Monday, 25th November 2024

ಬಡವರಿಗೆ ಊಟ ಇಲ್ಲದೇ ಸಾಯಿಸುತ್ತಿರುವುದೇ ಬಿಜೆಪಿಯ ಅಚ್ಚೇ ದಿನ್: ಶಾಸಕ ವೆಂಕಟರಮಣಪ್ಪ

ಪಾವಗಡ:  ಪಟ್ಟಣದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಹಾಗೂ ಜನಸಾಮಾನ್ಯರು ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರ ಪರವಾಗಿದ್ದೇವೆ ಎಂದು ಹೇಳುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜನ ದ್ರೋಹ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ವೆಂಕಟರಮಣಪ್ಪ ಆರೋಪಿಸಿದರು.
ಅವರು ಶನಿವಾರ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ  ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಲೆ ಏರಿಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು
ಪೆಟ್ರೋಲ್ ಡೀಸೆಲ್ ಹಾಗೂ ರೈತರ ಬೆಲೆ ಏರಿಕೆ ಗಳು ಶ್ರೀಸಾಮಾನ್ಯರ ಆರ್ಥಿಕತೆಯನ್ನು ಬಹಳಷ್ಟು ವರ್ಷಗಳ ಹಿಂದಕ್ಕೆ ತಳ್ಳುವಂತೆ ಈ ಸರ್ಕಾರಗಳು ಮಾಡಿದೆ.
ಈ ಕರೋನಾ ಸಂದರ್ಭದಲ್ಲಿ ಜನರಿಗೆ ನೆರವಾಗ ಬೇಕಾದ ಸರ್ಕಾರಗಳು ಜನರ ಜನರಿಗೆ ಕಿರುಕುಳ ನೀಡುವ ಮೂಲಕ ಅಗತ್ಯ ವಸ್ತುಗಳನ್ನು ಗಗನಕ್ಕೇರಿವೆ. ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಜನರ ಪರವಾಗಿದ್ದೇವೆ ಜನರು ಹೆದರಬೇಕಾಗಿಲ್ಲ ಎಂಬುವ ಈ ಸರ್ಕಾರಗಳು ಅದೇ ಜನರಿಗೆ ತೆರಿಗೆ ಮೂಲಕ ಅವರ ಆರ್ಥಿಕತೆಯನ್ನು ಇಂದ ಕಿಟ್ಟು ಹಿಂಸೆ ಕೊಡುತ್ತಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಲ್ಲಾ ಪಂಚಾಯತ ಸದಸ್ಯ ಹೆಚ್.ವಿ.ವೆಂಕಟೇಶ್  ಮಾತನಾಡಿ ರಾಜ್ಯಾದ್ಯಂತ ಬೆಲೆ ಏರಿಕೆಯನ್ನು ಬಿಜೆಪಿ ಸರ್ಕಾರ ಬಹಳಷ್ಟು ರೈತರಿಗೆ ಮೋಸ ಮಾಡಿ ಜನರಿಗೆ ಹತ್ತಿರವಿದೆ ಎನ್ನುತ್ತಾರೆ ಇದರಿಂದ ಜನರು ರೋಸಿ ಹೋಗಿದ್ದಾರೆ ಅಚ್ಚೆ ದಿನ್ ಅಚ್ಚೆ ದಿನ್ ಅಂತ ಹೇಳಿಕೊಂಡು ಬರುತ್ತಿರ ಬಿಜೆಪಿ ಸರ್ಕಾರ ಬಡವರ ದಿನಾ ದಲಿತರಿಗೆ ಒಂದು ಹೊತ್ತು ಊಟ ಇಲ್ಲದೇ  ಮಾಡಿರುವುದು ಒಂದು ಸಾಧನೆ ಯಾಗಿದೆ.ಬಿಜೆಪಿಯನ್ನು ಕಿತ್ತು ಎಸೆಯುವ ವೇಳೆ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು.ಶಂಕರ್ ರೆಡ್ಡಿ. ಪುರಸಭೆ ಸದಸ್ಯರುಗಾಳದ ರಾಜೇಶ್. ರವಿ, ಬಾಲಸುಬ್ರಹ್ಮಣ್ಯಂ, ವೇಲು ಮುರಘನ್,  ತಾ.ಪಂ.ಸದಸ್ಯ ಹನುಮಂತ ರಾಯಪ್ಪ, ಗುತ್ತಿಗೆ ದಾರ ಹನಮಂತರಾಯಪ್ಪ, ರಿಜ್ವಾನ್ ಷ ಬಾಬು, ದೇವರಾಜ್,  ಕಿರಣ್,  ಹರೀಶ್, ಪುರಸಭೆ ಎಲ್ಲಾ ಸದಸ್ಯರು. ಹಾಗೂ ತಾ.ಪಂ.ಸದಸ್ಯರು ಈ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.