Tuesday, 26th November 2024

ಸೋಂಕು ಇಳಿಕೆ, ಸಾವು ಏರಿಕೆ

ಕಳೆದ ೧೦ ದಿನಗಳಲ್ಲಿ ರಾಜ್ಯದಲ್ಲಿ ೫,೦೦೦ಕ್ಕೂ ಹೆಚ್ಚು ಸಾವು

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಮನುಕುಲ ನಾಶಕ ಕರೋನಾ ಸೋಂಕು ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಏರುತ್ತಿರುವುದು ರಾಜ್ಯ ಸರಕಾರವನ್ನು ಚಿಂತೆಗೆ ನೂಕಿದೆ.

ಕಳೆದ ೧೦ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ 5000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಹೆಚ್ಚು ವೈದ್ಯಕೀಯ ಸೌಲಭ್ಯಗಳಿರುವ ಬೆಂಗಳೂರಿನ 2500ಕ್ಕೂ ಅಧಿಕ ಸೋಂಕಿತರು ಉಸಿರು ಚೆಲ್ಲಿದ್ದಾರೆ.

ಅಚ್ಚರಿ ಎಂದರೆ ಇಲ್ಲಿ ಸೋಂಕಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದ್ದರೂ ಸಾವಿನ ಸಂಖ್ಯೆ ಮಾತ್ರ ಹೆಚ್ಚಾಗುತ್ತಿದೆ.
ಬೆಂಗಳೂರಿನಲ್ಲಿ ಸೋಂಕಿನ ಸಂಖ್ಯೆ 24 ಸಾವಿರಕ್ಕೆ ಏರಿ ದಾಖಲೆಯಾಗಿತ್ತಾದರೂ ಈಗ ಸೋಂಕಿತರ ಸಂಖ್ಯೆ ಕೇವಲ 5700ಕ್ಕೆ ಇಳಿದಿದೆ. ಆದರೂ ಸಾವಿನ ಸಂಖ್ಯೆ ಮಾತ್ರ 300 ಗಡಿಯ ಇದೆ.

ಇದೇ ರೀತಿ ರಾಜ್ಯದಲ್ಲೂ ಸೋಂಕಿನ ಪ್ರಮಾಣ 26 ಸಾವಿರದಿಂದ 25311ಕ್ಕೆ ಇಳಿದಿದೆ. ಸಾವಿನ ಸಂಖ್ಯೆ 529 ಕ್ಕೇರಿದೆ. ರಾಜ್ಯದ 7 ಜಿಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಮನಗರ, ಕೊಡಗು, ಚಾಮರಾಜನಗರ, ಉತ್ತರ ಕನ್ನಡ, ಯಾದಗಿರಿ, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಹೆಚ್ಚು ಸಾವಿನ ದಾಖಲೆ ಮಾಡಿವೆ. ಇದರಿಂದಾಗಿ ಸಾವು ಮತ್ತು ಸೋಂಕು ವ್ಯಾಪಿಸು ತ್ತಿರುವುದರಲ್ಲಿ ರಾಜ್ಯ ದ್ವಿತೀಯ ಸ್ಥಾನ ಕಾಪಾಡಿಕೊಂಡೇ ಬಂದಂತಾಗಿದೆ. ಇದರಿಂದ ಗಾಬರಿಗೊಂಡಿರುವ ಸರಕಾರ, ಯಾವ ಕಾರಣದಿಂದ ಹೀಗಾಗುತ್ತಿದೆ ಎನ್ನುವ ಹುಡುಕಾಟವನ್ನು ಈಗ ಶುರು ಮಾಡಿದೆ.

