Thursday, 12th December 2024

ಮತ್ತೆ ಮದ್ಯದ ಅಂಗಡಿ ಸಾಲಿನಲ್ಲಿ ಸರದಿಯಲ್ಲಿ ಮಹಿಳಾ ಮದ್ಯ ಪ್ರಿಯರು

ಪಾವಗಡ: ಪಾವಗಡ ಶನಿವಾರ ಮತ್ತು ಭಾನುವಾರದಂತೆ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಬಹುದು ಎಂದು ಸೋಮವಾರ ಮದ್ಯಪ್ರಿಯರು ಮುಗ್ಗಿಬಿದ್ದ ಘಟನೆ ಪಾವಗಡದಲ್ಲಿ ನಡೆದಿದೆ.

ಪಾವಗಡ ಪ್ರತಿ ವಾರದ ಹಾಗೂ ಸೋಮವಾರ ಸಂತೆ ನಡೆಯುವ ವಾಡಿಕೆ. ಆದರೆ ವ್ಯಾಪಾರಸ್ಥರಲ್ಲಿ ಗೊಂದಲಕ್ಕೆ ಎಡೆಮಾಡಿ ಕೊಟ್ಟಿದೆ. ಮಾಹಿತಿ ಕೊರತೆಯಿಂದ ಬಹಳಷ್ಟು ಜನರು ಅಂಗಡಿಗಳು ತೆರೆಯಬೇಕೋ ಇಲ್ಲವೋ ಎಂಬುವ ವಿಷಯಕ್ಕೆ ಸಂಬಂಧಿ ಸಿದಂತೆ ಬಹಳಷ್ಟು ಅಂಗಡಿ ಮಾಲಿಕರು ಅಂಗಡಿಗಳು ತೆರೆಯದೆ ಗೊಂದಲಕ್ಕೆ ಒಳಪಟ್ಟಿರುವುದು ಒಂದು ಕಡೆಯಾದರೆ, ಸಂತೆ ಯಲ್ಲಿಯೂ ಜನರು ಇಲ್ಲದೆ ವ್ಯಾಪಾರದಲ್ಲಿ ಕುಂಠಿತವಾಗಿದೆ ಎಂದು ವ್ಯಾಪಾರಸ್ಥ ರೈತರು ತಿಳಿಸಿದ್ದಾರೆ.

ಯಾವುದೇ ನಿರ್ಣಯವನ್ನು ಅಧಿಕಾರಿಗಳು ತೆಗೆದುಕೊಳ್ಳದೆ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಅಧ್ಯಕ್ಷ ಎಸ್.ಮೈಕಲ್ ನಾಡರ್ ಆರೋಪಿಸಿದರು.