ಸ್ಯಾಂಡಲ್‌ವುಡ್‌ನ (Sandalwood) ಸೂಪರ್‌ಸ್ಟಾರ್ ಜೋಡಿ ಯಶ್ (Yash) ಹಾಗೂ ರಾಧಿಕಾ ಪಂಡಿತ್ (Radhika Pandit) ವಿವಾಹ ವಾರ್ಷಿಕೋತ್ಸವದ (Marriage Anniversary) ಸಂಭ್ರಮದಲ್ಲಿದ್ದಾರೆ. ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ (ಡಿ.9) 8 ವರ್ಷಗಳಾಗಿವೆ. ಅದೆಷ್ಟೇ ಬ್ಯುಸಿಯಾಗಿದ್ದರೂ, ಕೌಟುಂಬಿಕ ಜೀವನವನ್ನು ಈ ಜೋಡಿ ಅಷ್ಟೇ ಖುಷಿ ಖುಷಿಯಾಗಿ ನಿಭಾಯಿಸುತ್ತಿದ್ದಾರೆ.
8ನೇ ವಿವಾಹ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ರಾಧಿಕಾ ಪಂಡಿತ್ ತನ್ನ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ಪತಿ ರಾಕಿಂಗ್ ಸ್ಟಾರ್ ಯಶ್‌ಗೆ ಥ್ಯಾಂಕ್ಯೂ ಕೂಡ ಹೇಳಿದ್ದಾರೆ. ರಾಧಿಕಾ ಪಂಡಿತ್ ಹಾಗೂ ಯಶ್ ಜೊತೆಯಿರುವ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
8ನೇ ವಿವಾಹ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಫುಲ್ ಖುಷಿಯಾಗಿದ್ದಾರೆ. ಹೀಗಾಗಿ ಇನ್‌ಸ್ಟಾಗ್ರಾಂನಲ್ಲಿ ಪತಿ ಯಶ್ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದು, ನಾಲ್ಕು ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ನಾವಿಬ್ಬರೂ ಹೀಗೆನೇ.. ನಾನು ಸ್ವಲ್ಪ ಫಿಲ್ಮಿ, ನಾವು ಸ್ವಲ್ಪ ತಮಾಷೆ ಅಂತ ಅನಿಸಬಹುದು, ಸ್ವಲ್ಪ ಆಧ್ಯಾತ್ಮಿಕ ಅಂತ ಅನಿಸಬಹುದು, ಸ್ವಲ್ಪ ಗಂಭೀರ ಅಂತ ಅನಿಸಬಹುದು. ಆದರೆ, ಸಿಕ್ಕಾಪಟ್ಟೆ ರಿಯಲ್ ಆಗಿದ್ದೇವೆ. ಈ 8 ವರ್ಷಗಳ ವೈವಾಹಿಕ ಜೀವನವನ್ನು ಮ್ಯಾಜಿಕಲ್ ಅನಿಸಿದರೂ ರಿಯಲ್ ಮಾಡಿದ್ದಕ್ಕೆ ಧನ್ಯವಾದಗಳು’ ಎಂದು ಹೇಳಿದ್ದಾರೆ.
ಪತಿಯ ಜೊತೆಗಿನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್, ಇಬ್ಬರು ಪರ್ಫೆಕ್ಟ್ ವ್ಯಕ್ತಿಗಳು ಒಟ್ಟಿಗೆ ಸೇರಿದಾಗ ಅದು ದಾಂಪತ್ಯವಲ್ಲ, ಈ ಇಬ್ಬರು ವಿಭಿನ್ನ ಆಲೋಚನೆಯ ವ್ಯಕ್ತಿಗಳು ಪರಸ್ಪರ ಬಿಟ್ಟುಕೊಡದೆ ಬಾಳುವುದೇ ನಿಜವಾದ ದಾಂಪತ್ಯ. ಹ್ಯಾಪಿ 8th ಮೈ ಡಿಯರ್ ಎಂದು ರಾಧಿಕಾ ಪಂಡಿತ್ ಬರೆದಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಕಿರುತೆರೆಯಿಂದಲೇ ಲೈಮ್ ಲೈಟ್‌ಗೆ ಬಂದವರು. ರಾಧಿಕಾ ಪಂಡಿತ್ ಮೊದಲು ಶೂಟಿಂಗ್ ಸೆಟ್ಟಿನಲ್ಲಿ ಯಶ್ ನೋಡಿದ್ದರು. ಆಗ ಯಶ್ ಮಾತಾಡಿಸಲು ಪ್ರಯತ್ನ ಪಟ್ಟಿದ್ದರು. ಆ ವೇಳೆ ಯಶ್‌ಗೆ ಸಿಕ್ಕಾಪಟ್ಟೆ ಜಂಬ ಇದೆ ಎಂದುಕೊಂಡಿದ್ದರು. ಇಬ್ಬರೂ ಒಟ್ಟಿಗೆ ಕೆಲಸ ಮಾಡೋಕೆ ಶುರು ಮಾಡಿದ ಬಳಿಕ ಸ್ನೇಹ ಬೆಳೆದಿತ್ತು. ಅದೇ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಪ್ರೇಮ ಪಕ್ಷಿಗಳಾಗಿದ್ದ ಈ ಜೋಡಿ ಡಿಸೆಂಬರ್ 9, 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.
ಇದನ್ನೂ ಓದಿ: Delhi Poster War: ದಿಲ್ಲಿಯಲ್ಲಿ ಶುರುವಾಯ್ತು ಪೋಸ್ಟರ್ ವಾರ್! ʻಪುಷ್ಪʼ ಸ್ಟೈಲ್‌ನಲ್ಲಿ ಆಪ್-ಬಿಜೆಪಿ ನಾಯಕರು ಪೋಸ್!
ರಾಧಿಕಾ ಪಂಡಿತ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾದಿಂದ ದೂರ ಉಳಿದಿದ್ದಾರೆ. ಮದುವೆ ಬಳಿಕ ಕೇವಲ ಒಂದೇ ಸಿನಿಮಾ ‘ಆದಿ ಲಕ್ಷ್ಮಿ ಪುರಾಣ’ದಲ್ಲಿ ಕಾಣಿಸಿಕೊಂಡಿದ್ದರು. ರಾಕ್‌ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅಲ್ಲಿಂದ ಮತ್ತೆ ರಾಧಿಕಾ ಪಂಡಿತ್ ಬಣ್ಣ ಹಚ್ಚಿಕೊಂಡಿಲ್ಲ. ಹೀಗಾಗಿ ಮುಂದೆ ರಾಧಿಕಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಅವರ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಸಿನಿಮಾದಲ್ಲಿ ನಟಿಸೋಕೆ ಅದ್ಯಾವಾಗ ಗ್ರೀನ್ ಸಿಗ್ನಲ್ ಕೊಡುತ್ತಾರೋ ಗೊತ್ತಿಲ್ಲ. ಸದ್ಯಕ್ಕಂತೂ ಆ ಸುಳಿವು ಇಲ್ಲ.