Thursday, 31st October 2024

ಶ್ರೀಹರಿಹರ ಪಂಚಮಸಾಲಿಶ್ರೀ ಶಂಕರಾಚಾರ್ಯಶ್ರೀ ಉಭಯ ಕುಶಲೋಪರಿ

ಶ್ರೀಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧಿಪತಿಗಳಾದ ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಸ್ವಾಮೀಜಿಗಳು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಗಳನ್ನು ಭಾನುವಾರ ಭೇಟಿ ಮಾಡಿದರು.

ಭೇಟಿ ಸಂದರ್ಭದಲ್ಲಿ ಉಭಯಕುಶಲೋಪರಿ ಜೊತೆಗೆ ಗೋಕರ್ಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಪ್ರತಿಷ್ಠಿತ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿ ಪಡೆದರು ಮತ್ತು ವಿದ್ಯಾಪೀಠಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ವಿಶ್ವೇಶ್ವರ ಭಟ್ಟರು ಉಪಸ್ಥಿತ ರಿದ್ದರು.

ಶ್ರೀಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಪ್ಪಟ ಶ್ರೀರಾಮ ಭಕ್ತರು. ಅಧ್ಯಾತ್ಮದ ಹಾದಿಯಲ್ಲಿ ಅವರು ಹಲವು ಮೈಲುಗಲ್ಲುಗಳನ್ನು ಸೃಷ್ಟಿಸಿದ್ದಾರೆ. ಹಿಂದೂ ಧರ್ಮದಲ್ಲಿ ಅವರದ್ದು ಅಚಲ ನಿಷ್ಠೆ. ಅದು ವಜ್ರದಷ್ಟೇ ದೃಢ. ಅಜ್ಞಾನದ ಕತ್ತಲೆಯನ್ನು ಸರಿಸಿ ಜ್ಞಾನದ ಮಾರ್ಗವನ್ನು ತೋರುವುದೇ ಭಗವಂತನ ಕೃಪೆಗೆ ಇರುವ ಮಾರ್ಗ. ಇಲ್ಲಿ ನಮಗೆ ಜ್ಞಾನಜ್ಯೋತಿ ಬಸವಣ್ಣನವರ ಒಂದು ವಚನ ನೆನಪಾಗುತ್ತಿದೆ.”

ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ ಎಲುತೋರಿದಡೆ ನರ ಹರಿದಡೆ ಕರುಳು ಕುಪ್ಪಳಿಸದಡೆ ನಾ ಧೃತಿಗೆಡೆನಯ್ಯಾ ಶಿರ ಹರಿದು ಅಟ್ಟೆ ನೆಲಕ್ಕೆ ಬಿದ್ದಡೆ ನಾಲಗೆ ಕೂಡಲಸಂಗಾ ಶರಣೆನ್ನುತ್ತಿದ್ದೀತಯ್ಯಾ.” ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋ ಸಂರ ಕ್ಷಣಾ ಕಾರ್ಯದಲ್ಲಿ ಸಲ್ಲಿಸಿದ ಸೇವೆ ಅದ್ವಿತೀಯವಾದುದು. ರಾಜ್ಯ ಸರ್ಕಾರ ಗೋನಿಷೇಧ ಕಾಯಿದೆ ಜಾರಿಗೊಳಿಸುವಲ್ಲಿ ಮಹಾ ಸ್ವಾಮಿಗಳ ಪಾತ್ರ ಬಹಳಷ್ಟಿದೆ.

ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಜೊತೆ ಇದು ನಮ್ಮ ಮೂರನೇ ಭೇಟಿ. ಸುಮಾರು ಎರಡು ತಾಸುಗಳ ತನಕ ನಡೆದ ವಿಚಾರವಿನಿಮಯದಲ್ಲಿ ಹಲವು ಅಧ್ಯಾತ್ಮದ ವಿಷಯಗಳು ಚರ್ಚಿತವಾದುವು. ಶ್ರೀಗಳ ಮುಂದಿನ ಮಹತ್ಕಾರ್ಯಗಳಿಗೆ ನಾವು ತುಂಬು ಹೃದಯದಿಂದ ಅಭಿನಂದಿಸುತ್ತೇವೆ ಎಂದರು.