Saturday, 14th December 2024

ಹತ್ತು ತಿಂಗಳಿಂದ ಗ್ರಾಪಂ ಸಿಬ್ಬಂದಿಗೆ ಸಂಬಳ ನೀಡಿಲ್ಲ: ಕಚೇರಿ ಮುಂದೆ ಪ್ರತಿಭಟನೆ

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಸ್ವೀಪರ್, ವಾಟರ್ ಮ್ಯಾನ್, ಕಛೇರಿ ಸಹಾಯಕ, ಬಿಲ್ ಕಲೆಕ್ಟರ್/ಗುಮಾಸ್ತರವರಿಗೆ ಹತ್ತು ತಿಂಗಳುಗಳಿಂದ ಸಂಬಳ ನೀಡಿಲ್ಲ.
ಕೋವಿಡ್ 19 ಪ್ರಕರಣದ ರೋಗಿಗಳು ಗ್ರಾಮೀಣ ಪ್ರದೇಶದ ಹೆಚ್ಚಾಗುತ್ತಿರುವ ಕಾರಣ ಕೆಲಸ ಹೆಚ್ಚಾಗಿದ್ದು ನಾವುಗಳು ಸಹ ಭಯ ಭೀತಿಯಿಂದ ಕೆಲಸ ನಿರ್ವಹಣೆ ಮಾಡುವ ಪರಿಸ್ಥಿತಿ ಉಂಟಾಗಿದೆ. ಅದರೆ ಇತ್ತ ಸಂಬಳವೂ ಇಲ್ಲ. ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ತಿಳಿಸಿದರು.
ಈ ವೇಳೆ ನಾಗಪ್ಪ, ಕೃಷ್ಣಪ್ಪ, ಹನುಮಂತರಾಯ, ಹನುಮಂತರೆಡ್ಡಿ, ರಾಜು, ಸುಬ್ಬರಾಯಪ್ಪ, ನರಸಪ್ಪ ಇತರರು ಇದ್ದರು.