Thursday, 9th January 2025

Yash Love Story: ಸ್ಯಾಂಡಲ್‌ವುಡ್ ಗ್ರೇಟ್ ಪೇರ್ ರಾಮಾಚಾರಿ – ಮಾರ್ಗಿ; ರಾಧಿಕಾಗೆ ಪ್ರಪೋಸ್​ ಮಾಡಲು ಯಶ್ ಎಷ್ಟೆಲ್ಲಾ ಕಷ್ಟಪಟ್ಟಿದ್ರು ಗೊತ್ತಾ?

ಬೆಂಗಳೂರು: ಗೆಳೆತನದಿಂದ ಪ್ರೇಮಕ್ಕೆ ಮತ್ತು ಪ್ರೇಮದಿಂದ ವಿವಾಹಕ್ಕೆ ಬದಲಾದ ಬಹುತೇಕ ಸಿನಿಮಾ ಜೋಡಿಗಳಲ್ಲಿ ಯಶ್(Yash) ಮತ್ತು ರಾಧಿಕಾ(Radhika) ಕೂಡಾ ಇದ್ದಾರೆ. ಮಂಡ್ಯದ ರಾಜಾಹುಲಿಯನ್ನು ತನ್ನ ಮೊಗ್ಗಿನ ಮನಸ್ಸಿನೊಳಗೆ ಬೀಳಿಸಿಕೊಂಡ ಚಂದನವನ(Sandalwood)ದ ಚೆಲುವೆ ರಾಧಿಕಾ. ಇಬ್ಬರೂ ಸಹ ಹೇಳಿ ಮಾಡಿಸಿದ ಜೋಡಿ ಎಂದು ಇಡೀ ಸಿನಿ ರಂಗವೇ ಹಾರೈಸಿದೆ(Yash Love Story).

ಅಷ್ಟೇ ಏಕೆ ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗ ಕೂಡ ಈ ಜೋಡಿಗೆ ಅಭಿಮಾನದ ಆಶೀರ್ವಾದ ಮಾಡಿದ್ದಾನೆ. ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ಈ ಜೋಡಿ ಸೆಲೆಬ್ರೆಟಿಗ ಕಪಲ್ ಗಳ ಪೈಕಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ.

ಸದ್ಯ ಸ್ಯಾಂಡಲ್​​ವುಡ್ ಬ್ಯೂಟಿ ರಾಧಿಕಾ ಪಂಡಿತ್ ತಮ್ಮ ಪತಿ ಯಶ್​ ಬರ್ತ್ ಡೇ ಸೆಲೆಬ್ರೇಷನ್​ ಮೂಡ್​ನಲ್ಲಿದ್ದಾರೆ. ಆದ್ರೆ ಹಲವರಿ ಅಭಿಮಾನಿಗಳಿಗೆ ಮಂಡ್ಯದ ರಾಜಾಹುಲಿಗೂ ಮೊಗ್ಗಿನ ಮನಸ್ಸಿಗೂ ಲವ್ ಆಗಿದ್ದು ಹೇಗೆ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. ಚಂದನವನದ ಚೆಲುವೆ ರಾಧಿಕಾ ಪಂಡಿತ್ ಮನಸ್ಸು ಗೆಲ್ಲೋದ್ದಕ್ಕೆ ರಾಕಿ ಭಾಯ್ ತುಂಬಾನೇ ಕಷ್ಟ ಪಟ್ಟಿದ್ದಾರಂತೆ.

