Friday, 13th December 2024

ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಸೇಡಂ: ತಾಲೂಕು ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಪೋತಂಗಲ ಹಾಗೂ ಹಲಕೋಡ ಗ್ರಾಮದ ನೂರಾರು ಮಹಿಳೆಯರು ಹಾಗೂ ಯುವಕರು ವಿವಿಧ ಪಕ್ಷಗಳ ದುರಾಡಳಿತದಿಂದ ಮನನೋಂದಿದ್ದು, ಬಾಲರಾಜ್ ಅ ಗುತ್ತೇದಾರ ಸೇಡಂ ಜೆಡಿಎಸ್ ಮುಖಂಡರು ಇವರ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಿಂದ ಪ್ರೇರಣೆ ಗೊಂಡು ಪುಷ್ಪಾವತಿ ಶಿವಾನಂದ ಗೊಬ್ಬುರ ಜೆಡಿಎಸ್ ತಾಲೂಕು ಮಹಿಳಾ ಘಟಕ ಅಧ್ಯಕ್ಷರ ನೇತೃತ್ವದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.

ಜೆಡಿಎಸ್ ಪಕ್ಷಕ್ಕೆ ನರಸಮ್ಮ, ಅಂಜಲಮ್ಮ, ಜಗಮ್ಮ, ಆನಂದ, ರಾಜಕುಮಾರ ಸೇರಿ ಇನ್ನಿತರರು ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಗ್ರಾಮ ಮೂಲಭೂತ ಸಮಸ್ಯೆಗಳಾದ ಮಹಿಳೆಯರಿಗೆ ಶೌಚಾಲಯ, ಉತ್ತಮ ರಸ್ತೆಗಳು. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬಾಲರಾಜ್ ಗುತ್ತೇದಾರ ಬಳಿ ಸಾರ್ವಜನಿಕರು ತೋಡಿಕೊಂಡರು.

ಕೋವಿಡನಂತಹ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಹಸಿವನ್ನು ನಿಗಿಸಿದ್ದಾರೆ ಅವರಿಗೆ ನಾವು ಋಣಿಯಾಗಿದ್ದೇವೆ. ಸದ್ಯ ಇರುವ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುತ್ತಾರೆ ಎಂಬ ಭರವಸೆ ಇದೆ ಎಂದರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮಹಿಳಾ ಪ್ರತಿನಿಧಿ ಶ್ರೀ ಮತಿ ಸಂಗೀತಾ, ಹಾಗೂ ಯುವ ಘಟಕದ ಪ್ರತಿನಿಧಿ ಕು. ಭಾಗೇಶ್. ಹಾಗೂ ಪಕ್ಷದ ಹಿರಿಯ ಮುಖಂಡರು ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.