Thursday, 25th July 2024

ಪ್ರವೇಶ ಪತ್ರದ ವಿಳಾಸ ಮುದ್ರಣದಲ್ಲಿ ಎಡವಟ್ಟು: ಪೋಷಕರು ವಿದ್ಯಾರ್ಥಿಗಳು ಕಂಗಾಲು

ವ್ಯವಸ್ಥಿತವಾಗಿ ಜರುಗಿದ ವಸತಿ ಶಿಕ್ಷಣ ಸಂಘದ ಪ್ರವೇಶಾತಿ ಪರೀಕ್ಷೆಗಳು

ಕೊಲ್ಹಾರ: ಕರ್ನಾಟಕ ವಸತಿ ಶಿಕ್ಷಣ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ 6 ನೇ ತರಗತಿ ಪ್ರವೇಶಾತಿ ಪರೀಕ್ಷೆಗಳು ಪಟ್ಟಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ರವಿವಾರ ಪ್ರಥಮ ಬಾರಿಗೆ ಅತ್ಯಂತ ಅಚ್ಚುಕಟ್ಟಾಗಿ ಜರುಗಿದವು.

ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಸುಸೂತ್ರವಾಗಿ ಪರೀಕ್ಷೆಗಳು ಜರುಗುವಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.

ಪರೀಕ್ಷಾ ಕೇಂದ್ರದಲ್ಲಿ ಒಟ್ಟು 580 ವಿದ್ಯಾರ್ಥಿಗಳು ನೊಂದಣಿಯಾಗಿ 575 ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಿ 5 ಜನ ಗೈರಾಗಿದ್ದರು. 25 ಕೊಠಡಿ ಗಳಲ್ಲಿ ಅಚ್ಚುಕಟ್ಟಾದ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ತಹಶೀಲ್ದಾರ್ ಎಸ್.ಎಸ್ ನಾಯಕಲಮಠವರು ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಕೊಂಡರು. ಪರೀಕ್ಷಾ ಕೇಂದ್ರದ ಸುತ್ತಲೂ ಪಿಎಸ್ಐ ಪ್ರವೀಣ ಗರೇಬಾಳ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಹಮ್ಮಿಕೊಳ್ಳಲಾಗಿತ್ತು.

ಇಲಾಖೆಯ ಯಡವಟ್ಟು ಪೋಷಕರು, ವಿದ್ಯಾರ್ಥಿಗಳು ಕಂಗಾಲು: ಪರೀಕ್ಷೆಯ ಪ್ರವೇಶಾತಿ ಪತ್ರದಲ್ಲಿ ಸಂಗಮೇಶ್ವರ ಪಿ.ಯು ಕಾಲೇಜು ಹೊಸ ಕೊಲ್ಹಾರ ಬದಲಾಗಿ ಹಳೆ ಕೊಲ್ಹಾರ ಎಂದು ತಪ್ಪಾಗಿ ಮುದ್ರಣಗೊಂಡ ಪ್ರಯುಕ್ತ ಕೆಲ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಹಳೆಯ ಕೊಲ್ಹಾರ ಸಂಗಮೇ ಶ್ವರ ಮಹಾವಿದ್ಯಾಲಯಕ್ಕೆ ತೆರಳುತ್ತಿರುವುದು ಕಂಡುಬಂದಿತು ಇಲಾಖೆ ಎಡವಟ್ಟಿನ ಕಾರಣ ವಿದ್ಯಾರ್ಥಿಗಳು ಹಾಗೂ ಪೋಷಕರು ಪರಿತಪಿಸು ವಂತಾಯಿತು.

ತಕ್ಷಣವೇ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗ ಹಳೆ ಕೊಲ್ಹಾರ ಸಂಗಮೇಶ್ವರ ಶಿಕ್ಷಣ ಸಂಸ್ಥೆಗೆ ತೆರಳುವ ಯುಕೆಪಿ ಹತ್ತಿರ ಪಾಲಕರಿಗೆ ಹಾಗೂ ಮಕ್ಕಳಿಗೆ ಹೊಸ ಕೊಲ್ಹಾರ ಬದಲಾಗಿ ಹಳೆ ಕೊಲ್ಹಾರ ಎಂದು ತಪ್ಪಾಗಿ ಮುದ್ರಣ ಆಗಿರುವುದನ್ನು ಗಮನಕ್ಕೆ ತಂದು ಹೊಸ ಕೊಲ್ಹಾರ ಪರೀಕ್ಷಾ ಕೇಂದ್ರಕ್ಕೆ ಕಳುಹಿಸುತ್ತಿರುವ ದೃಶ್ಯಗಳು ಕಂಡು ಬಂದವು. ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸಿ ಪೋಷಕರೊಂದಿಗೆ ಪರೀಕ್ಷಾರ್ಥಿಗಳು ಹೊಸ ಕೊಲ್ಹಾರ ಪರೀಕ್ಷಾ ಕೇಂದ್ರಕ್ಕೆ ತೆರಳಿ ಸುಸೂತ್ರವಾಗಿ ಪರೀಕ್ಷೆಗಳನ್ನು ಬರೆದರು.

Leave a Reply

Your email address will not be published. Required fields are marked *

error: Content is protected !!