ಸಿಂಧನೂರು: 12 ವರ್ಷಕ್ಕೊಮ್ಮೆ ಬರುವ ಪುಷ್ಕರ ಸ್ನಾನ ಮಾಡುವುದು ಒಂದು ಪುಣ್ಯದ ಕೆಲಸ ಆಗಿದೆ ಎಂದು ಶಾಸಕ ವೆಂಕಟ ರಾವ್ ನಾಡಗೌಡ ಹೇಳಿದರು.
ತಾಲೂಕಿನ ದಢೆಸಗೂರು ಗ್ರಾಮದಲ್ಲಿ 12 ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ತುಂಗಭದ್ರ ಪುಷ್ಕರ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಂಗಳವಾರ ಮಾತನಾಡಿದರು.
ಗಂಗಾ ಸ್ಥಾನ ತುಂಗಾ ಪಾನ ಕಲ್ಯಾಣ ಕರ್ನಾಟಕದ ಜೀವನದಿಯಾದ ಭತ್ತ ಬೆಳೆಯುವ ಮುಖಾಂತರ ದೇಶ-ವಿದೇಶಗಳಿಗೆ ಹೆಸರು ಆಗಿದೆ ಅದರಂತೆ 12 ವರ್ಷಕ್ಕೆ ಬರುವ ಪುಷ್ಕರ ಈ ಭಾಗದ ಕ್ಷೇತ್ರದಲ್ಲಿ ನಡೆಸಿರುವುದು ರಾಜ್ಯಾದ್ಯಂತ ಒಳ್ಳೆಯ ಹೆಸರು ಬರುತ್ತಿದೆ ಹಾಗಾಗಿ ಪುಷ್ಕರ ಒಂದು ಒಳ್ಳೆಯ ಸಂಸ್ಕೃತಿ ಆಗಿರುತ್ತದೆ, ಅವರವರ ಭಾವನೆಗೆ ಬಿಟ್ಟಿರುವ ವಿಷಯ ಪುಷ್ಕರ ಮಾಡುವು ದರಿಂದ ಒಳ್ಳೆಯದು ಆಗುತ್ತದೆ ಎನ್ನುವುದು ಕೆಲವರ ಅಭಿಪ್ರಾಯ ಬೇರೆ ಇರುತ್ತದೆ.
ಒಳ್ಳೆಯ ಕೆಲಸಕ್ಕೆ ಎಲ್ಲರೂ ಕೈ ಜೋಡಿಸುವ ಕೆಲಸ ಆಗಬೇಕಾಗಿದೆ ಎಂದರು ಭತ್ತ ಖರೀದಿ ಕೇಂದ್ರ ಎರಡು-ಮೂರು ದಿನಗಳಲ್ಲಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಈ ಬಾರಿ ಯಾವುದೇ ಸಂಕಷ್ಟಕ್ಕೆ ರೈತರು ಒಳಗಾಗಬಾರದು ಒಳ್ಳೆಯ ದಾರದೊಂದಿಗೆ ಭತ್ತ ಖರೀದಿ ಕೇಂದ್ರ ಮಾಡುತ್ತಾರೆ.
ಮೇಲಾಧಿಕಾರಿಗಳಿಗೆ ಸಂಬಂಧಪಟ್ಟ ಸಚಿವರಿಗೆ ಮಾತನಾಡಿದ್ದೇನೆ ಎಂದರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಉತ್ತರ ಭಾರತದಲ್ಲಿ ಕುಂಭ ಮೇಳಕ್ಕೆ ಎಷ್ಟು ಚಪಾವಿತತ್ರ್ಯ ನೀಡುತ್ತಾರೆ ದಕ್ಷಿಣ ಭಾರತ ಹಿಂದುಗಳು ಪುಷ್ಕರ ಸ್ನಾನಕ್ಕೆ ಮಹತ್ವ ನೀಡುತ್ತಾರೆ.
ಗಂಗಯೇ ಮೊದಲಾದ 12 ದಿನಗಳಲ್ಲಿ ಸಾರ್ಥ ಶ್ರೀ ಕೋಟಿ ತೀರ್ಥ ಪುಷ್ಕರವನ್ನು ನಿವಾಸ ಮಾಡುವ ಕಾಲಕ್ಕೆ ಪುಷ್ಕರ ಎಂದು ಹೆಸರು ಇದೆ , ಇದು ಮಾಡುವುದರಿಂದ ನಾಡಿನ ಸಮೃದ್ಧತೆ ಕಾಪಾಡಬಹುದು ಹಾಗೂ ನಮ್ಮಲ್ಲಿ ಇರುವ ಕೆಟ್ಟ ಆಲೋಚನೆಗ ಳನ್ನು ಕಳೆದುಕೊಳ್ಳಬಹುದು ಒಳ್ಳೆಯದು ಸಂಸ್ಕೃತಿ ಬೆಳೆಸಿಕೊಳ್ಳಬಹುದು ಎಂದರು