Tuesday, 5th November 2024

Winter Fashion 2024: ಚಳಿಗಾಲದ ಫ್ಯಾಷನ್; ಏನಿದೆ ಹೊಸ ಟ್ರೆಂಡ್?

Winter Fashion 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈಗಾಗಲೇ ಚಳಿಗಾಲ ಆರಂಭಗೊಂಡಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲೂ ಕೂಡ ಲೆಕ್ಕವಿಲ್ಲದಷ್ಟು ಬಗೆಯ ಫ್ಯಾಷನ್‌ವೇರ್‌ಗಳು (Winter Fashion 2024) ಎಂಟ್ರಿ ನೀಡಿವೆ. ಅಂದಹಾಗೆ, ಈ ಬಾರಿಯ ವಿಂಟರ್‌ನಲ್ಲಿ ಅತಿ ಹೆಚ್ಚಾಗಿ ಡಾರ್ಕ್‌ ಕಲರ್‌ಗಳಿಗೆ ಆದ್ಯತೆ ನೀಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್‌ ಇನ್‌ಸ್ಟಿಟ್ಯೂಟ್‌ಗಳು ತಮ್ಮ ಈ ಕಲರ್‌ ಕೋಡ್‌ನಲ್ಲಿ ಬರ್ಗಾಂಡಿ, ಮರೂನ್‌, ಚೆರ್ರಿ ರೆಡ್‌, ಬೊರ್ಡಾಕ್ಸ್ ಶೇಡ್‌ಗಳನ್ನು ಸೇರಿಸಿಕೊಂಡಿವೆ. ಫ್ಯಾಷನಿಸ್ಟಾಗಳ ಪ್ರಕಾರ, ಇವು ಹೈ ಫ್ಯಾಷನ್‌ಗೆ ಎಂಟ್ರಿ ನೀಡಿವೆ ಎನ್ನಲಾಗಿದೆ. ಇನ್ನು ಭಾರತೀಯರ ಫ್ಯಾಷನ್‌ನಲ್ಲಿ ಬದಲಾವಣೆ ಎಂದಿನಂತೆ ಸ್ಥಳೀಯ ಫ್ಯಾಷನಿಸ್ಟಾಗಳ ಹಾಗೂ ಡಿಸೈನರ್‌ಗಳ ಡಿಸೈನ್‌ಗೆ ತಕ್ಕಂತೆ ಬದಲಾಗಲಿವೆ.

ಚಿತ್ರಕೃಪೆ: ಪಿಕ್ಸೆಲ್‌

2024ನಲ್ಲಿ ಆದ್ಯತೆ ನೀಡಲಾಗುವ ಫ್ಯಾಷನ್‌ಗಳಿವು

ಸೂಟೆಡ್‌ ಬೂಟೆಡ್‌ ಥೀಮ್‌ ಕಾನ್ಸೆಪ್ಟ್ ಉಡುಪುಗಳಿಗೆ, ನೆಕ್‌ ಅಪ್‌ ಫ್ಯಾಷನ್‌ ಡ್ರೆಸ್‌ಗಳಿಗೆ 2 ಡೈಮೆನ್ಷನಲ್‌ ಡ್ರೆಸ್‌ಗಳಿಗೆ, ಟಾಪ್‌ ಕೋಟ್ಸ್, ಆಕಾಶದಂತೆ ಕಾಣುವ ನಿಟ್‌ವೇರ್‌ಗಳಿಗೆ, ಬಿಗ್‌ ಶೋಲ್ಡರ್‌ ಡ್ರೆಸ್‌ಗಳಿಗೆ ಆದ್ಯತೆ ನೀಡಲಾಗಿದೆ. ಕಾರ್ಡಿಗಾನ್‌ ಡ್ರೆಸ್‌, ಖಾಕಿ ರಿಲಾಕ್ಸೆಡ್‌ ಕೋ ಆರ್ಡ್ಸ್, ದೊಗಲೆ ಬ್ಲೇಝರ್ಸ್ ಸೇರಿದಂತೆ ನಾನಾ ಬಗೆಯವು ವೆಸ್ಟರ್ನ್‌ವೇರ್‌ಗಳಲ್ಲಿ ಈಗಾಗಲೇ ಕಾಲಿಟ್ಟಿವೆ.

ಚಳಿಗಾಲದ ಫಾರ್ಮಲ್ಸ್ ಡ್ರೆಸ್‌

ಸಾದಾ ಫಾರ್ಮಲ್ಸ್ ಸೂಟ್‌, ಟರ್ಟಲ್‌ ನೆಕ್‌, ರೌಂಡ್‌ ನೆಕ್‌ ಟೀ ಶರ್ಟ್ ಜತೆ ಡೀಪ್‌ ನೆಕ್‌ ಕೋ ಆರ್ಡ್ ಸೂಟ್‌ಗಳು ಈ ಕೆಟಗರಿಯಲ್ಲಿ ಬಂದಿವೆ.

ಹುಡುಗರ ವಿಂಟರ್‌ವೇರ್ಸ್

ಇನ್ನು ಹುಡುಗರಿಗೆ ಬೆಳಗ್ಗೆ ಜಾಗಿಂಗ್‌ ವೇರ್‌ಗಳಿಂದಿಡಿದು ನೈಟ್‌ ಪಾರ್ಟಿಯವರೆಗಿನ ಉಡುಪುಗಳಲ್ಲಿ ಕೊಂಚ ಡಿಫರೆಂಟ್‌ ಕಲರ್‌ನವು ಎಂಟ್ರಿ ನೀಡಿವೆ. ಗಿಡ್ಡ ಎಂದೆನಿಸುವ ಪ್ಯಾಂಟ್‌ಗಳು, ಅಗಲವಾದ ಶೋಲ್ಡರ್‌ ಹೊಂದಿರುವ ಒವರ್‌ಸೈಝ್‌ ಪುಲ್‌ಓವರ್ಸ್, ಟೀಶರ್ಟ್ಸ್ ಇದೀಗ ಜೆನ್‌ ಜಿ ಹುಡುಗರನ್ನು ಸೆಳೆದಿವೆ. ಫ್ಯಾಷನ್‌ ಇನ್‌ಫ್ಲೂಯೆನ್ಸರ್ಸ್ ಪ್ರಕಾರ, ಮಿಕ್ಸ್‌ ಅಂಡ್‌ ಮ್ಯಾಚ್‌ ಕಾನ್ಸೆಪ್ಟ್‌ಕೂಡ ಈ ಸೀಸನ್‌ನಲ್ಲಿ ಪಾಪುಲರ್‌ ಆಗಲಿವೆ.

ಬೆಚ್ಚಗಿಡುವ ಔಟ್‌ಫಿಟ್ಸ್

ಪ್ಯಾಂಟ್‌ ಕೆಟಗರಿಯಲ್ಲಿ ಬೆಚ್ಚಗಿಡುವ ನಾನಾ ಬಗೆಯ ಡೆನಿಮ್‌ ಜೀನ್ಸ್‌, ಜೆಗ್ಗಿಂಗ್ಸ್‌, ಟ್ರೆಂಗ್ಗಿಂಗ್ಸ್‌, ಸ್ಕಿನ್‌ ಟೈಟ್‌ ಪ್ಯಾಂಟ್ಸ್‌, ಜಾಕೆಟ್‌ಗಳು, ಫುಲ್‌ ಆರ್ಮ್‌ ಡ್ರೆಸ್‌ಗಳು ಡಿಫರೆಂಟ್‌ ಪ್ರಿಂಟ್ಸ್ನಲ್ಲಿ ಆಗಮಿಸಿವೆ. ಕಾಶ್ಮೀರಿ ಲೈಟ್‌ ವೈಟ್‌ ಸ್ಟೆಟರ್‌, ಫರ್‌ ಜಾಕೆಟ್ಸ್‌, ಪ್ಲಮ್‌ ಫ್ರೊಸ್ಟ್‌ ಪುಲ್‌ಒವರ್ಸ್‌, ಲೇಡಿಸ್‌ ಪುಲ್‌ಒವರ್ಸ್‌, ಸ್ಲೀವ್‌ ಪುಲ್‌ಓವರ್ಸ್‌, ಕರ್ಲಿಕೌಲ್‌, ರಿವೆರ್ಸಿಬಲ್‌, ವೂಲ್‌ ಸ್ವಿಂಗ್‌ ಕೋಟ್‌, ಡಿಸೈನರ್‌ ವಿಂಟರ್‌ ಶರ್ಟ್ಸ್ ಲೈಟ್‌ವೈಟ್‌ನಲ್ಲಿ ಈಗಾಗಲೇ ಫ್ಯಾಷನ್‌ ಪ್ರಿಯರನ್ನು ಸೆಳೆದಿವೆ.

ಚಳಿಗಾಲದ ಎಥ್ನಿಕ್‌ ಔಟ್‌ಫಿಟ್‌ಗಳಿವು

ವೆಲ್ವೆಟ್‌ ಹಾಗೂ ದಪ್ಪನೆಯ ಫ್ಯಾಬ್ರಿಕ್‌ನ ಸೆಲ್ವಾರ್‌, ಚೂಡಿದಾರ್‌, ಕುರ್ತಾ, ಫುಲ್‌ ಆರ್ಮ್‌ ಸ್ವೆಟರ್‌, ಟಾಪ್ಸ್‌, ಫುಲ್‌ ಒವರ್ಸ್‌, ಕುರ್ತಾ, ಲಾಂಗ್‌ ಸ್ಲೀವ್‌, ಪುಶ್‌ ಬ್ಯಾಕ್‌ ಪ್ಯಾಂಟ್‌ಗಳು ಪ್ರಿಂಟೆಡ್‌ನಲ್ಲಿ ಮಾರುಕಟ್ಟೆಗಳಲ್ಲಿ ರಾರಾಜಿಸುತ್ತಿವೆ.

ಈ ಸುದ್ದಿಯನ್ನೂ ಓದಿ | Kanguva Movie: ಸೂರ್ಯ ಅಭಿನಯದ ಬಹು ನಿರೀಕ್ಷಿತ ‘ಕಂಗುವ’ 6000 ಚಿತ್ರಮಂದಿರಗಳಲ್ಲಿ ರಿಲೀಸ್‌!

ವಿಂಟರ್ವೇರ್‌ ಟಿಪ್ಸ್

ಜಾಕೆಟ್‌ ಬೇಡ ಎನ್ನುವವರು ಲಾಂಗ್‌/ಥೈ ಜಾಕೆಟ್ಸ್‌- ಪುಲ್‌ಒವರ್ಸ್‌ಗಳನ್ನು ಧರಿಸಬಹುದು.
ಹುಡುಗಿಯರು ಲಾಂಗ್‌ಸ್ಕರ್ಟ್‌ದೊಂದಿಗೆ ಜಾಕೆಟ್‌, ಸ್ಲೀವ್‌ಲೆಸ್‌ ಟಾಪ್‌ಗೆ ಜೀನ್ಸ್‌ ಜಾಕೆಟ್‌, ಜೀನ್ಸ್‌ ಪ್ಯಾಂಟ್‌ಗೆ ಫುಲ್‌ ಆರ್ಮ್‌ ಟಾಪ್‌, ಇಲ್ಲವೇ ಲೆದರ್‌ ಥೈ ಜಾಕೆಟ್‌, ಟರ್ಟಲ್‌ನೆಕ್‌ ಪುಲ್‌ ಓವರ್ಸ್‌, ಝಿಪ್‌ ಕೋಟ್‌, ಕಲರ್‌ಫುಲ್‌ ಸ್ಕಾರ್ಫ್‌ ಹೀಗೆ ಮಿಕ್ಸ್‌ ಮ್ಯಾಚ್‌ ಫ್ಯಾಷನ್‌ ಮಾಡಬಹುದು.
ಹುಡುಗಿಯರು ಟ್ರೆಂಡಿಯಾಗಿರುವ ಸ್ಕಾರ್ಫ್ ಬಳಸಬಹುದು.
ಯೂನಿಸೆಕ್ಸ್ ಬ್ಲ್ಯಾಕ್‌ ಟ್ರೆಂಚ್‌ ಕೋಟ್‌ ವಿಂಟರ್‌ ಲುಕ್‌ಗೆ ಸಹಕಾರಿ.
ಲೈಟ್‌ವೈಟ್‌ ಸ್ವೆಟರ್ ಡೆನಿಮ್‌ ಪ್ಯಾಂಟ್‌ ಸ್ಕರ್ಟ್ಸ್ ಜತೆ ಧರಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)