Tuesday, 3rd December 2024

Channapatna By Election: ನಾನು ಕಣ್ಣೀರು ಹಾಕಿದ್ದು ನಾಟಕ ಅಲ್ಲ ಎಂದ ನಿಖಿಲ್‌ ಕುಮಾರಸ್ವಾಮಿ

Nikhil Kumaraswamy

ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಇಂದು ತಮ್ಮ ಚುನಾವಣಾ ಪ್ರಚಾರ ಕಾರ್ಯ ಮುಂದುವರಿಸಿದರು. ತಾಲೂಕಿನ (Channapatna By Election) ವಿರುಪಾಕ್ಷಿಪುರ ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸಿ ಮನೆ- ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ವೇಳೆ ನಿಖಿಲ್ ಅವರಿಗೆ ಹೂವಿನ ಸುರಿಮಳೆ ಸುರಿಸಿ ಅದ್ಧೂರಿ ಸ್ವಾಗತ ಕೋರಿದರು.

ಈ ಸುದ್ದಿಯನ್ನೂ ಓದಿ | Anantnag Encounter: ಜಮ್ಮು & ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರಳಿಸಿದ ಭಾರತೀಯ ಸೇನೆ

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಬ್ಬ ಇದ್ದರೂ ಸಹ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಚಾರ ಮಾಡ್ತಿದ್ದಾರೆ. ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗ್ತಿದೆ. ಈ ಬಾರಿ ಜನ ನನಗೆ ಬೆಂಬಲ ನೀಡುವ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.

ಉದ್ದೇಶಪೂರ್ವಕವಾಗಿ ಕಣ್ಣೀರು ಹಾಕಿಲ್ಲ

ನಿಖಿಲ್ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಕಾಂಗ್ರೆಸ್ ನಾಯಕರ ವ್ಯಂಗ್ಯ ವಿಚಾರಕ್ಕೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಜನತೆ ಜತೆ ಅವಿನಾಭಾವ ಸಂಬಂಧ ಇದೆ. ನಾವು ಮಾಡಿರೋ ಅಭಿವೃದ್ಧಿ ವಿಚಾರ ಮನವರಿಕೆ ಮಾಡಿ ಮತ ಕೇಳ್ತಿದ್ದೇವೆ. ನಾನು ಉದ್ದೇಶಪೂರ್ವಕವಾಗಿ ಮತಗಿಟ್ಟಿಸಲು ಕಣ್ಣೀರು ಹಾಕಿಲ್ಲ. ನನ್ನ ನೋವನ್ನು ಜನರ ಬಳಿ ಹೇಳಿಕೊಳ್ಳುವಾಗ ಕಣ್ಣೀರು ಹಾಕಿದ್ದೇನೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | IND vs NZ: ಕಿವೀಸ್‌ ವಿರುದ್ಧ ದಾಖಲೆ ಬರೆದ ರಿಷಭ್‌ ಪಂತ್‌

ಕಾಂಗ್ರೆಸ್‌ನವರು ಆತ್ಮಾವಲೋಕನ ಮಾಡಿಕೊಳ್ಳಲಿ

ಇಂದಿನ ನಿಖಿಲ್ ಪರಿಸ್ಥಿತಿಗೆ ಅವರ ತಂದೆ-ತಾಯಿ ಕಾರಣ ಎಂಬ ಡಿ.ಕೆ. ಸುರೇಶ್ ಹೇಳಿಕೆ ವಿಚಾರ‌ ಕುರಿತು ಪ್ರತಿಕ್ರಿಯಿಸಿ, ನನ್ನ ಪರಿಸ್ಥಿತಿಗೆ 2019 ರ ಚುನಾವಣೆಯಲ್ಲಿ ಯಾರು ಕಾರಣ ಅಂತ ಇಡೀ ರಾಜ್ಯಕ್ಕೆ ಗೊತ್ತು. ಮೈತ್ರಿ ಧರ್ಮ ಪಾಲನೆ ಮಾಡದೇ ಸೋಲಿಸಿದ್ದು ಯಾರು ಅಂತ ಪ್ರತಿಯೊಬ್ಬರಿಗೂ ಗೊತ್ತು. ಅವರೇ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ನನ್ನ ಸೋಲಿಗೆ ಯಾರೂ ಕಾರಣ ಅಲ್ಲ ಎಂದ ಅವರು, ಮಂಡ್ಯ ಜನ, ರಾಮನಗರ ಜನ ಪ್ರೀತಿ ಕೊಟ್ಟಿದ್ದಾರೆ.ಕಾಂಗ್ರೆಸ್‌ನವರು ಏನೇನು ಮಾತನಾಡ್ತಿದ್ದಾರೆ ಅದಕ್ಕೆ ಜನ ಉತ್ತರ ಕೊಡ್ತಾರೆ ಎಂದು ಅವರು ತಿಳಿಸಿದರು.