ವೈದ್ಯರು ನೀತಿ ರೂಪಿಸಬೇಕು: ಬೆಂಗಳೂರಿನ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ 10 ದಿನ ಮಾತ್ರ ಚಿಕಿತ್ಸೆ ನೀಡಿ, ಮನೆಯ ಆಕ್ಸಿಜನ್‌ನಲ್ಲಿ ಚೇತರಿಸಿಕೊಳ್ಳಿ ಎಂದು ಬಿಡುಗಡೆ ಮಾಡಲಾಗುತ್ತಿದೆ. ಅಂದರೆ ಸರಕಾರದ ವೆಚ್ಚದಲ್ಲಿ ಸೋಂಕಿತರಿಗೆ ೧೦ ದಿನ ಮಾತ್ರ ಚಿಕಿತ್ಸೆ ಸಿಗುತ್ತದೆ. ನಂತರದ ಚಿಕಿತ್ಸೆಗೆ ಸುವರ್ಣ ಆರೋಗ್ಯ ಟ್ರ ಅನುಮೋದನೆ ನೀಡಬೇಕು. ಇದಕ್ಕಾಗಿ ಸೋಂಕಿತರು ಅಲೆಯಬೇಕಾಗುತ್ತದೆ. ಇದಕ್ಕೆ ಖಾಸಗಿ ಆಸ್ಪತ್ರೆಗಳು ಒಪ್ಪಿಗೆಯನ್ನೂ ನೀಡುವುದಿಲ್ಲ. ಇಂಥ ಸಂಸ್ಯೆಗಳಿಂದ ಅನೇಕ ಸೋಂಕಿತರು ಮನೆಗಳಲ್ಲಿ ಕೋವಿಡ್ ನಂತರದ ಸೂಕ್ತ ಚಿಕಿತ್ಸೆ ಇಲ್ಲದೆಯೂ ಸಾಯುವುದು ಹೆಚ್ಚಾಗುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ತಜ್ಞವೈದ್ಯ ಡಾ.ಶಿವಕುಮಾರ್ ಅವರ ಪ್ರಕಾರ, ಸೋಂಕಿತರು ಹೆಚ್ಚು ಸಾಯುತ್ತಿರುವುದಕ್ಕೆ ಕೋವಿಡ್ ನಂತರದ ಸಂಕೀರ್ಣ ಸಮಸ್ಯೆಗಳು ಕಾರಣ ಎನ್ನಬಹುದು. ಸಿಟಿ ಸಿವಿಯಾರಿಟಿ ಪರೀಕ್ಷೆಯಲ್ಲಿ ಸೋಂಕಿತ ತೀವ್ರತೆಯ ಸ್ಕೋರ್
8ಕ್ಕಿಂತ ಕಡಿಮೆ ಇದ್ದರೆ ಉತ್ತಮ. 15ಕ್ಕಿಂತ ಹೆಚ್ಚಾದರೆ ಅಂಥ ಸೋಂಕಿತರಿಗೆ ತಕ್ಷಣ ಐಸಿಯು ಹಾಸಿಗೆ ಬೇಕಾಗುತ್ತದೆ. ಇದು ಬಹು ತೇಕರಿಗೆ ಗೊತ್ತಾಗುತ್ತಿಲ್ಲ. ತಿಳಿದಾಗ ಹಾಸಿಗೆ ಸಿಗುವುದಿಲ್ಲ. ಹೀಗಾಗಿ ಸಾವು ಸಂಭವಿಸುತ್ತಿವೆ. ಸೋಂಕಿತರಿಗೆ ಚೇತರಿಗೆ ನಂತರ ದಲ್ಲೂ ತಜ್ಞ ವೈದ್ಯರ ನಿಗಾಬೇಕು. ಇಲ್ಲವಾದರೆ ಸೋಂಕಿತರು ಸಾಯುವ ಸಾಧ್ಯತೆ ಹೆಚ್ಚು.

ಸೋಂಕಿತರು ದಿಢೀರ್ ಚೇತರಿಸಿಕೊಂಡಿದ್ದು ಹೇಗೆ?
ಮೇ 18 ನಂತರ ಬೆಂಗಳೂರಿನಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಅಥವಾ ಚೇತರಿಕೆ ಕೇಸುಗಳು ಹೆಚ್ಚು ದಾಖಲಾಗುತ್ತಿವೆ. ಮೇ 17ರಂದು 13338 ಸೋಂಕಿತರ ಕೇಸುಗಳಿದ್ದರೆ, ಚೇತರಿಸಿಕೊಂಡವರ ಸಂಖ್ಯೆ ಕೇವಲ 10 ಸಾವಿರ ಇತ್ತು. ಅಂದರೆ ಕಡಿಮೆ ಇತ್ತು. ಆದರೆ ಮೇ ೧೮ರಂದು ಏಕಾಏಕಿ ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು. ಅಂದರೆ ಸೋಂಕಿತರು 8676 ಆದರೆ ಆಸ್ಪತ್ರೆ ಯಿಂದ ಬಿಡುಗಡೆಯಾದವರು 31795 ಮಂದಿ. ಆನಂತರದಲ್ಲಿ ಇದೇ ಚಿತ್ರಣ ಮುಂದುವರಿಯಿತು. ಇದಕ್ಕೆ ಕಾರಣ ವೇನು ಎನ್ನುವುದಕ್ಕೆ ಆರೋಗ್ಯ ಇಲಾಖೆಯಲ್ಲಿ ಉತ್ತರವಿಲ್ಲ.

***

ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ ಅದಕ್ಕೆ ಸೋಂಕು ಈಗ ಹೆಚ್ಚಾಗಿ ಸಾಯುತ್ತಿದ್ದಾರೆ ಎಂದು ಅರ್ಥವಲ್ಲ. ಅನೇಕ
ದಿನಗಳಿಂದ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿರುವವರು ಸಾಯುತ್ತಿದ್ದಾರೆ. ಇದು ಇನ್ನೂ ಕೆಲ ಕಾಲ ಇರುತ್ತದೆ.
-ಡಾ.ಸಿ.ಎನ್.ಮಂಜುನಾಥ್‌, ಖ್ಯಾತ ತಜ್ಞ, ರಾಜ್ಯ
ಆರೋಗ್ಯ ಕಾರ್ಯಪಡೆ ಸದಸ್ಯ