ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಜೆ.ಪಿ ನಗರದಲ್ಲಿ ಟ್ಯೂಷನ್‌ಗೆಂದು ಬರುತ್ತಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ಮನವೊಲಿಸಿ ಶಿಕ್ಷಕನೇ ಅಪಹರಿಸಿ ಪರಾರಿಯಾಗಿದ್ದ ಪ್ರಕರಣವೊಂದು ನಡೆದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಪಿ ನಗರ ಠಾಣೆಯ ಪೊಲೀಸರು ಆರೋಪಿ ಶಿಕ್ಷಕನನ್ನು ಅರೆಸ್ಟ್ ಮಾಡಿ ಪೋಕ್ಸೋ ಕಾಯ್ದೆಯಡಿ ಜೈಲಿಗೆ ಕಳುಹಿಸಿದ್ದಾರೆ(Bengaluru News)
ಜನವರಿ 4 ರಂದು ಕನಕಪುರ ಮೂಲದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಪಾಲಕರು ನೀಡಿದ ದೂರಿನ ಅನ್ವಯ ಶಿಕ್ಷಕ ಅಭಿಷೇಕ್(Abhishek) ವಿರುದ್ಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಇದೀಗ ಬಾಲಕಿಯ ಜೊತೆ ಪರಾರಿಯಾಗಿದ್ದ ಶಿಕ್ಷಕ ಅಭಿಷೇಕ್‌ನನ್ನು ಜೆಪಿ ನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಬಾಲಕಿಯನ್ನು ಸುರಕ್ಷಿತವಾಗಿ ಆಕೆಯ ಪಾಲಕರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ(Tuition Teacher Case)
ಏನಿದು ಪ್ರಕರಣ?
ಅಭಿಷೇಕ್ ವಿವಾಹಿತನಾಗಿದ್ದು, ಜಿಮ್ ಟ್ರೈನರ್ ಆಗಿದ್ದ. ಅಷ್ಟೇ ಅಲ್ಲದೆ ಖಾಸಗಿಯಾಗಿ ಟ್ಯೂಷನ್ ತರಗತಿಗಳನ್ನು ಕೂಡ ನಡೆಸುತ್ತಿದ್ದ. ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯೂ ಇಲ್ಲಿ ಟ್ಯೂಷನ್ಗೆ ಬರುತ್ತಿದ್ದಳು. ಈ ನಡುವೆ ಶಿಕ್ಷಕ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಟ್ಯೂಷನ್‌ನಿಂದ ರಾತ್ರಿಯಾದರೂ ವಿದ್ಯಾರ್ಥಿನಿ ಮನೆಗೆ ಬಾರದಿದ್ದಾಗ ಆಕೆಯ ಪೋಷಕರು ಟ್ಯೂಷನ್ ಸೆಂಟರ್ ಬಳಿ ಹೋಗಿ ವಿಚಾಸಿದ್ದರು. ಆ ವೇಳೆ ಶಿಕ್ಷಕ ಅಭಿಷೇಕ್ ಕರೆದು ಕೊಂಡು ಹೋಗಿರುವುದಾಗಿ ಅಲ್ಲಿದ್ದವರು ಹೇಳಿದ್ದರು. ನಂತರ ಪಾಲಕರು ಅಭಿಷೇಕ್ ಮೊಬೈಲ್ ಸಂಪರ್ಕಿಸಿದಾಗ ರೂಮ್‌ನಲ್ಲಿ ಮೊಬೈಲ್ ಬಿಟ್ಟು ವಿದ್ಯಾರ್ಥಿನಿ ಜೊತೆಗೆ ಹೋಗಿರುವುದು ಕಂಡು ಬಂದಿತ್ತು.
ಸುಳಿವು ಕೊಟ್ಟವರಿಗೆ 25000 ರೂ. ಬಹುಮಾನ ಘೋಷಣೆ
ಆರೋಪಿ ಅಭಿಷೇಕ್‌ಗಾಗಿ ಹಲವು ದಿನಗಳಿಂದ ಪೊಲೀಸರು ತಲಾಶ್ ನಡೆಸುತ್ತಿದ್ದರೂ ಯಾವುದೇ ರೀತಿಯಲ್ಲೂ ಆತನ ಸುಳಿವು ಪತ್ತೆಯಾಗಿರಲಿಲ್ಲ. ಹೀಗಾಗಿ ಅಭಿಷೇಕ್ ಸುಳಿವು ನೀಡಿದರೆ 25 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸ್ ಪ್ರಕಟಣೆ ಹೊರಡಿಸಲಾಗಿತ್ತು. ಇದೀಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.
6 ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿ ಹೋದ ಮಹಿಳೆ
ಇತ್ತೀಚೆಗಷ್ಟೇ 36 ವರ್ಷದ ಮಹಿಳೆಯೊಬ್ಬಳು ತನ್ನ ಪತಿ ಮತ್ತು ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿ ಹೋಗಿರುವ ಘಟನೆಯೊಂದು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿತ್ತು. ಆಕೆಯ ಪತಿ ರಾಜು ಎನ್ನುವವರು ಸೆಕ್ಷನ್ 87ರ ಅಡಿಯಲ್ಲಿ ದೂರು ದಾಖಲಿಸಿದ್ದರು. ಕೇಸ್ ದಾಖಲಾಗುತ್ತಿದ್ದಂತೆ ಪೊಲೀಸರು ಆಕೆಯ ಹುಡುಕಾಟ ನಡೆಸಿದ್ದರು.
ಮಗುವಿಗೆ ಬಟ್ಟೆ ತರಲೆಂದು ಮಾರುಕಟ್ಟೆಗೆ ತೆರಳಿದ ಮಹಿಳೆ ಮನೆಗೆ ಹಿಂತಿರುಗಿದ ಕಾರಣ ಪತಿ ಆತಂಕಗೊಂಡು ದೂರು ನೀಡಿದ್ದರು. ಬಳಿಕ ಆಕೆ ಭಿಕ್ಷುಕನ ಜತೆ ಓಡಿ ಹೋಗಿರುವ ವಿಚಾರ ಬೆಳಕಿಗೆ ಬಂದಿತ್ತು. ಇದನ್ನು ಅರಿತ ಪತಿ ಆಕೆಯನ್ನು ಹುಡುಕಿ ಕೊಡಿ ಎಂದು ಪೊಲೀಸರ ಬಳಿ ಕಣ್ಣೀರಿಟ್ಟಿದ್ದರು.
ಈ ಸುದ್ದಿಯನ್ನೂ ಓದಿ:ದರೋಡೆಕೋರ ಸುರಿಂದರ್ ಪಾಲ್ ಸಿಂಗ್ ಆಸ್ಪತ್ರೆಯಿಂದ ಪರಾರಿ