ಹೌದು ರಾಕಿಂಗ್ ಸ್ಟಾರ್ ಯಶ್ ಲವ್ ಸ್ಟೋರಿ ಇಂಟ್ರಸ್ಟಿಂಗ್ ಆಗಿದೆ. ಸೀರಿಯಲ್ ಲೋಕದಿಂದಲೂ ಇವರ ಪರಿಚಯ ಇದ್ದೇ ಇದೆ. ಆದರೆ, ಲವ್ ಅಂತ ಬಂದ್ರೆ, ಮದುವೆ ಆಗೋ ಮುಂಚಿನ ಐದು ವರ್ಷದಿಂದಲೇ ಶುರು ಆಗಿದೆ. ಆದರೆ, ಇದು ಯಾರಿಗೂ ತಿಳಿದಿರಲೇ ಇಲ್ಲ. ಕಾರಣ, ಅಷ್ಟೊಂದು ಸೀಕ್ರೆಟ್ ಆಗಿಯೇ ಇವರ ಲವ್ ಇತ್ತು. ಅದನ್ನ ಅಷ್ಟೇ ಡಿಗ್ನಿಫೈಡ್ ಆಗಿಯೇ ಇವರು ಇಟ್ಟುಕೊಂಡಿದ್ದರು. ಸುಮ್ನೆ ಎಲ್ಲಿ ಬೇಕೋ ಅಲ್ಲಿ ಓಡಾಡ್ತಿರಲಿಲ್ಲ. ಜೊತೆಯಾಗಿ ಹೆಚ್ಚು ಕಾಣಿಸಿಕೊಳ್ಳುತ್ತಲೂ ಇರಲಿಲ್ಲ. ಅಷ್ಟೇ ಯಾಕೆ? ಊರಿಗೆ ಗೊತ್ತಾಗೋ ಹಾಗೆ ಪ್ರಪೋಸ್ ಕೂಡ ಮಾಡಿಲಿಲ್ಲ. ತೀರಾ ಸಿಂಪಲ್ ಆಗಿಯೇ ಯಶ್ ತಮ್ಮ ಪ್ರೀತಿಯ ಸಿಂಡ್ರೆಲಾಗೆ ಪ್ರೀತಿಯನ್ನ ಹೇಳಿಕೊಂಡಿದ್ದರು.

ಫೋನ್‌ನಲ್ಲಿಯೇ ಪ್ರೇಮ ನಿವೇದನೆ

ರಾಕಿಂಗ್ ಸ್ಟಾರ್ ಯಶ್ ಲವ್ ಸ್ಟೋರಿ ಇಂಟ್ರಸ್ಟಿಂಗ್ ಆಗಿದೆ. ಸೀರಿಯಲ್ ಲೋಕದಿಂದಲೂ ಇವರ ಪರಿಚಯ ಇದ್ದೇ ಇದೆ. ಆದರೆ, ಲವ್ ಅಂತ ಬಂದ್ರೆ, ಮದುವೆ ಆಗೋ ಮುಂಚಿನ ಐದು ವರ್ಷದಿಂದಲೇ ಶುರು ಆಗಿದೆ. ಆದರೆ, ಇದು ಯಾರಿಗೂ ತಿಳಿದಿರಲೇ ಇಲ್ಲ. ಕಾರಣ, ಅಷ್ಟೊಂದು ಸೀಕ್ರೆಟ್ ಆಗಿಯೇ ಇವರ ಲವ್ ಇತ್ತು. ಅದನ್ನ ಅಷ್ಟೇ ಡಿಗ್ನಿಫೈಡ್ ಆಗಿಯೇ ಇವರು ಇಟ್ಟುಕೊಂಡಿದ್ದರು. ಸುಮ್ನೆ ಎಲ್ಲಿ ಬೇಕೋ ಅಲ್ಲಿ ಓಡಾಡ್ತಿರಲಿಲ್ಲ. ಜೊತೆಯಾಗಿ ಹೆಚ್ಚು ಕಾಣಿಸಿಕೊಳ್ಳುತ್ತಲೂ ಇರಲಿಲ್ಲ. ಅಷ್ಟೇ ಯಾಕೆ? ಊರಿಗೆ ಗೊತ್ತಾಗೋ ಹಾಗೆ ಪ್ರಪೋಸ್ ಕೂಡ ಮಾಡಿಲಿಲ್ಲ. ತೀರಾ ಸಿಂಪಲ್ ಆಗಿಯೇ ಯಶ್ ತಮ್ಮ ಪ್ರೀತಿಯ ಸಿಂಡ್ರೆಲಾಗೆ ಪ್ರೀತಿಯನ್ನ ಹೇಳಿಕೊಂಡಿದ್ದರು. ಆ ಒಂದು ದಿನ ಫೋನ್‌ನಲ್ಲಿಯೇ ಐ ಲವ್ ಯುವ ಅಂತ ಹೇಳಿದ್ದರು.

