Saturday, 14th December 2024

ಕುಸ್ತಿ ಸ್ಪರ್ಧೆ: ಸೆಮಿ ಫೈನಲ್’ಗೆ ರವಿ ಕುಮಾರ್ ದಹಿಯಾ, ದೀಪಕ್ ಪುನಿಯಾ ಲಗ್ಗೆ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬುಧವಾರ ಕುಸ್ತಿ ಸ್ಪರ್ಧೆಯಲ್ಲಿ ರವಿ ಕುಮಾರ್ ದಹಿಯಾ ಮತ್ತು ದೀಪಕ್ ಪುನಿಯಾ ತಮ್ಮ ವೈಯಕ್ತಿಕ ವಿಭಾಗದಲ್ಲಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

ಪುರುಷರ 57ಕೆಜಿ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ರವಿ ದಹಿಯಾ, ಬಲ್ಗೇರಿಯಾದ ಜಾರ್ಜಿ ವಾಂಗೆಲೋವ್ ಅವರನ್ನು ನೇರ 14-4 ಅಂತರದಿಂದ ಪರಾಜಯಗೊಳಿಸಿದ್ದರೆ, ದೀಪಕ್ ಪುನಿಯಾ ಚೀನಾದ ಜುಶೆನ್ ಲಿನ್ ಅವರನ್ನು 86 ಕೆಜಿ ವಿಭಾಗದಲ್ಲಿ 6-3ರ ಅಂತರದಿಂದ ಸೋಲಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.

ಮಧ್ಯಾಹ್ನ ನಡೆಯಲಿರುವ 57 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ದಹಿಯಾ ಅವರು ಕಝಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಸೆಣಸಲಿದ್ದು, ದೀಪಕ್ ಪುನಿಯಾ ಅಮೆರಿಕದ ಡೇವಿಡ್ ಮೊರಿಸ್ ಸವಾಲನ್ನು ಎದುರಿಸ ಲಿದ್ದಾರೆ. ಬೆಳ್ಳಿ ಪದಕ ಪಡೆಯುವ ನಿರೀಕ್ಷೆ ಭರವಸೆ ಮೂಡಿಸಿದೆ.

ವನಿತಾ ಕುಸ್ತಿಯ 62ಕೆಜಿ ಫ್ರೀಸ್ಟೈಲ್ ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಸೋನಮ್ ಮಲಿಕ್ ಸೋಲು ಕಂಡಿದ್ದಾರೆ. ಸೋಮನ್ ಮುಂಗೋಲಿಯಾದ ಬೊಲೊರ್ಟುಯಾ ಖುರೆಲ್ಕು ವಿರುದ್ಧ 2-2 ಸಮಬಲದ ಪೈಪೋಟಿ ನೀಡಿದರೂ ಸೋತು ಹೊರಬಿದ್ದಿದ್ದರು.