Monday, 16th September 2024

ಲಾಹೋರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಆಲಿಯಾ ನೀಲಂ ನೇಮಕ

ಲಾಹೋರ್: ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಆಲಿಯಾ ನೀಲಂ ಅವರು ನೇಮಕಗೊಂಡಿದ್ದು, ಆ ಮೂಲಕ ಆಲಿಯಾ ನೀಲಂ ಅವರು ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ನೇಮಕಾತಿಗೆ ಅನುಮೋದನೆ ನೀಡಿದ್ದಾರೆ. ಆಲಿಯಾ ನೀಲಂ ಅವರ ನೇಮಕವನ್ನು ದೃಢಪಡಿಸಿದ ಪಾಕಿಸ್ತಾನದ ಕಾನೂನು ಸಚಿವಾಲಯವು ಅಧಿಸೂಚನೆ ಹೊರಡಿಸಿದ್ದು, “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಸಂವಿಧಾನದ 193 ನೇ ವಿಧಿಯ ಅಡಿಯಲ್ಲಿ […]

ಮುಂದೆ ಓದಿ