ಆದರೆ, ಇವರ ಪ್ರೀತಿಯ ದಿನಗಳಿಗೆ ಕೇವಲ ಐದು ವರ್ಷದ ಕಥೆ ಇದೆ. ಮದುವೆ ಮುಂಚಿನ ಐದು ವರ್ಷಗಳಲ್ಲಿ ಇವರು ರಿಲೇಷನ್‌ಶಿಪ್‌ ಅಲ್ಲಿದ್ದರು. ಆದರೆ, ಇವರು ಅದಕ್ಕೂ ಮೊದಲೇ ಪರಿಚಯ ಇದ್ದರು. ಮೊಗ್ಗಿನ ಮನಸು ಚಿತ್ರ ಮಾಡೋ ಮೊದಲೇ ಇವರು ಪರಿಸ್ಪರ ಪರಿಚಯ ಇದ್ದರು. ಆದರೆ, ಲವ್ ಅಂತ ಬಂದಾಗ ಮದುವೆ ಮುಂದಿನ ಐದು ವರ್ಷದಿಂದಲೇ ಇವರು ಲವ್ ಶುರು ಆಗಿತ್ತು.

ಮೊದಲು ಪ್ರಪೋಸ್ ಮಾಡಿದ್ದ ರಾಕಿ ಭಾಯ್ ಯಶ್

ಲವ್ ಅಂದ್ಮೇಲೆ ಮೊದಲು ಯಾರಾದ್ರೂ ಒಬ್ರು ಪ್ರಪೊಸ್ ಮಾಡಲೇಬೇಕಾಗುತ್ತದೆ. ಹಾಗೆ ರಾಧಿಕಾ-ಯಶ್ ವಿಚಾರದಲ್ಲಿ ಮೊದಲು ಈ ಒಂದು ಪ್ರೇಮ ನಿವೇದನೆಯನ್ನ ಮೊದಲು ಯಾರು ಮಾಡಿದ್ರು ಅನ್ನುವ ಪ್ರಶ್ನೆ ಬರುತ್ತದೆ. ಆ ಲೆಕ್ಕದಲ್ಲಿ ಮೊದಲು ರಾಕಿ ಭಾಯ್ ಯಶ್ ಪ್ರಪೋಸ್ ಮಾಡಿದ್ದಾರೆ.

ಆದರೆ, ಅದು ತುಂಬಾನೆ ಸಿಂಪಲ್ ಆಗಿತ್ತು. ಅದೆಷ್ಟು ಸಿಂಪಲ್ ಅಂದ್ರೆ, ಒಂದು ದಿನ ಫೋನ್‌ನಲ್ಲಿಯೇ ಯಶ್ ಪ್ರಪೋಸ್ ಮಾಡಿದ್ದರು. ಅಷ್ಟು ಬಿಟ್ರೆ, ವಿಶೇಷವಾಗಿ ಪ್ರಪೋಸ್ ಅಂತ ಏನು ಇರಲಿಲ್ಲ. ಆದರೆ, ಈ ಪ್ರಪೋಸ್ ಮಾಡೋ ವಿಚಾರದಲ್ಲಿ ರಾಧಿಕಾ ಅವರಿಗೆ ಬೇಸರ ಇತ್ತು.

ರಾಮಾಚಾರಿ ಚಿತ್ರದಲ್ಲಿ ಸ್ಪೆಷಲ್ ಸೀನ್

ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಒಂದು ಸೀನ್ ಇದೆ. ಇದು ಪ್ರೇಮ ನಿವೇದನೆಯ ವಿಶೇಷ ದೃಶ್ಯವೇ ಆಗಿತ್ತು. ಇದನ್ನ ಇಡೋಕೆ ಕಾರಣವೂ ಇತ್ತು. ಹೌದು, ನಿಜ ಜೀವನದಲ್ಲಿ ಯಶ್ ತುಂಬಾನೆ ಸಿಂಪಲ್ ಆಗಿಯೇ ರಾಧಿಕಾ ಅವರಿಗೆ ಪ್ರಪೋಸ್ ಮಾಡಿದ್ದರು. ಹಾಗಾಗಿಯೇ ಈ ಒಂದು ದೃಶ್ಯವನ್ನ ಇಟ್ಟಿದ್ದರು.

