ದರು) ಅರ್ಧಕ್ಕೆ ನಿಲ್ಲಿಸಿ ಮೈದಾನದಿಂದ ಹೊರ ನಡೆದಿದ್ದರು. ಯಾದವ್ ಓವರ್‌ ಅನ್ನು ವೇಗಿ ಮೊಹಮ್ಮದ್ ಸಿರಾಜ್ ಪೂರ್ಣಗೊಳಿಸಿ ದ್ದರು.

ಮೂರನೇ ಟೆಸ್ಟ್ ಪಂದ್ಯ ಜನವರಿ 7ರಂದು ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಉಮೇಶ್ ಯಾದವ್ ಬದಲಿಗೆ ವೇಗಿ ಟಿ ನಟರಾಜನ್ ಅವರನ್ನು ಭಾರತ ತಂಡದಲ್ಲಿ ಹೆಸರಿಸಲಾಗಿದೆ. ನಟರಾಜನ್ ಈ ಪಂದ್ಯದ ಮೂಲಕ ಟೆಸ್ಟ್‌ಗೆ ಪಾದಾರ್ಪಣೆ ಮಾಡುವುದನ್ನು ನಿರೀಕ್ಷಿಸಲಾಗಿದೆ.

ಈಗಾಗಲೇ ನಡೆದಿದರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ಜಯ ಗಳಿಸಿದ್ದರೆ, ಮತ್ತೊಂದರಲ್ಲಿ ಪ್ರವಾಸಿ ಭಾರತ 8 ವಿಕೆಟ್ ಗೆಲುವು ಸಾಧಿಸಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯೀಗ 1-1ರಿಂದ ಸಮಬಲಗೊಂಡಿದೆ.