Thursday, 26th December 2024

Divya Uruduga: ಐಷಾರಾಮಿ ಕಾರು ಖರೀದಿಸಿದ ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ; ವಿಶೇಷ ಪೋಸ್ಟ್ ಹಂಚಿಕೊಂಡ ಡಿಯು

ಬೆಂಗಳೂರು: ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಸದ್ದು ಸುದ್ದಿ ಮಾಡಿದ ದಿವ್ಯಾ ಉರುಡುಗ(Divya Uruduga) ಇದೀಗ ಹೊಸ ಕಾರು ಒಂದನ್ನು ಖರೀದಿಸಿದ್ದಾರೆ. ಹೌದು, ಟಾಟಾ ಕಂಪನಿಯ ನೆಕ್ಸಾನ್ ಕಾರನ್ನು ದಿವ್ಯಾ ಉರುಡುಗ ಖರೀದಿ ಮಾಡಿದ್ದು, ಇದರ ಬೆಲೆ 12 ಲಕ್ಷ ರೂ. ಎನ್ನಲಾಗಿದೆ. ಹೊಸ ಕಾರನ್ನು ಖರೀದಿ ಮಾಡಿರುವ ದಿವ್ಯಾ ಉರುಡುಗಗೆ ಅವರ ಪ್ರೀತಿಯ ಪತಿ ಕೆಪಿ ಅರವಿಂದ್(K P Aravind) ನಮ್ರತಾ ಗೌಡ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ಸ್ನೇಹಿತರು, ವಿಶ್ ಮಾಡಿದ್ದು, ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಹೂಡಿ ಜತೆಗೆ ಕ್ಯಾಪ್‌ ಧರಿಸಿ ಸಖತ್‌ ಆಗಿ ಪೋಸ್‌‌ ಕೊಟ್ಟಿದ್ದು, ಫೋಟೋದಲ್ಲಿ ಅರವಿಂದ್‌ ಕೆ ಪಿ ಕೂಡ ಇದ್ದಾರೆ. ದಿವ್ಯಾ ಉರುಡುಗ ಅವರು ಟಾಟಾ ಹ್ಯಾರಿಯರ್ ಕಾರನ್ನು ಮನೆಗೆ ಖರೀದಿಸಿದ್ದು, ಟಾಟಾ ಹ್ಯಾರಿಯರ್ ಕಾರಿನ ಬೇಸಿಕ್ ಬೆಲೆ 19 ಲಕ್ಷ ರೂಪಾಯಿ ಇಂದ ಆರಂಭ ಆಗಿ, 32 ಲಕ್ಷ ರೂಪಾಯಿವರೆಗೂ ಇದೆ.

ಇನ್ನು ಯಾರ ಸಹಾಯವೂ ಇಲ್ಲದೇ ಸ್ವಂತ ದುಡಿಮೆಯಿಂದ ಕನಸಿನ ಕಾರು ತೆಗೆದುಕೊಂಡಿರುವ ದಿವ್ಯಾ ಉರುಡುಗ ತಮ್ಮ ಹೊಸ ಕಾರಿಗೆ ‘ಬಘೀರ’ ಎಂದು ಹೆಸರಿಟ್ಟಿದ್ದು, ಇನ್‌ಸ್ಟಾಗ್ರಾಮ್‌ ನಲ್ಲಿ ಕಾರಿನ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್.ಕೆ.ಪಿ ಸ್ಪರ್ಧಿಸಿದ್ದರು. ದಿವ್ಯಾ ಉರುಡುಗ ಮತ್ತು ಅರವಿಂದ್‌.ಕೆ.ಪಿ ಜೋಡಿಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇತ್ತು. ‘ಬಿಗ್ ಬಾಸ್’ ಮನೆಯೊಳಗೆ ಆತ್ಮೀಯವಾಗಿದ್ದ ಅರವಿಂದ್.ಕೆ.ಪಿ ಹಾಗೂ ದಿವ್ಯಾ ಉರುಡುಗ ‘ಬಿಗ್ ಬಾಸ್’ ಮನೆಯಿಂದ ಹೊರಗೆ ಬಂದ್ಮೇಲೂ ಅಷ್ಟೇ ಆತ್ಮೀಯತೆಯಿಂದಿದ್ದಾರೆ.