ಈ ಒಂದು ವಿಚಾರನ್ನ ಎಂಗೇಜ್‌ಮೆಂಟ್ ಆದ ಬಳಿಕ ಮೀಡಿಯಾ ಮುಂದೇನೆ ಹೇಳಿಕೊಂಡಿದ್ದರು. ನಿಜ ಜೀವನದಲ್ಲಿ ತುಂಬಾನೆ ಸಿಂಪಲ್ ಆಗಿಯೇ ಪ್ರಪೋಸ್ ಮಾಡಿದ್ದೇನೆ. ಅದಕ್ಕಾಗಿಯೇ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ವಿಶೇಷವಾಗಿಯೇ ಒಂದು ಲವ್ ಪ್ರಪೋಸಲ್ ಸೀನ್ ಇತ್ತು ಅಂತಲೇ ಯಶ್ ಹೇಳಿಕೊಂಡಿದ್ದರು.

ಗೋವಾದಲ್ಲಿ ರಿಸೆಪ್ಷನ್-ಬೆಂಗಳೂರಿನಲ್ಲಿ ಮದುವೆ

ರಾಧಿಕಾ ಪಂಡಿತ್ ಮತ್ತು ಯಶ್ ಮದುವೆ ಬೆಂಗಳೂರಿನಲ್ಲಿ ಆಗಿದೆ. ರೇಸ್ ಕೋರ್ಸ್ ರಸ್ತೆ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿಯೇ ಅದ್ಭುತವಾದ ಸೆಟ್‌ ಅನ್ನೇ ಹಾಕಲಾಗಿತ್ತು. ರಾಧಿಕಾ ಪಂಡಿತ್ ಕಲ್ಪನೆಯಂತ ಇಲ್ಲೊಂದು ಮಂಟಪ್ಪ ನಿರ್ಮಾಣ ಆಗಿತ್ತು. ಅರುಣ್ ಸಾಗರ್ ಕಲ್ಪನೆಯಲ್ಲಿಯೇ ಈ ಒಂದು ಮಂಟಪ್ಪ ರೆಡಿ ಆಗಿತ್ತು.

ಈ ಮಂಟಪದಲ್ಲಿಯೇ ಇವರ ಮದುವೆ ಆಗಿತ್ತು. ಪ್ಯಾಲೆಸ್‌ಗ್ರೌಂಡ್‌ನಲ್ಲಿ ಅತಿದೊಡ್ಡ ಸ್ಟೇಜ್ ನಿರ್ಮಾಣ ಮಾಡಲಾಗಿತ್ತು. ಅಭಿಮಾನಿಗಳಿಗೋಸ್ಕರವೇ ಈ ಒಂದು ವ್ಯವಸ್ಥೆ ಮಾಡಲಾಗಿತ್ತು. ಜೋಡಿಯಾಗಿಯೇ ಬಂದು ತಮ್ಮ ಅಭಿಮಾನಿಗಳನ್ನ ಇವರು ಭೇಟಿ ಆಗಿದ್ದರು.

ಆದರೆ, ರಿಸೆಪ್ಷನ್ ಅಂತ ಬಂದ್ರೆ ಅದು ಗೋವಾದಲ್ಲಿಯೇ ಆಗಿತ್ತು. ಕಾರಣ, ಗೋವಾ ರಾಧಿಕಾ ಪಂಡಿತ್ ಅವರ ಅಜ್ಜಿಮನೆನೂ ಆಗಿತ್ತು. ಹಾಗಾಗಿಯೇ ಇಲ್ಲಿ ರಿಸೆಪ್ಷನ್ ಪ್ಲಾನ್ ಆಗಿತ್ತು ಅಂತಲೇ ಹೇಳಬಹುದು. ಒಟ್ಟಾರೆ, ಲವ್ ಸ್ಟೋರಿ ಅಂತ ಬಂದ್ರೆ, ಇಲ್ಲಿ ರಾಧಿಕಾ ಪಂಡಿತ್ ಮತ್ತು ಯಶ್ ಲವ್ ಸ್ಟೋರಿನೂ ಸದಾ ವಿಶೇಷವಾಗಿಯೇ ಕಾಣಿಸುತ್ತದೆ.

ಈ ಸುದ್ದಿಯನ್ನು ಓದಿ: Yash Birthday: ಬಸ್ ಡ್ರೈವರ್ ಪುತ್ರ, ನಟ ‘ರಾಕಿಂಗ್ ಸ್ಟಾರ್’ ಯಶ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ; ಇದು ಸಾಧನೆ ಅಂದ್ರೆ!

Leave a Reply

Your email address will not be published. Required fields are marked *