Sunday, 15th December 2024

ಹೆಣ್ಣು ಮಗುವಿಗೆ ಜನ್ಮವಿತ್ತ ಅನುಷ್ಕಾ ಶರ್ಮಾ

ನವದೆಹಲಿ: ಆಸೀಸ್‌ ಸರಣಿಯಿಂದ ಪಿತೃತ್ವ ರಜೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಪತ್ನಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಸೋಮವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸೋಮವಾರ ಮಧ್ಯಾಹ್ನ ಹೆಣ್ಣು ಮಗುವಿಗೆ ಜನ್ಮವಾಗಿದೆ ಎಂದು ವಿರಾಟ್‌ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಪತ್ನಿ ಅನುಷ್ಕಾ ಹಾಗೂ ಮಗು ಆರೋಗ್ಯವಾಗಿದ್ದು, ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ ದ್ದಾರೆ.

ಮೊದಲ ಮಗುವಿನ ಆಗಮನದ ಕುರಿತು ವಿರುಷ್ಕಾ ಕಳೆದ ಆಗಸ್ಟ್‌ 2020ರಲ್ಲಿ ಹೇಳಿದ್ದರು. ಮಗು ಜನಿಸಿದ ಬಳಿಕವೂ ಸಿನೆಮಾ ಕ್ಷೇತ್ರದಲ್ಲಿ ಮುಂದುವರಿಯುವುದಾಗಿ ಅನುಷ್ಕಾ ಹೇಳಿದ್ದರು.

ದೆಹಲಿಯ ಬ್ರೀಚ್‍ಕ್ಯಾಂಡಿ ಆಸ್ಪತ್ರೆಗೆ ದಾಖಲಾದ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಮನೆಗೆ ಲಕ್ಷ್ಮಿಯನ್ನು ಕರೆ ತಂದಿದ್ದಾರೆ.