Thursday, 31st October 2024

ಭಾರತ ಭಾವೈಕ್ಯತೆಯ ಭವ್ಯ ತೊಟ್ಟಿಲು: ಯಾಳಗಿ

ಸಿಂಧನೂರು: ನಗರದ ಎ.ಪಿ.ಎಮ.ಸಿಯಲ್ಲಿ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆಯನ್ನು ಉದ್ಘಾಟನೆಗೊಳಿಸಿ ಉಪನ್ಯಾಸಕ ರಮೇಶ್ ಬಾಬು ಯಾಳಗಿ ಮಾತನಾಡಿದರು.

ಉಳಿದ ದೇಶಗಳಿಗಿಂತ ನಮ್ಮ ದೇಶ ವೈಶಿಷ್ಟ್ಯಪೂರ್ಣವಾಗಿದ್ದು.ಅನೇಕ ಜಾತಿ, ಮತ, ಪಂಗಡ, ಧರ್ಮ, ಭಾಷೆಗಳಿದ್ದರೂ ವಿವಿಧತೆಯಲ್ಲಿ ಏಕತೆ ಕಾಣುವ ಭಾರತ ದೇಶ ಒಂದು ಭಾವೈಕ್ಯತೆ ಭವ್ಯ ತೊಟ್ಟಿಲು ಎಂದರು. ಸಂಸ್ಥಾಪಕ ಅಧ್ಯಕ್ಷ ಖ್ಯಾತ ಪ್ರವಚನಕಾರ ಇಬ್ರಾಹಿಮ್ ಸುತಾರ ಅವರು ದೂರವಾಣಿಯ ಮೂಲಕ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಡಾ.ಚನ್ನನಗೌಡ ಪೋಲಿಸ್ ಪಾಟೀಲ, ಅಂಬಯ್ಯ ನುಲಿ, ಪಂಪಯ್ಯಸ್ವಾಮಿ ಸಾಲಿಮಠ, ಜಿ.ಪಂ.ಸದಸ್ಯ ಎನ್ .ಶಿವನಗೌಡ ಗೋರೇಬಾಳ, ಹಿರಿಯ ಸಾಹಿತಿ ಪ್ರೊ.ಶಾಶ್ವತ ಸ್ವಾಮಿ ಮುಕ್ಕುಂದಿಮಠ, ಎಸ್‌.ಎಸ್‌.ಹಿರೇಮಠ, ಶಿವುಕುಮಾರ ಜವಳಿ, ನಗರಸಭೆ ಮಾಜಿ ಉಪಾಧ್ಯಕ್ಷ ನದಿಮುಲ್ಲ, ಯಮನೂರ ನದಾಫ, ರಹಿಮಾನ್ ಶಿಕ್ಷಕರು ಎಚ್.ಶಿವರಾಜ, ಇಸ್ಮಾಲ್‌ ಸಾಬ., ಹೆಚ್‌.ಶರ್ಫುದ್ದಿನ್ ಪೋತ್ನಾಳ, ಶೇಖ್ ಬಷೀರ್ ಎತ್ಮಾರಿ, ದೇವಿಂದ್ರ ಹುಡಾ, ಬೀರಪ್ಪ ಶಂಭೋಜಿ ಇದ್ದರು.