Saturday, 14th December 2024

ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಗೆ ಬರೆ ಬರುವಂತೆ ಹೊಡೆದ ಶಾಲಾ ಕಾರ್ಯದರ್ಶಿ

ಪಾವಗಡ: ಕೋವಿಡ್ ನಿಂದ ಮೃತಪಟ್ಟ ಪೋಷಕನ ಪುತ್ರನಿಗೆ ಟ್ಯೂಷನ್‌ ಶುಲ್ಕ ಐದು ಸಾವಿರ ಕಟ್ಟಿಲ್ಲ ಎಂದು ವಿ.ಎಸ್.ಕಾನ್ವೆಂಟ್ ಶಾಲೆಯ ಕಾರ್ಯ ದರ್ಶಿ ಅಶ್ವಥ್ ನಾರಾಯಣ ಹಾಗೂ ಹಿಂದಿ ಶಿಕ್ಷಕ ರಾಮಕೃಷ್ಣ ನಾಯ್ಕ್ ಎಂಬು ವರು ವಿದ್ಯಾರ್ಥಿಗೆ ಮೈ ಮೇಲೆ ಬರೆ ಬರುವಂತೆ ಹೊಡೆದ ಪ್ರಕರಣ ಘಟನೆ ನಡೆದಿದೆ.

ಪಾವಗಡ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ವಿ.ಎಸ್.ಸಂಸ್ಥೆ ಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಹಮ್ಮದ್ ತಲ್ಲಾ ಎಂಬ ವಿದ್ಯಾರ್ಥಿ ತಂದೆ ಆಕಸ್ಮಿಕವಾಗಿ ಕೋವಿಡ್ ಬಂದು ಮೃತಪಟ್ಟಿರುತ್ತಾರೆ. ಇದರಿಂದ ಕುಟುಂಬದ ನಿರ್ವಹಣೆ ಕಷ್ಟವಾಗಿ  ಶಾಲೆಯ ಶುಲ್ಕ ಕಟ್ಟಲು ಹಣವಿಲ್ಲ ಎಂಬುದಾಗಿ ಹಲವು ಬಾರಿ ಶಿಕ್ಷಕರಿಗೆ ಹಾಗೂ ಸಂಸ್ಥೆಯ ಕಾರ್ಯ ದರ್ಶಿ ಗಮನಕ್ಕೆ ತಂದರೂ ಈ ಹಿಂದೆ ಹಲವು ಬಾರಿ ಹೊಡೆದ ನಿದರ್ಶನಗಳು ಇವೆ.

ಶುಲ್ಕ ಕೇಳಿದರೆ ಯಾರ್ ಯಾರ್ ಬಳಿ ಪೋನ್ ಮಾಡಿಸುತ್ತೀಯಾ ಎಂದು ಹೇಳಿ ಶಾಲೆಯ ಕಾರ್ಯದರ್ಶಿ ಹಾಗೂ ಹಿಂದಿ ಶಿಕ್ಷಕ ವಿದ್ಯಾರ್ಥಿಗೆ ಮೈ ಮೇಲೆ ಬರೆ ಬರುವ ಹಾಗೆ ಹೊಡೆದಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳ ಮುಂದೆ ಮನಸೋ ಇಚ್ಛೆ ಹೊಡೆದಾಗ ಅವಮಾನಿತನಾಗಿ ವಿದ್ಯಾರ್ಥಿ ಮನೆಗೆ ಬಂದು ಕೊಠಡಿಯೊಂದ ರಲ್ಲಿ ಚಿಲಕ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಲು ಮುಂದಾಗಿದ್ದಾನೆ. ತಕ್ಷಣವೇ ವಿದ್ಯಾರ್ಥಿಯ ಅಣ್ಣ ಗಮನಿಸಿ ಬಾಗಿಲು ಹೊಡೆದು ರಕ್ಷಿಸಿದ್ದಾರೆ.

ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು ಎಂದು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ಶಿಕ್ಷಕನಿಗೆ ಹಾಗೂ ಕಾರ್ಯದರ್ಶಿ ಮೇಲೆ ಶಿಕ್ಷಣ ಇಲಾಖೆಯವರು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ವಿದ್ಯಾರ್ಥಿ ಅಣ್ಷ ಹಾಗೂ ತಾಯಿ ಆರೋಪಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪವನ್ ಕುಮಾರ್ ರವರಿಗೆ ಮನವಿ ಪತ್ರ ನೀಡಿ ಮಾತನಾಡಿದ ಜಯಕರ್ನಾಟಕ ತಾಲ್ಲೂಕು ಅಧ್ಯಕ್ಷ ಗೋವರ್ಧನ, ಈ ರೀತಿಯಲ್ಲಿ ದಂಧೆಗಳು ಇನ್ನೂ ಮುಂದೆ ಖಾಸಗಿ ಶಾಲೆಗಳಲ್ಲಿ ಸಮಸ್ಯೆ ಕಂಡು ಬಂದರೆ ಅಂತಹ ಸಂಸ್ಥೆಗಳನ್ನು ರದ್ದುಗೊಳಿಸುವವರೆಗೂ ಬಿಡುವುದಿಲ್ಲ ಎಂದರು. ಈ ವೇಳೆ ವೈ.ಎಸ್.ಎಫ್ ಸಂಘದ ಅಧ್ಯಕ್ಷ ಗಗನ್ ರಾಜ್ ಮಾತನಾಡಿದರು. ಚಿನ್ನಮೈಯ್ಯಿ ಸಂಸ್ಥೆಯ ಸತ್ಯ ಲೋಕೇಶ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಅಧ್ಯಕ್ಷ ಮೈಕಲ್ ನಾಡರ್ ಮಾತನಾಡಿದರು.

ಪಾವಗಡ ತಾಲ್ಲೂಕು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಇಮ್ರಾನ್ ಉಲ್ಲಾ, ಎಬಿವಿಪಿ ಅಧ್ಯಕ್ಷರು, ಜಯಕರ್ನಾಟಕ ತಾಲ್ಲೂಕು ಪ್ರದಾನ ಕಾರ್ಯದರ್ಶಿ ಡಿ.ರಪೀಕ್, ಇತರೆ ಹಲವು ಮಂದಿ ಇದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily