Thursday, 31st October 2024

ಮದುವೆ ಹಿಂದಿನ ದಿನದಂದೇ ಸಾವನ್ನಪ್ಪಿದ ಮದುಮಗ

ಸಿಂಧನೂರು: ಇನ್ನೇನು ಮದುಮಗನಾಗಿ ತಾಳಿ ಕಟ್ಟುವ ಮರುದಿನವೇ ಸಾವನಪ್ಪಿರುವ ಘಟನೆ ಶನಿವಾರ ಸಂಜೆ ಜರುಗಿದೆ

ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಯಲ್ಲಪ್ಪ ಅವರ ಮಗ ಹುಲುಗಪ್ಪ ರಾಮತ್ನಾಳ ಗ್ರಾಮ ಪಂಚಾಯಿತಿಯಲ್ಲಿ ಎಸ್ ಡಿ ಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರ ವಿವಾಹ ಮಹೋತ್ಸವ ಡಿ. 6 ರಂದು ತಾಲೂಕಿನ ಗೋರೆಬಾಳ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ನಿಶ್ಚಯಿಸಲಾಗಿತ್ತು.

ಮದುಮಗಳು ದೈಹಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಇವರ ಮದುವೆ ಕಾರ್ಯಕ್ರಮಗಳೆಲ್ಲವೂ ಶನಿವಾರ ಪೂರ್ಣ ಗೊಂಡು, ಇನ್ನೇನು ಭಾನುವಾರ ತಾಳಿ ಕಟ್ಟುವ ಸಮಯ ಇದ್ದಿರುವುದರಿಂದ ಮದುಮಗನಿಗೆ ಶನಿವಾರ ಸಂಜೆ ಹೃದಯಾಘಾತ ವಾಗಿ ಸಾವನಪ್ಪಿರುವ ಘಟನೆ ಜರುಗಿದೆ.

ಆಕ್ರಂದನ , ಸಾವನಪ್ಪಿರುವ ಯುವಕನ ಕುಟುಂಬದವರು ಹಾಗೂ ಗ್ರಾಮದ ಅನೇಕರು ಆಕ್ರಂದನ ಮುಗಿಲು ಮುಟ್ಟಿತ್ತು. ಹೃದಯಾಘಾತದಿಂದ ಮದುಮಗ ಸಾವನ್ನಪ್ಪಿದ್ದಾನೆ ಎಂದು ಯುವಕನ ಕುಟುಂಬ ದವರು ತಿಳಿಸಿದ್ದಾರೆ