Friday, 27th December 2024

Pramod Maravante: ‘ಕಾಂತಾರ’ ಖ್ಯಾತಿಯ ಗೀತ ಸಾಹಿತಿಯ ಬಾಳಲ್ಲಿ ‘ಸಿಂಗಾರ ಸಿರಿ’ಯ ಎಂಟ್ರಿ!

ಸ್ಯಾಂಡಲ್‌ವುಡ್‌ನ (Sandalood) ಉದಯೋನ್ಮುಖ ಗೀತ ಸಾಹಿತಿಗಳಲ್ಲಿ ಪ್ರಮೋದ್ ಮರವಂತೆ ಅವರು ಕೂಡ ಒಬ್ಬರು. ‘ಕಾಂತಾರ’, ‘ಯುವ’, ‘ಮುಂದಿನ ನಿಲ್ದಾಣ’, ‘ಕಬ್ಜ’, ‘ಸಖತ್’, ‘ಆದಿಪುರುಷ್’ ಹೀಗೆ ಹಲವು ಸಿನಿಮಾಗಳಿಗೆ ಹಾಡುಗಳನ್ನು ಬರೆದಿದ್ದಾರೆ ಪ್ರಮೋದ್. ಈವರೆಗೂ ಸುಮಾರು 100ಕ್ಕೂ ಅಧಿಕ ಹಾಡುಗಳನ್ನು ಬರೆದಿರುವ ಪ್ರಮೋದ್ ಮರವಂತೆ (Pramod Maravante) ಅವರು ಇದೀಗ ದಾಂಪತ್ಯ ಗೀತೆ ಬರೆಯಲು ಸಜ್ಜಾಗಿದ್ದು, ಇಂದು ಸುಚೇತಾ ಬಸ್ರೂರು(Suchetha Basrur) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈಚೆಗೆ ಸದ್ದಿಲ್ಲದೇ ಪ್ರಮೋದ್ ಮರವಂತೆ ಅವರ ಎಂಗೇಜ್‌ಮೆಂಟ್ ನಡೆದಿತ್ತು. ನಿಶ್ಚಿತಾರ್ಥದ (Engagement) ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ‘ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ’ ಎಂದು ಸಾಲುಗಳನ್ನು ಬರೆದು ಭಾವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡಿದ್ದರು.

ಇದೀಗ ಡಿ.5ರಂದು ಕುಂದಾಪುರದಲ್ಲಿ ಇವರ ವಿವಾಹ ನೆರವೇರಿದ್ದು ಇವರು ಮದುವೆ ಆಗಿರುವುದು ಗಾಯಕಿ ಸುಚೇತಾ ಬಸ್ರೂರು ಅವರನ್ನು.

ಯಾರೀ ಸುಚೇತಾ ಬಸ್ರೂರು?
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ‘ಗಗನ ನೀ..’ ಹಾಡನ್ನು ಹೇಳಿದವರು ಇದೇ ಸುಚೇತಾ ಬಸ್ರೂರು. ಇದೀಗ ಗಾಯಕಿ ಸುಚೇತಾ ಜೊತೆ ಗೀತಾ ಸಾಹಿತಿ ಪ್ರಮೋದ್ ಮರವಂತೆ ಅವರನ್ನು ವರಿಸಿದ್ದು, ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೆಜಿಎಫ್ 2 ಚಿತ್ರದಲ್ಲಿ ‘ಗಗನ ನೀ ಭುವನ ನೀ’ ಎಂಬ ಹಾಡನ್ನು ಸೊಗಸಾಗಿ ಹಾಡುವ ಮೂಲಕ ಸದ್ದು ಮಾಡಿದ್ದ ಸುಚೇತ ಬಸ್ರೂರು, ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆಯಾಗಿದ್ದಾರೆ. ಅವರ ಅಕ್ಕನ ಮಗಳು ಸುಚೇತ ಜೊತೆ ಪ್ರಮೋದ್ ವಿವಾಹದ ಮುದ್ರೆ ಒತ್ತಿದ್ದಾರೆ.

ಇದನ್ನು ಓದಿ: 45 Movie: ಅರ್ಜುನ್‌ ಜನ್ಯ ನಿರ್ದೇಶನದ ʼ45ʼ ಚಿತ್ರಕ್ಕೆ ಹಾಲಿವುಡ್‌ ಹೆಸರಾಂತ ತಂತ್ರಜ್ಞರಿಂದ ಗ್ರಾಫಿಕ್ಸ್!

ಕನ್ನಡದ ಕಾಂತಾರದ ಸುಮಧುರ ಹಾಡುಗಳಲ್ಲಿ ಒಂದು ಸಿಂಗಾರ ಸಿರಿಯೆ ಹಾಡು ಸೇರಿದಂತೆ ಹಲವು ಸೂಪರ್‌ ಹಿಟ್‌ ಹಾಡುಗಳನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. ಮಾತ್ರವಲ್ಲ ಕಿರುತೆರೆಯ ಫೇಮಸ್‌ ಧಾರವಾಹಿ ಸೀತಾರಾಮ ಗೂ ಇವರೇ ಟೈಟಲ್ ಟ್ರ್ಯಾಕ್ ಬರೆದಿದ್ದಾರೆ.

ಇನ್ನು ಮದುವೆ ಹಾಗೂ ರಿಸೆಪ್ಶನ್ ಫೋಟೋಗಳನ್ನು ಶೇರ್ ಮಾಡಲಾಗಿದ್ದು ಇದರಲ್ಲಿ ಪ್ರಮೋದ್ ಮರವಂತೆ ತಮ್ಮ ಪತ್ನಿಯೊಂದಿಗೆ ಕ್ಯೂಟ್ ಆಗಿ ಕಾಣಿಸಿದ್ದಾರೆ. ರಿಸೆಪ್ಶನ್​ನಲ್ಲಿ ಪ್ರಮೋದ್ ಕ್ರೀಮ್ ವೈಟ್ ಶೇರ್ವಾನಿ ಶೂಟ್ ಧರಿಸಿದ್ದರೆ ಅವರ ಪತ್ನಿ ಸಿಲ್ವರ್​ಗೆ ಆರೆಂಜ್ ಬಾರ್ಡರ್ ಇರೋ ಸೀರೆ ಉಟ್ಟಿದ್ದಾರೆ.

ಮತ್ತೊಂದು ಫೋಟೋದಲ್ಲಿ ಅವರ ಮದುವೆ ಶಾಸ್ತ್ರದ ಫೋಟೋ ಕಂಡು ಬಂದಿದೆ. ಪ್ರಮೋದ್ ಅವರು ಪೇಟ ಧರಿಸಿ ಕರಾವಳಿ ಹಿಂದೂ ವಿವಾದ ಸಂಪ್ರದಾಯದಂತೆ ಉಡುಗೆ ತೊಟ್ಟು ಮದುಮಗನಾಗಿ ಕಂಗೊಳಿಸಿದ್ದಾರೆ. ಅವರು ಜೋಡಿಯಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.