Sunday, 22nd December 2024

Yuzvendra Chahal: 5 ವಿಕೆಟ್‌ ಕಿತ್ತು ದೇಶೀಯ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಚಹಲ್‌

Yuzvendra Chahal

ಲಂಡನ್:‌ ಭಾರತ ಕ್ರಿಕೆಟ್‌ ತಂಡದಲ್ಲಿ ಸರಿಯಾಗಿ ಅವಕಾಶ ಸಿಗದ ಕಾರಣ ಇಂಗ್ಲೆಂಡ್​ನ ನಾರ್ಥಾಂಪ್ಟನ್​ನ(Northamptonshire) ಕೌಂಟಿ ಮೈದಾನದಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್​ಶಿಪ್(County Cricket Senior)​ ಆಡುತ್ತಿರುವ ಸ್ಪಿನ್ನರ್‌ ಯಜುವೇಂದ್ರ ಚಹಲ್‌(Yuzvendra Chahal) ಅವರು ಪಂದ್ಯವೊಂದರಲ್ಲಿ 5 ವಿಕೆಟ್‌ ಕಿತ್ತು ಮಿಂಚಿದ್ದಾರೆ. ಜತೆಗೆ ಈ ಸಾಧನೆಯೊಂದಿಗೆ ದೇಶೀಯ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪೂರ್ತಿಗೊಳಿಸಿದ ದಾಖಲೆ ಬರೆದರು.

ನಾರ್ಥಾಂಪ್ಟನ್ ಶೈರ್ ತಂಡದ ಆಟಗಾರನಾಗಿರುವ ಚಹಲ್‌ ಡರ್ಬಿಶೈರ್ ವಿರುದ್ಧದ ಪಂದ್ಯದಲ್ಲಿ 45 ರನ್‌ಗಳಿಗೆ ಐದು ವಿಕೆಟ್ ಕಿತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರನೇ ಬಾರಿಗೆ ಐದು ವಿಕೆಟ್ ಕಿತ್ತ ಸಾಧನೆಗೈದರು. ಚಹಲ್‌ ಸ್ಪಿನ್‌ ಮೋಡಿಗೆ ತರಗೆಲೆಯಂತೆ ಉದುರಿದ ಡರ್ಬಿಶೈರ್ ತಂಡದ ಬ್ಯಾಟರ್‌ಗಳು ಕೇವಲ 165 ರನ್​ ಗಳಿಸಲಷ್ಟೇ ಶಕ್ತವಾದರು. ಕಳೆದ ತಿಂಗಳು ನಡೆದ ಏಕದಿನ ಕಪ್‌ನಲ್ಲಿ ಕೆಂಟ್ ವಿರುದ್ಧ ಚಹಲ್‌ 14 ರನ್‌ಗೆ 5 ವಿಕೆಟ್‌ ಕಿತ್ತಿದ್ದರು. ಕೌಂಟಿ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ತೋರುತ್ತಿದ್ದರೂ ಕೂಡ ಚಹಲ್‌ಗೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅವಕಾಶ ಸಿಗಲಿಲ್ಲ.

ಕಳೆದ ವರ್ಷ ನಡೆದಿದ್ದ ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿಯೂ ಯಜುವೇಂದ್ರ ಚಾಹಲ್‌ಗೆ ಅವಕಾಶ ಸಿಕ್ಕಿರಲಿಲ್ಲ. ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದರೂ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಚಹಲ್​ ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ. ಇದುವರೆಗೂ ಟೆಸ್ಟ್​ ಕ್ರಿಕೆಟ್​ ಆಡಿಲ್ಲ. ಚಹಲ್‌ ಭಾರತ ಪರ ಕೊನೆಯ ಬಾರಿಗೆ 2023ರಲ್ಲ. ಇದಾದ ಬಳಿಕ ಅವರಿಗೆ ಸರಿಯಾದ ಅವಕಾಶ ಸಿಗಲೇ ಇಲ್ಲ. ಇವರ ಸ್ಥಾನದಲ್ಲಿ ಕುಲ್‌ದೀಪ್‌ ಯಾದವ್‌ ಮಿಂಚತೊಡಗಿದರು. ಇನ್ನೊಂದೆಡೆ ಅಕ್ಷರ್‌ ಪಟೇಲ್‌ ಕೂಡ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲಿಯೂ ನಿರೀಕ್ಷತ ಪ್ರದರ್ಶನ ತೋರುತ್ತಿರುವುದು ಕೂಡ ಚಹಲ್‌ಗೆ ಅವಕಾಶ ಸಿಗದಂತಾಯಿತು.

ಇದನ್ನೂ ಓದಿ Gautam Gambhir:ಕೋಚ್‌ ಗಂಭೀರ್‌ ಪ್ರಕಟಿಸಿದ ಸಾರ್ವಕಾಲಿಕ ಭಾರತ ತಂಡದಲ್ಲಿ ರೋಹಿತ್‌ಗಿಲ್ಲ ಅವಕಾಶ