ಉಡುಪಿ: ಉಡುಪಿ (Udupi news) ಜಿಲ್ಲೆಯ ನೇತ್ರಾಣಿ ದ್ವೀಪದ (Netrani Island) ಬಳಿ ಸಮುದ್ರದಲ್ಲಿ ನಟ ಡಾಲಿ ಧನಂಜಯ (Daali Dhananjay) ಅವರು ಸೋಮವಾರ ಸ್ಕ್ಯೂಬಾ ಡೈವಿಂಗ್ (Scuba Diving) ಮಾಡಿ ಖುಷಿಪಟ್ಟರು.
ಜೀಬ್ರಾ ಸಿನಿಮಾದ ರಿಲೀಸ್ ಹಾಗೂ ಸಕ್ಸಸ್ ನಂತರ ರಿಲ್ಯಾಕ್ಸ್ ಮೂಡ್ನಲ್ಲಿರುವ ಡಾಲಿ ಧನಂಜಯ್, ಸ್ನೇಹಿತರ ಜೊತೆ ಟ್ರಿಪ್ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ನೇಹಿತರ ಜೊತೆಗೆ ಸ್ಕ್ಯೂಬಾ ಡೈವಿಂಗ್ ಮಾಡಿ ಎಂಜಾಯ್ ಮಾಡಿದರು. ಸುಮಾರು 45 ನಿಮಿಷಗಳ ಕಾಲ ಸ್ಕ್ಯೂಬಾ ಡೈವ್ ಮಾಡಿದ ಡಾಲಿ ಧನಂಜಯಗೆ ಮೈಸೂರಿನ ಗೆಳೆಯರು ಸಾಥ್ ನೀಡಿದರು.
ಥ್ರಿಲ್ಲರ್ ಸಿನಿಮಾ ಆಗಿರುವ ಜೀಬ್ರಾದಲ್ಲಿ ಡಾಲಿ ಧನಂಜಯ್ ವಿಲನ್ ಆಗಿ ನಟಿಸಿದ್ದು, ಸಾಕಷ್ಟು ಸ್ಕ್ರೀನ್ ಟೈಮ್ ಪಡೆದಿದ್ದಾರೆ. ಹೀರೋಗಿಂತಲೂ ಹೆಚ್ಚಿನ ಗಮನವನ್ನು ಡಾಲಿ ಈ ಸಿನಿಮಾದಲ್ಲಿ ಪಡೆದಿದ್ದಾರೆ. ಶುಕ್ರವಾರದಿಂದ ಥಿಯೇಟರ್ಗಳಲ್ಲಿ ಜೀಬ್ರಾ ಆಟ ಶುರುವಾಗಿದ್ದು, ಚೆನ್ನಾಗಿ ಓಡುತ್ತಿದೆ.
ಈ ನಡುವೆ ಡಾಲಿ ಧನಂಜಯ್ ಅವರ ವಿವಾಹ ನಿಶ್ಚತಾರ್ಥವೂ ಆಗಿದೆ. ಅವರ ಹಲವು ಕಾಲದ ಗೆಳತಿ ಡಾ. ಧನ್ಯತಾ ಅವರು ಡಾಲಿ ಕೈ ಹಿಡಿಯಲಿದ್ದು, ನಿಶ್ಚಿತಾರ್ಥ ಅರಸಿಕರೆ ತಾಲೂಕಿನ ಕಾಳೇನಹಳ್ಳಿಯಲ್ಲಿ ಇತ್ತೀಚೆಗೆ ನಡೆದಿತ್ತು. ಮದುವೆ ಫೆಬ್ರವರಿ 16ರಂದು ಮೈಸೂರಿನಲ್ಲಿ ನಡೆಯಲಿದೆ.
ಇದನ್ನೂ ಓದಿ: ಧನಂಜಯನ ಜತೆಗೊಂದು ಡಾಲಿ ರೈಡ್