ದಿವ್ಯಾ ಉರುಡುಗ – ಅರವಿಂದ್.ಕೆ.ಪಿ ಲವ್ ಸ್ಟೋರಿ ಬಗ್ಗೆ ಸಿನಿಮಾ ಮಾಡ್ತೀನಿ ಎಂದಿದ್ದ ಚಕ್ರವರ್ತಿ ಚಂದ್ರಚೂಡ್
‘ಬಿಗ್ ಬಾಸ್’ ಮನೆಯಲ್ಲಿದ್ದಾಗ ಸದಾ ಕಾಲ ಪಕ್ಕ ಪಕ್ಕ ಕೂರುತ್ತಿದ್ದ ಅರವಿಂದ್.ಕೆ.ಪಿ ಹಾಗೂ ದಿವ್ಯಾ ಉರುಡುಗ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅಂತಲೇ ವೀಕ್ಷಕರು ಭಾವಿಸಿದ್ದರು. ಹೀಗಾಗಿ, ಅರವಿಂದ್.ಕೆ.ಪಿ ಹಾಗೂ ದಿವ್ಯಾ ಉರುಡುಗ ಲವ್ ಸ್ಟೋರಿ ಬಗ್ಗೆ ಸಿನಿಮಾ ಮಾಡ್ತೀನಿ ಅಂತ ‘ಬಿಗ್ ಬಾಸ್’ ಮನೆಯಲ್ಲೇ ಚಕ್ರವರ್ತಿ ಚಂದ್ರಚೂಡ್ ಘೋಷಿಸಿದ್ದರು.

”ನನಗೊಂದು ಆಸೆ ಇದೆ. ಅರವಿಂದ್ – ದಿವ್ಯಾ ಉರುಡುಗ ಬಗ್ಗೆ ಒಂದು ಸಿನಿಮಾ ಮಾಡಬೇಕು. ಕಥೆ ಹತ್ತು ನಿಮಿಷಕ್ಕೆ ಕೊಡುತ್ತೇನೆ. ಬೈಕ್ ಬೇಸ್ ಮಾಡಿದ ಕಥೆ. ‘ನಾ ನಿನ್ನ ಮರೆಯಲಾರೆ’ ತರಹದ ಕಥೆ. ಒಂದೆರಡು ತಿಂಗಳಿನಲ್ಲಿ ರೆಡಿ ಮಾಡಬಹುದು. ಮ್ಯೂಸಿಕ್ ಡೈರೆಕ್ಟರ್ ಶಮಂತ್. ನಾನೇ ಡೈರೆಕ್ಟರ್. ಪಿಕ್ಚರ್ ಹೆಸರು ‘ಅರ್ವಿಯಾ’. ಪ್ರಶಾಂತ್ ಸಂಬರಗಿನೇ ಪ್ರೊಡ್ಯೂಸರ್” ಅಂತ ಚಕ್ರವರ್ತಿ ಚಂದ್ರಚೂಡ್ ‘ಬಿಗ್ ಬಾಸ್’ ಮನೆಯಲ್ಲಿದ್ದಾಗ ಹೇಳಿದ್ದರು.

ಈ ಸುದ್ದಿಯನ್ನು ಓದಿ: UI Movie: ಉಪ್ಪಿಯ ಯುಐ ಸಿನಿಮಾ ನೋಡಿ ಸ್ಯಾಂಡಲ್‌ವುಡ್ ಬಾದ್ ಷಾ ಹೇಳಿದ್ದೇನು…?